ಮೊಬೈಲ್ ನಿಂದಲೇ ಬಿಲ್ ಪಾವತಿಸಿ

ಮೊಬೈಲ್ ನಿಂದಲೇ ಬಿಲ್ ಪಾವತಿಸಿ

ಹೀಗೆ ಗೂಗಲ್ ನಲ್ಲಿ ಆನ್ ಡ್ರೊಯ್ಡ್ ಬಗ್ಗೆ ನೋಡುತ್ತ ಕುಳಿತಾಗ ಈ ಕೆಳಗಿನ ಮಾಹಿತಿ ಸಿಕ್ಕಿತು.ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೀನೆ.
ಗೂಗಲ್ ನ ನೂತನ ಪ್ರಯೋಗ ಸಿಟಿ ಗ್ರೂಪ್ ಮತ್ತು ಮಾಸ್ಟರ್ ಕಾರ್ಡ್ ನ ಜೊತೆಗೆ.ಇನ್ನು ಮುಂದೆ ಆನ್ ಡ್ರೊಯ್ಡ್ ಫೋನ್ ನ ಬಳಕೆದಾರರು ,ಯಾವುದೇ ಅಂಗಡಿಗಳ ಚೆಕ್ ಔಟ್ ಕೌಂಟರ್ ಗಳಲ್ಲಿ ತಮ್ಮ ಬಿಲ್ ಅನ್ನು ಪಾವತಿಸಲು ಫೋನ್ ಅನ್ನು ರೀಡರ್ ನ ಎದುರಿಗೆ  ಅಲುಗಾಡಿಸಿದರೆ  ಸಾಕು.ಈ ಕಾರ್ಯ ಇನ್ನೂ ಮೊದಲ ಹಂತದಲ್ಲಿರುವುದರಿಂದ ಈ ಅಪ್ಲಿಕೇಶನ್ ಬರೆಯುತ್ತಿರುವ ಗೂಗಲ್ ಜೊತೆಗೆ ,ಸಿಟಿ ಗ್ರೂಪ್ ,ಮಾಸ್ಟರ್ ಕಾರ್ಡ್,ಕ್ರೆಡಿಟ್ ಕಾರ್ಡ್ ರೀಡರ್ಸ್ ತಯಾರಿಸುವ  ವೆರಿಫೋನ್ ಸಿಸ್ಟೆಮ್ಸ್ ,ವಾಲ್ ಮಾರ್ಟ್ನ ಮಳಿಗೆ ಜೊತೆಗೆ ಸದ್ಯಕ್ಕೆ ಒಪ್ಪಂದ ಮಾಡಿಕೊಂಡಿವೆ.
ಇದರ ಕಾರ್ಯವೈಖರಿ ಮೇಲ್ನೋಟಕ್ಕೆ  ಬಹಳ ಉತ್ತಮವಾಗಿಯೇ ಕಾಣುತ್ತದೆ.ನಿಮ್ಮಲ್ಲಿ ಆನ್ ಡ್ರೊಯ್ಡ್ ಸ್ಮಾರ್ಟ್ ಫೋನ್ ಇದ್ದಲ್ಲಿ ಈ ಅಪ್ಲಿಕೇಶನ್ಅನ್ನು ಆ ರೀಡರ್ ನ ಮುಂದೆ ತಂದು ಹಿಡಿದರೆ ನಿಮ್ಮ ಬಿಲ್ ಅನ್ನು ಪಾವತಿಸಬಹುದು.ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಇರಬೇಕಾದರೆ ಏನಕ್ಕೆ ಇದೆಲ್ಲ ಅಂತ ಅನಿಸಿದರೆ ,ಮುಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳೇ ಒಂದು ಎಲೆಕ್ಟ್ರೋನಿಕ್ ಕೈ ಚೀಲವಾಗಿ ಉಪಯೋಗಿಸುವಂತಹ ಆಲೋಚನೆ.ಸದ್ಯಕ್ಕೆ ಇನ್ನೂ ಪ್ರಯತ್ನದ ಹಂತದಲ್ಲಿರುವುದರಿಂದ ಇದರ ಸಂಪೂರ್ಣ ಬಳಕೆ ಯಾವುದಾದರೊಂದು ಕಂಪನಿಯ ಮೊಬೈಲ್ ಗೆ  ಅಳವಡಿಸಿ ಗ್ರಾಹಕರಿಗೆ ಬಳಸಲು ಸಜ್ಜುಗೊಳಿಸಲಾಗುತ್ತದೆ.ನಂತರ ಎಲ್ಲ ಆನ್ ಡ್ರೊಯ್ಡ್ ಮೊಬೈಲ್ ಗೆ ತರುವ ಆಲೋಚನೆ ಗೂಗಲ್ ನದ್ದು.

ಉತ್ತಮ ಮಾಹಿತಿಗಾಗಿ ಈ ಲಿಂಕ್ ಅನ್ನು ಬಳಸಿ http://online.wsj.com/article/SB10001424052748703576204576226722412152678.html#
 

Rating
No votes yet