ಮೋಡಾ..ಇಲ್ಲಿ ನೋಡಾ
ಆ ಬಾನ ನೀಲಂಗಳದ ಕೆಳಗಾss
ಬಣ್ಣ ಬಣ್ಣದಾ ಮೋಡಗಳ ಬಳಗಾss
ಓಡುತ್ತಿವೆ ಓಡುತ್ತಿವೆ ಒಂದೊಂದು ಒಂದೊಂದರ ಒಳಗಾss
ಅಪ್ಪಿಕೊಳ್ಳಲವು ತಬ್ಬಿಕೊಳ್ಳಲವು
ಎಂಬ ತವಕ ಪುಳಕ ಈ ರೈತಗಾss
ಅದಕ್ಕೆಂದೆ ಮಾಡವ್ನೆ ಮುಗಿಲತ್ತ ಮೊಗss
ಹೇ ಮೋಡ ಇಲ್ಲಿ ನೋಡ
ನಾವಾಗುವಾ ಬಾರ ಗೆಳೆಯಾ
ನಿನ್ನ ಕರೆತಂದು ನಮ್ಮಟ್ಟಿಗೆ
ಹಸಿರಾಗಿಸಿಕೊಳ್ತೀನಿ ಇಳೆಯಾ
ನಮ್ಮಪ್ಪ ಸೂರ್ಯಪ್ಪ
ನಮ್ಮವ್ವ ಭೂಮವ್ವ
ನಮ್ಮ ಮಾವ ಚಂದ್ರಪ್ಪ
ಅವನ ಮಗಳು ತಾರೆss
ನಿನ್ನ ಕರೆತಂದು ಇಲ್ಲಿಗೇ
ಮಾಡಿಸ್ತೀವಿ ನಿನಗೂ ಅವಳಿಗೂ ಧಾರೆ
ನೀ ಹರಿಸಬಾರಯ್ಯ ವರ್ಷಧಾರೆss
ನೀ ಹರಿಸಬಾರಯ್ಯ ವರ್ಷಧಾರೆss
- ಪ್ರಶಾಂತ್ ಎಂ.ಸಿ.
Rating
Comments
ಉ: ಮೋಡಾ..ಇಲ್ಲಿ ನೋಡಾ