ಮೊನ್ನೆ ಅಪ್ಪ ಬಂದಿದ್ದ.....!
ನನಗೆ ಅವಗೆ ವರುಷದ ನಂಟು
ವರುಷದಿಂದೀಚೆ.......ಆತ
ಪ್ರೀತಿಯ ತೊಟ್ಟಿಲಲ್ಲಿ
ಸಂಶಯದ ಕೂಸನ್ನಿಟ್ಟು....
ಚಿವುಟಿ.....ಲಾಲಿ ಹಾಡುವ
ಹುಚ್ಚು ಹುಡುಗನಾಗಿ ಬಿಟ್ಟಿದ್ದಾನೆ...!
ಆಗಾಗ ಇಬ್ಬರೂ.....
ನರಳುತ್ತೇವೆ....ನೋವಿನಲ್ಲಿ
ರಾಜಿಯಾದಾಗ ಖುಷಿಯಲ್ಲಿ!!
ಇರುಳು ಕರಗಿ ಹಗಲು ಸೊರಗಿ
ಕಾಲ ಹೀಗೆಯೇ......
ಉರುಳುತ್ತಿದೆ....ಉರುಳಾಗಿ
ತಿಪ್ಪೆ ಕೆದಕುವ ಹುಂಜಗಳಂತೆ..
ಕೆದಕಿದರೆ .... ಸಿಕ್ಕಿರುವುದೆಲ್ಲಾ ಜೊಳ್ಳು !
ಹೇಳಲಾರದ ಮಾತು ಕೊನೆಗೆ ಇಬ್ಬರಲ್ಲೂ
ಉಳಿಯುತ್ತದೆ....!
ಮೊದಮೊದಲು....
ಹರೆಯದ ಲೊಚಗುಡುವ ನಮ್ಮ ಪಿಸು ಮಾತಿಗೆ
ಪಕ್ಕದ ಗೋಡೆಗಳಿಗೆಲ್ಲಾ ಕಿವಿ..!
ನಮ್ಮಷ್ಟಕ್ಕೇ ಮುಜುಗರ...ಆದರೆ
ಧ್ವನಿವರ್ಧಕದಂತಿರುವ ನಮ್ಮ ಈಗಿನ
ಮಾತು ಗೋಡೆಗೂ ಬೇಸರ
"ಜಗಳವಿಲ್ಲದೆ ರಾಜಿಯಿಲ್ಲ " -ಅಪ್ಪನ ಮಾತು ನೆನಪಿಸಿ
ದಿನ ಕಳೆದಿದ್ದೆ...!
ಮೊನ್ನೆ ಅಪ್ಪ ಬಂದಿದ್ದ....!
"ನಿನ್ನ ರೂಂ ಮೇಟ್ ಸರಿಯಿಲ್ಲ" ಎಂದು
ರೂಂ ಬದಲಾಯಿಸಿಕೊಟ್ಟಿದ್ದಾನೆ.
Comments
ಉ: ಮೊನ್ನೆ ಅಪ್ಪ ಬಂದಿದ್ದ.....!
In reply to ಉ: ಮೊನ್ನೆ ಅಪ್ಪ ಬಂದಿದ್ದ.....! by prasannakulkarni
ಉ: ಮೊನ್ನೆ ಅಪ್ಪ ಬಂದಿದ್ದ.....!
ಉ: ಮೊನ್ನೆ ಅಪ್ಪ ಬಂದಿದ್ದ.....!
In reply to ಉ: ಮೊನ್ನೆ ಅಪ್ಪ ಬಂದಿದ್ದ.....! by asuhegde
ಉ: ಮೊನ್ನೆ ಅಪ್ಪ ಬಂದಿದ್ದ.....!
ಉ: ಮೊನ್ನೆ ಅಪ್ಪ ಬಂದಿದ್ದ.....!
In reply to ಉ: ಮೊನ್ನೆ ಅಪ್ಪ ಬಂದಿದ್ದ.....! by santhosh_87
ಉ: ಮೊನ್ನೆ ಅಪ್ಪ ಬಂದಿದ್ದ.....!