ಮೊದಲು ಕನ್ನಡಿಗರಿಗೆ ಕನ್ನಡ ಕಲಿಸಿ

ಮೊದಲು ಕನ್ನಡಿಗರಿಗೆ ಕನ್ನಡ ಕಲಿಸಿ

೧. ವಿದ್ಯಾವಂತ ಕನ್ನಡಿಗರಾದ ನಮಗೆ ಸರಳವಾಗಿ ನಾಲ್ಕು ವಾಕ್ಯ ತಪ್ಪಿಲ್ಲದೆ ಬರೆಯಲು ಬರುವದಿಲ್ಲ ಎನ್ನುವದು ನಾಚಿಕೆಗೇಡಿನ ವಿಚಾರ .
೨. ಮೊದಲು ಕನ್ನಡಿಗರಿಗೆ ಕನ್ನಡ ಕಲಿಸಿ .
೩. ಕನ್ನಡಕ್ಕೆ ಸಾವಿಲ್ಲ . ಕಡೇ ಪಕ್ಷ ಜಗತ್ತಿನಲ್ಲಿ ಇಂಗ್ಲೀಷ್ ಇರುವವರೆಗೆ ಕನ್ನಡ ಭಾಷೆ ಇದ್ದೇ ಇರುತ್ತದೆ . ಕನ್ನಡಿಗರಿಗೆ ಭಯ ಬೇಡ.

ಇವು ಈ ವಾರದ ಸುಧಾ ( ೧.ನವಂಬರ್. ೨೦೦೭) ದಲ್ಲಿ ಬಂದಿರುವ , ಕನ್ನಡ ಕುರಿತಾದ ಲೇಖನಗಳಲ್ಲಿನ ವಿಷಯ .
ಈ ಸಂಚಿಕೆಯಲ್ಲಿ ’ಇಂಗ್ಲೀಷ್ ಭಾಷೆ ಎತ್ತ ಸಾಗಿದೆ ? ’ ಎಂಬ ಬರಹವೂ , ’ನಾನೂ ಕನ್ನಡ ಪಾಸಾದೆ’ ಎಂಬ ಕನ್ನಡಿಗನೊಬ್ಬನ ಅನುಭವವೂ , ’ಕನ್ನಡ ಜಗತ್ತು - ಅರ್ಧ ಶತಮಾನ ’ ಎಂಬ ಪುಸ್ತಕದ ಕುರಿತೂ ಬಂದಿದೆ. ಈ ಪುಸ್ತಕವನ್ನು ಮಯೂರದಲ್ಲಿನ ’ಪದಗತಿ’ ಅಂಕಣಕಾರ, ಭಾಷಾಶಾಸ್ತ್ರಜ್ಞ ಶ್ರೀ ಕೆ.ವಿ.ನಾರಾಯಣ ಅವರು ಬರೆದಿದ್ದಾರೆ .

ಈ ಎಲ್ಲವನ್ನೂ ಸುಧಾದ ಅಂತರ್ಜಾಲ ತಾಣ www.sudhaezine.com ನಲ್ಲಿಯೂ ಓದಬಹುದು .

Rating
No votes yet