ಮೋದಿ ಮತ್ತು ನವರಾತ್ರಿ ಉಪವಾಸ

ಮೋದಿ ಮತ್ತು ನವರಾತ್ರಿ ಉಪವಾಸ

ನವರಾತ್ರಿ ಉಪವಾಸ ಪ್ರಯುಕ್ತ ಒಬಾಮ ಔತಣಕೂಟಕ್ಕೆ ಮೋದಿ ಗೈರು:-
ಇದಕ್ಕೆ ಪ್ರತಿಕ್ರಿಯೆಗಳು ಹೇಗಿರಬಹುದು.....?

ಕಾಂಗ್ರೆಸ್:ಮೋದಿಗೆ ವಿದೇಶಾಂಗ ನೀತಿಯ ಬಗ್ಗೆ ಜ್ಞಾನವಿಲ್ಲ.ಅವರ ಈ ನಿರ್ಧಾರದಿಂದ ಇಂಡೋ-ಅಮೆರಿಕ ಸಂಬಂಧ ಮತ್ತಷ್ಟು ಹದಗೆಡಲಿದೆ

ಮಾಧ್ಯಮ:ಪ್ರಧಾನಿಗಳು ನವರಾತ್ರಿ ಉಪವಾಸ ಮಾಡಿದ ಹಾಗೆ ರಂಜಾನ್ ಗೂ ಉಪವಾಸ ಮಾಡಲಿ.ಈ ಮೂಲಕ ಜಾತ್ಯತೀತ ತತ್ವದ ಬಗ್ಗೆ ಅವರು ತಮ್ಮ ಬಧ್ಧತೆ ಪ್ರದರ್ಶಿಸಲಿ.

ಬುದ್ಧಿಜೀವಿ:ಮೋದಿ ಒಬ್ಬ ಸಂಪ್ರದಾಯವಾದಿ.ತಮ್ಮ ವೈಯಕ್ತಿಕ ಆಚರಣೆಗಾಗಿ ದೇಶದ ಹಿತಾಸಕ್ತಿಯನ್ನು ಬಲಿ ಕೊಡುತ್ತಿದ್ದಾರೆ.

ಮೋದಿಭಕ್ತ:ಅಂದು ಅಮೆರಿಕ ವೀಸಾ ನಿರಾಕರಿಸಿ ಮೋದಿಜೀಗೆ ಅವಮಾನ ಮಾಡಿತ್ತು.ಇಂದು ಮೋದಿಜೀ ಅವರ ಔತಣಕೂಟಕ್ಕೆ ಗೈರಾಗುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ.

-@ಯೆಸ್ಕೆ

Rating
No votes yet