ಮೊದಲ ರ್ಯಾಂಕ್ ಬಂದವನೂ ಈಡಿಯಟ್!
ಮೂರು ಮೂರ್ಖರು ಸಿನೆಮಾ ನೋಡದ ಬುದ್ಧಿವಂತರು ಯಾರೂ ಇಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿಗಳೇ ಖುದ್ದಾಗಿ ಸಿನೆಮಾ ನೋಡಿ ಬಂದ ಮೇಲೆ ಸಾಮ್ರಾಟರಾದ ನಾವು ನಮ್ಮ ಬಳಗದ ಮೂವರು ಸದಸ್ಯರ ಬಗೆಗಿನ ಸಿನೆಮಾ ನೋಡಲು ಹೋದೆವು.
ಸಿನೆಮಾ ಬಗ್ಗೆ ಜಗತ್ತಿನ ಉಳಿದೆಲ್ಲ ಬುದ್ಧಿವಂತರು ಬರೆದಿರುವುದನ್ನು ಓದಿದ ಮೇಲೆ ವಿಶೇಷವಾಗಿ ಬರೆಯುವಂಥದ್ದು ಉಳಿದಿಲ್ಲ. ಆದರೆ ನಾವೊಂದು ತಕರಾರು ತೆಗೆಯಲೇ ಬೇಕಿದೆ. ತರಗತಿಯಲ್ಲಿ ಮೊದಲ ರ್ಯಾಂಕ್ ಬರುವ ಹುಡುಗನನ್ನು ಈಡಿಯಟ್ ಎಂದು ಕರೆಯುವ ಈಡಿಯಟ್ ಶಿಕ್ಷಕ ಯಾವನಿರಲು ಸಾಧ್ಯ? ರ್ಯಾಂಕ್ ಲಿಸ್ಟಿನಲ್ಲಿ ಕಡೆಯ ಎರಡು ಸ್ಥಾನ ಪಡೆದ ನಮ್ಮ ಬಳಗದ ಹೆಮ್ಮೆಯ ಸದಸ್ಯರನ್ನು ಬಾಯ್ತುಂಬ ಈಡಿಯಟ್ ಎಂದು ಕರೆಯಬಹುದು. ಆದರೆ ಪ್ರತಿ ಪರೀಕ್ಷೆಯಲ್ಲಿ ಡೈರೆಕ್ಟರ್ ಸಾಹೇಬ್ರು ಅಮೀರನಿಗೆ ಮೊದಲ ಸ್ಥಾನವನ್ನೇ ಕರುಣಿಸಿದ ಮೇಲೂ ಆತ ಈಡಿಯಟ್ ಎನ್ನಿಸಿಕೊಳ್ಳಲು ಅನರ್ಹ.
ಈ ಬಗ್ಗೆ ನಾವೊಂದು ಹೊಸ ವಿವಾದವೆಬ್ಬಿಸಿ ಟಿವಿ ನ್ಯೂಸಿನಲ್ಲಿ ರಾರಾಜಿಸೋಣ ಎಂದು ಆಲೋಚಿಸಿದೆವು. ಆದರೆ ಚೇತನ್ ಭಗತ್ನಂತೆ ವಿವಾದದಿಂದ ಪಡೆದ ಜನಪ್ರಿಯತೆ ಬಳಸಿ ಒಂದಿಷ್ಟು ಪುಸ್ತಕ ಸಾಗಿ ಹಾಕಲು ನಾವಿನ್ನೂ ಒಂದೇ ಪುಸ್ತಕವನ್ನೂ ಪ್ರಕಟಿಸಿಲ್ಲವಾದ್ದರಿಂದ ಪ್ರತಿಭಟನೆಯ ಕಾವನ್ನು ಎಳನೀರಿನ ತಂಪಲ್ಲಿ ಇಳಿಸಿದೆವು.
Comments
ಉ: ಮೊದಲ ರ್ಯಾಂಕ್ ಬಂದವನೂ ಈಡಿಯಟ್!
ಉ: ಮೊದಲ ರ್ಯಾಂಕ್ ಬಂದವನೂ ಈಡಿಯಟ್!
In reply to ಉ: ಮೊದಲ ರ್ಯಾಂಕ್ ಬಂದವನೂ ಈಡಿಯಟ್! by santhosh_87
ಉ: ಮೊದಲ ರ್ಯಾಂಕ್ ಬಂದವನೂ ಈಡಿಯಟ್!