ಮೌನದ ದ್ವನಿ - ಹಾಗು ಸಂಪದ
'ಸ್ವಾಮಿ ಮೌನದ ದ್ವನಿ ಎಂದರೇನು'
ಅಂಡಾಂಡಬಂಡ ಸ್ವಾಮಿಜಿ ಮೌನವಾಗಿ ಕುಳಿತಿದ್ದರು.
ಎದುರಿಗೆ ಶಿಷ್ಯ ಸಪ್ತಗಿರಿ ಅವರನ್ನೆ ದಿಟ್ಟಿಸಿ ನೋಡುತ್ತ ಕುಳಿತು ಅಷ್ಟೆ ಮೌನವಾಗಿದ್ದರು.ತನ್ನ ಪ್ರಶ್ನೆಗೆ ಅದೇಕೆ ಗುರುಗಳು ಉತ್ತರಿಸುತ್ತಿಲ್ಲ ಅನ್ನುವ ಅನುಮಾನ ಅವರಿಗೆ.
'ತಮ್ಮಾ ನೀನು ನಿಮ್ಮ ಕಂಪ್ಯೂಟರ್ ನಲ್ಲಿ ಸಂಪದ ಎನ್ನುವ ತಾಣಕ್ಕೆ ಸದಾ ಬೇಟಿ ಕೊಡುತ್ತಿರುವೆ ಅಲ್ಲವೆ? ಅಲ್ಲಿ ಹೋಗು ಅಂತಹ ದ್ವನಿಯನ್ನು ಹುಡುಕು ನೋಡೋಣ'
ಎನ್ನುತ್ತ ಸಣ್ಣದಾಗಿ ನಕ್ಕರು.
ಶಿಷ್ಯನಿಗೆ ಗುರುಗಳ ಮರ್ಮ ಅರ್ಥವಾಗಲಿಲ್ಲ. ಸಂಪದದಲ್ಲಿ ದ್ವನಿಯನ್ನು ಹೇಗೆ ಹುಡುಕುವುದು. ಸರಿ ಹೇಗಾದರು ಸರಿ ಗುರುಗಳ ಅಪ್ಪಣೆ ಎನ್ನುತ್ತ, ಮೌನವಾಗಿ ಎದ್ದು ಹೊರಟ ಶಿಷ್ಯ ಮನೆಗೆ ಹೋಗುತ್ತಲೆ ಲ್ಯಾಪ್ ಟಾಪ್ ಎದುರಿಗೆ.
ಸಪ್ತಗಿರಿಗೆ ಗೊತ್ತಾಗಿ ಹೋಗಿತ್ತು, ಸಂಪದದಲ್ಲಿ ಬೇಕಾದಷ್ಟು ಲೇಖನಗಳಿರಬಹುದು. ಆದರೆ 'ದ್ವನಿ' ಎಂಬ ವಸ್ತುವಿರುವುದು 'ಸಂಪದ ಶ್ರಾವ್ಯದಲ್ಲಿ'. ತಿರುವುತ್ತ ಹೋದಂತೆ ಎಷ್ಟೊಂದು ಸಂದರ್ಶನಗಳು.ನಿಸಾರ್ ಅಹಮದ್ ತೇಜಸ್ವಿ ಕಂಬಾರರು ವೈದೀಹಿ ಅವರ ಮಾತುಗಳು ಈಚೆಗೆ ವೆಂಕಟೇಶ ಮೂರ್ತಿ ಹೆಚ್ ಎಸ್ ಅವರ ದ್ವನಿ ಎಲ್ಲ ಕೇಳುತ್ತ ಸಪ್ತಗಿರಿ ಹರ್ಷಿತರಾಗಿ ಸ್ವಾಮಿಗಳನ್ನು ಹುಡುಕಿ ಬಂದರು ಮರುದಿನ.
'ಸ್ವಾಮಿ ಅರ್ಥವಾಯಿತು. ನಿಮ್ಮ ಮಾತು ನಿಜ ಎಷ್ಟೊಂದು ದ್ವನಿಗಳಿವೆ ಸಂಪದದಲ್ಲಿ ಎಲ್ಲರ ದ್ವನಿಯನ್ನು ಕೇಳಿದೆ. ನಮ್ಮ ಜ್ಞಾನ ಹೆಚ್ಚಿಸುವ ಹಿರಿಯ ಕವಿಗಳ ವಾಣಿ, ಎಲ್ಲವು ಸರಿಯೆ ಸ್ವಾಮಿ ಆದರು ಅಡ್ಡೂರುಕೃಷ್ಣರಾವ್ ರವರ ಶೀರ್ಷಿಕೆ ಓದಿರುವೆ ಅದರಲ್ಲಿನ 'ಮೌನದ ಸದ್ದು' ಎಂದರೇನು. ನೀವು ಹೇಳಿದಲ್ಲಿ ಮೌನವಿಲ್ಲ ಬರಿ ದ್ವನಿಯಿದೆ"
ಕರಗದ ಕಿರುನಗೆ ಅಂಡಾಂಡಬಂಡರ ಮುಖಕಮಲದಲ್ಲಿ.
"ತಮ್ಮಾ ನೀನು ಹೇಳುವುದು ನಿಜ ಅಲ್ಲೆಲ್ಲ ದ್ವನಿಯಿದೆ. ಅದು ನಿನ್ನ ಕಿವಿಗಳಿಗೆ ಕೇಳಿಸುವ ದ್ವನಿಯಾಯಿತು. ಆದರೆ ನೀನು ಶ್ರದ್ದೆ ಇಟ್ಟು ಹುಡುಕು, ನೀನು ನೋಡಿದ್ದಲ್ಲದೆ ಬೇರೆ ದ್ವನಿಯು ಇರಬಹುದು" ಎಂದರು.
ಸಪ್ತಗಿರಿ ಈಗ ಗುರುಗಳ ಎದುರಿಗೆ ಲ್ಯಾಪ್ ಟಾಪ್ ತೆಗೆಯುತ್ತ ಅದರಲ್ಲಿಯೆ ಮುಖವಿಟ್ಟು ಮಗ್ನರಾದರು.
ಸಂಪದದ ಆಳ ಆಳಕ್ಕೆ ಇಳಿಯುತ್ತ ನೋಡುತ್ತಿರುವಂತೆ, ಅವರಿಗೆ ಏನೆಲ್ಲ ಕೇಳಲು ಪ್ರಾರಂಬಿಸಿತು. ಸಂಪದ ಪ್ರಾರಂಬದಲ್ಲಿನ ಹಲವು ಕನ್ನಡ ಅಭಿಮಾನದ ದ್ವನಿಗಳು. ಒಂದೆ ಎರಡೆ ಹುಡುಕುತ್ತ ಹೋದಂತೆ ಕನ್ನಡ ವ್ಯಾಕರಣದ ಬಗ್ಗೆ ಸಾಹಿತ್ಯದ ಬಗ್ಗೆ ದೇಶ ವಿದೇಶಗಳಲ್ಲಿನ ಸುದ್ದಿಸಮಾಚಾರಗಳ ಬಗೆಗಿನ ದ್ವನಿಗಳು, ಪ್ರಥಮ ಕನ್ನಡಮ್ಮನ ಬಗೆಗೆ ಕವನ ಮುಂಬಯಿಯಿಂದ ಅದಕ್ಕೆ ಮಾಯ್ಸ ದ್ವನಿಯ ಪ್ರತಿಕ್ರಿಯೆ, ತವಿ ಶ್ರೀನಿವಾಸ ಎಂಬುವರ ಪುಟ್ಟನ ಪದ್ಯಓ. ಎಲ್. ನಾಗಭೂಷಣ ಸ್ವಾಮಿ ಯವರ ಸಂಪದ ಏನುಮಾಡಬಹುದೆಂಬ ಸೂಚನೆಗಳೊಡನೆ ಪ್ರಾರಂಬದ ದ್ವನಿ ಅನಂತ ಕೃಷ್ಣರ ದ್ವನಿ, ಇಸ್ಮಾಯಿಲ್ ಎಂಬುವರು ಅದೇಕೊ ಕನ್ನಡ ಬರಿ ಪುಳಿಚಾರ್ ಬಾಷೆ ಅನ್ನುತ್ತಿರುವ ದ್ವನಿ, ಹೀಗೆ ವರ್ಷ ವರ್ಷಗಳಲ್ಲಿ ಹಲವು ವಾದ ವಿವಾದಗಳು, ಸರಿ ತಪ್ಪುಗಳ ಬಗ್ಗೆ ಚರ್ಚೆಗಳು ಜೊತೆಜೊತೆಗೆ ಹೆಣ್ಣುಮಕ್ಕಳ ಮಾತಿನ ಕಲರವ. ಗಂಬೀರ ಎನ್ನುವ ದ್ವನಿಗಳು. ಸಣ್ಣ ಸಣ್ಣ ವಿಷಯಕ್ಕು ಚರ್ಚೆ ವಾದ ವಿತಂಡವಾದ ಕೂಗಾಟ, ಗಲಾಟೆಗಳು. ಇವರನ್ನು ಸಂಪದದಿಂದ ಹೊರಹಾಕಬೇಕು ಎನ್ನುವ ಮಾತು. ಪುಳಿಯೋಗರೆ ಬಗ್ಗೆ ಬರೆದರು ಅದು ಪುರೋಹಿತಶಾಹಿ ಎಂಬ ಕುಹಕ. ಹೋಗುತ್ತ ಹೋಗುತ್ತ ಸಪ್ತಗಿರಿಯವರ ಕಿವಿಗೆ ಅದೇನೊ ಆಯಿತು. ತಕ್ಶಣ ಸಂಪದದಿಂದ ಹೊರಬಂದರು.
’ಗುರುಗಳೆ ನೀವು ಹೇಳುವುದು ನಿಜ ಸಂಪದದಲ್ಲಿ ಅದೇನು ದ್ವನಿ ಅದೇನು ಕಲರವ, ನನಗಂತು ಕಿವಿಯ ತಮಟೆ ಒಡೆಯುವಂತಾಗಿದೆ, ಈ ದ್ವನಿಗಳನ್ನು ನಾನು ಕೇಳಲಾರೆ ನೀವನ್ನುವುದು ನಿಜ ಸ್ವಾಮಿ, ಅದೇನೊ ಮೌನದಲ್ಲಿಯು ಅದೆಷ್ಟು ದ್ವನಿಗಳು' ಎಂದರು.
'ತಮ್ಮ ಅದೇನು ಅಷ್ಟು ಹೆದರುವೆ ನಿನಗೇನು ಆಗದು ಮುಂದುವರೆಸು ನಿನ್ನ ದ್ವನಿಯ ಅನ್ವೇಷಣೆಯನ್ನು, ಯಾವ ಕೆಲಸವನ್ನು ಪೂರ್ಣಮಾಡದೆ ಅರ್ದದಲ್ಲಿ ಬಿಡಬಾರದು ಅಲ್ಲವೆ' ಎಂದರು
ಸರಿ ಮತ್ತೆ ಸಪ್ತಗಿರಿಯವರು ಸಂಪದವನ್ನು ಒಳಹೊಕ್ಕು ನೋಡಲು ತೊಡಗಿದರು, ಅದೆಂತ ತಾಕಲಾಟದ ದ್ವನಿಗಳು. ಸಂಪದವೆಂದರೆ ಬರಿ ಸಂವಹನವಲ್ಲ ಭಾವನೆಗಳ ತಾಕಲಾಟ ಸಂಪದ ಒಂದುದಿನವಿಲ್ಲದಿದ್ದರು ಇರಲಾರೆ ಎನ್ನುವ ವಿರಹದ ದ್ವನಿ, ಮತ್ತೆಲ್ಲೊ ಮತ್ಯಾರದೊ ಕೊರಗು ನಾನು ಕಷ್ಟ ಪಟ್ಟು ಬರೆದ ಲೇಖವನ್ನು ಯಾರು ಗಮನಿಸಲಿಲ್ಲ ಎನ್ನುವ ಕಣ್ಣೀರ ದ್ವನಿ. ಹಾಗೆ ನೋಡಲು ಕೆಲವರಂತು ಭಾವನೆಗಳ ಉಚ್ರಾಯಸ್ಥಿಥಿಯಿಂದ , ನನ್ನ ಬರಹಕ್ಕೆ ಯಾರು ಪ್ರತಿಕ್ರಿಯೆ ಹಾಕಲಿಲ್ಲವೆಂದು ಜೋರಾಗಿದೆ ದ್ವನಿ ಎತ್ತಿ ಹೇಳುತ್ತಿರುವರು. ಹೊಸಬರಿಗೆ ಪ್ರೋತ್ಸಾಹ ಕೊಡಿ ಎನ್ನುವ ಯಾರದೊ ದ್ವನಿಗಳು. ಮತ್ತೊಬ್ಬರಾರೊ ವಿಚಿತ್ರ ತಮ್ಮ ಲೇಖನಕ್ಕೆ ಪ್ರತಿಕ್ರಿಯೆ ಬರಲಿಲ್ಲ ಎಂಬ ಕಾರಣಕ್ಕೆ ತಾವು ಬರೆದಿದ್ದನ್ನೆಲ ಅಳಿಸಿ ತಾವು ಅಳುತ್ತ ಓದುಗರನ್ನು ಅಳಿಸುತ್ತ ಸಾಗುವರು. ಪಾಪ ಯಾರೊ ಬರೆದಿದ್ದ ಸಂಸ್ಕೃತ ಕವನಕ್ಕೆ ಯಾರೊ ಕೂಗಿ ಅಣಕಿಸುತ್ತಿದ್ದಾರೆ ಇದು ಬರಿ ಗಿಣಿಪಾಠ ಎಂದು, ಯಾವುದೊ ಅಳು, ಯಾವುದೊ ನಗು.ಇದೆಂತ ದ್ವನಿಗಳು. ಮತ್ತೆ ಇದ್ಯಾವುದೊ ಹೆದರಿಸುವ ದ್ವನಿಗಳು ಕೇಳುತ್ತಿರುವಂತೆ ದೆವ್ವದ ನರ್ತನದ ರಿಂಗಣ. ಯಾವುದೋ ಯುದ್ದೋನ್ಮಾನದ ಚೀರಾಟ ಕೇಳುತ್ತ ಕೇಳುತ್ತ ಬೆವತರು ಸಪ್ತಗಿರಿ ಈದ್ವನಿಗಳಿಗೆ.
ಇನ್ನು ಕೇಳಲಾರೆ ಎನ್ನುತ್ತ ಹೊರಗೆ ಬಂದರು.
'ಸ್ವಾಮಿ ಇದೆಂತ ಉನ್ಮಾದ ಆರು ಏಳು ವರ್ಷಗಳ ದ್ವನಿ ಒಮ್ಮೆಲೆ ನನ್ನ ಕಿವಿ ತುಂಬಿದಲ್ಲಿ ನನ್ನ ಕಿವಿಯ ಗತಿಯೇನು. ನನ್ನ ಕಿವಿಯೆಲ್ಲ ಈ ದ್ವನಿಗಳ ಅಘಾತಕ್ಕೆ ಸಿಕ್ಕಿ ಬಳಲಿ ಹೋಯಿತು' ಎನ್ನುತ್ತ ಕುಳಿತರು.
ಅಂಡಾಂಡಬಂಡರು ನಕ್ಕರು
'ತಮ್ಮಾ ಮನಸಿನಂತೆ ಮಹಾದೇವ ಎನ್ನುವ ಮಾತನ್ನು ನೀನು ಕೇಳಿದ್ದೀಯಲ್ಲವೆ. ನಾವು ಏನನ್ನು ಅರಸುತ್ತೇನೊ ಅದೇ ನಮಗೆ ಸಿಕ್ಕುವುದು. ತಥಾಸ್ತುದೇವತೆಗಳ ಕೆಲಸವೆ ಅದು ನೀನು ಏನು ಬಯಸುವೆಯೊ ಅದೇ ನಿನಗೆ ಲಭ್ಯ, ನಿನ್ನ ಮನಸು ಕಲ್ಮಷವಾಗಿದ್ದರೆ ನೀನು ಕೇಳುವ ದ್ವನಿಯು ಅದೇ ಆಗಿರುತ್ತದೆ ಅಲ್ಲವೆ ' ಎಂದರು.
ಸಪ್ತಗಿರಿಯವರಿಗೆ ಅದೇನೊ ಹೊಳೆಯಿತು. ನಗುತ್ತ ಮತ್ತೆ ತಮ್ಮ ಮುಂದಿದ್ದ ಲ್ಯಾಪ್ ಟ್ಯಾಪ್ನಲ್ಲಿ ಸಂಪದ ಎಂಬ ಸಾಹಿತ್ಯದ ಕಾಡನ್ನು ಹೊಕ್ಕರು.
'ಈ ಬ್ರಹ್ಮಜ್ಞಾನಿಗಳ ಮಾತು ನಿಜ ನಾನು ಹೋದ ದಿಕ್ಕೆ ತಪ್ಪಿತ್ತು ಅನ್ನಿಸುತ್ತೆ' ಎನ್ನುತ್ತ ಹೊಸ ಅನ್ವೇಷಣೆ ಪ್ರಾರಂಬಿಸಿದರು, ಎಂತ ವಿಫುಲ ಸಾಹಿತ್ಯಭರಿತ ಈ ಸಂಪದ ಎನ್ನಿಸಿತು. ಮಂಡ್ಯದ ಗಂಡು ಬಾಷೆಯಲ್ಲಿ ಕೇಳಿಸುವ ಇಸ್ಮಾಯಿಲ್ ಬಸ್ಸಿನ ಕಲರವ ಗೌಡಪ್ಪನ ಅಬ್ಬರ ಸೇರಿದಂತ ಹತ್ತು ಹಲವು ನಗೆಯ ದ್ವನಿಗಳು, ಪ್ರತಿಕ್ರಿಯೆಗಳಲ್ಲು ನಗುವಿನ ಪ್ರತಿದ್ವನಿ. ತಾವು ತುಂಬಾ ಗಂಭೀರ ಎಂದು ಕುಳಿತವರು ಸಹ ತಡೆಯದೆ ಜೋರಾಗಿ ನಗುತ್ತಿರುವ ದ್ವನಿ ಕೇಳುತ್ತ ಸಪ್ತಗಿರಿಯವರು ಈಗ ಇದ್ದಕ್ಕಿದಂತೆ ದಿಕ್ಕು ಬದಲಾಯಿಸಿದರು.
ಹತ್ತು ಹಲವು ವೇದಾಂತದ ಭೋದನೆಯ ಸಾಲುಗಳು. ಸರ್ವಜ್ಞನನ್ನೆ ಸರಿಗಟ್ಟುವ ಮೂಡನ ಉವಾಚ, ಪ್ರೀತಿಯ ವೇದಾಂತದ ಭಕ್ತಿಯ ಪ್ರಕೃತಿಯನ್ನು ಕರೆವ ಹತ್ತುಹಲವು ಗೀತೆಗಳನ್ನು ಕೇಳುತ್ತ ಕೇಳುತ್ತ ಸಪ್ತಗಿರಿ ಪರವಶರಾದರು. ನಡುವೆ ಇದ್ಯಾವುದೊ ಕೆಲವು ವಿರಹದ ನೋವಿನ ದ್ವನಿಗಳು. ಹಿಂದಿಯಿಂದ ಕನ್ನಡಕ್ಕೆ ಹರಿದ ಭಾವಗೀತೆಗಳ ಚಿತ್ರಗೀತೆಗಳ ಲಹರಿ, ಸಪ್ತಗಿರಿಗೆ ಎಷ್ಟು ಸಮಯವಾಯಿತೊಅರಿವೆ ಆಗಲಿಲ್ಲ.
ನಡುವೆ ಒಂದು ವಿಚಿತ್ರ ಕಂಡರು ಸಪ್ತಗಿರಿ ಮಾಯ್ಸ ಎನ್ನುವರ ದ್ವನಿ ಅವರಿಗೆ ಮೊದಲಿಗೆ ಹೆಣ್ಣುದ್ವನಿಯಂತೆ ಕೇಳಿಸುತ್ತ ಇತ್ತು ಅದೇಕೊ ಅವರನ್ನು ಹೆಣ್ಣು ಎಂದು ಭಾವಿಸಿದ್ದೆ, ಆದರೆ ಅದೆಲ್ಲೊ ಪ್ರತಿಕ್ರಿಯೆ ಒಂದರಲ್ಲಿ ಅವರು ಹೆಣ್ಣಲ್ಲ ಗಂಡು ಎಂದು ತಿಳಿಯಿತು ಹೆಸರು ಮಹೇಶನೊ ಮಹಂತೇಶನೊ ಮರೆಯಿತು ಆಗಿನಿಂದ ಮಾಯ್ಸ ದ್ವನಿ ಗಂಡು ದ್ವನಿಯಂತೆ ಕೇಳಿಸಲಾರಂಬಿಸಿತು. ಇದೇನು ವಿಚಿತ್ರ ಹೆಣ್ಣೆಂದು ಭಾವಿಸುವಾಗ ಹೆಣ್ಣುದ್ವನಿ ಅದೇ ವ್ಯಕ್ತಿ ಗಂಡು ಎಂದು ಅರಿವಾದಾಗ ಗಂಡು ದ್ವನಿ ಕೇಳಿಸಿತ್ತು ಅಲ್ಲಿಗೆ ಗಂಡು ಹೆಣ್ಣು ಬೇದವಿರುವುದು ದ್ವನಿಯಲ್ಲಿ ಅಲ್ಲ ನಮ್ಮ ಭಾವನೆಗಳಲ್ಲಿ ಎನ್ನುವ ದರ್ಶನ ಸಪ್ತಗಿರಿಗೆ ಆಯಿತು.
ನಿಜ ಭಾವದಂತೆ ಬದುಕು, ಮನಸಿನಂತೆ ಸುತ್ತಲಿರುವರ ಮಾತು ಅನಿಸಿತ್ತು ಸಪ್ತಗಿರಿಗೆ. ಈ ಜಗವನ್ನು ದೂಷಿಸುವ ಮುಂಚೆ ನಮ್ಮ ನಡೆನುಡಿಗಳನ್ನು ಬದಲಿಸಿಕೊಳ್ಳಬೇಕೆಂದು ಒಂದು ಕವನವು ಹೊಳೆಯಿತು.
ಸಂಪದದ ದ್ವನಿ ಕಣಜದಿಂದ ಹೊರಬಂದ ಸಪ್ತಗಿರಿಗೆ ಮಾತನಾಡಲೆ ಮನಸಿರಲಿಲ್ಲ. ಆದರು ಅವರು
"ಸ್ವಾಮಿ ನಿಮ್ಮ ಮಾತು ನಿಜ ಸಂಪದಕ್ಕೆ ಅದೆಷ್ಟು ಮುಖ. ಅದೆಷ್ಟು ದ್ವನಿ ನಾವು ಕೇಳಿದಷ್ಜು ಮುಗಿಯದು ಅಲ್ಲವೆ ಇಲ್ಲಿನ ಎಲ್ಲ ದ್ವನಿಗಳು ಕೇಳಿ ಮುಗಿಸಿದೆ ಸ್ವಾಮಿ ನನ್ನ ಜನ್ಮ ಸಾರ್ಥಕವಾಯಿತು" ಎನ್ನುತ್ತ ಕೈಮುಗಿದರು.
ಅಂಡಾಂಡಬಂಡರು
"ಸಪ್ತಗಿರಿ, ಇಲ್ಲೆ ನೋಡು ಮನುಷ್ಯ ತನ್ನ ಲೆಕ್ಕಚಾರದಲ್ಲಿ ತಪ್ಪುವುದು, ನಾನು ನೋಡಿದ್ದು ಕೇಳಿದ್ದು ಓದಿದ್ದು ಮುಗಿಯಿತು ಅಂದುಕೊಂಡಾಗ ಅವನ ಬೆಳವಣಿಗೆ ನಿಂತು ಹೋಗುತ್ತದೆ, ಜ್ಞಾನ ಎಂಬುವುದು ಎಂದಿಗು ತುಂಬದ ಕಣಜ, ಹುಡುಕುವಿಕೆ ನಿಂತ ತಕ್ಷಣ ನಿಂತು ಹೋಗುವ ಅಹಂಕಾರ ಸ್ವರೂಪ, ಅದರಿಂದ ಎಂದಿಗು ನಿನಗೆ ಎಲ್ಲವು ತಿಳಿಯಿತು ಎಂದು ಭಾವಿಸದಿರು, ನಿನ್ನ ಅನ್ವೇಷಣೆ ಎಂದು ನಿಲ್ಲದಿರಲಿ" ಎಂದರು.
ಸಪ್ತಗಿರಿಯವರ ಕಣ್ಣಲ್ಲಿ ನೀರುತುಂಬಿತ್ತು, ಇಂದು ಅದೇನೊ ಅಂಡಾಂಡಬಂಡರು ಪೂರ್ಣ ಸ್ವರೂಪದಿಂದ ಅವರಿಗೆ ಉಪದೇಶ ಕೊಡುತ್ತಿದ್ದಾರೆ ಅನ್ನಿಸಿ ತಲೆಬಾಗಿದರು. ಅವರ ಚಿತ್ತದಲ್ಲಿ ಏನಿದೆಯೊ ಯಾವ ಚಿತ್ರವಿದೆಯೊ ಎಂದು ಅಂದುಕೊಳ್ಳುತ್ತ, ಸಂಪದದ ಬಾಗಿಲಿನ ಮೂಲಕ ಮತ್ತೆ ಒಳಹೊಕ್ಕರು
ಒಳಬರುವಾಗಲೆ ಸಪ್ತಗಿರಿಗೆ ಅರ್ಥವಾಗಿತ್ತು, ತಾನು ಬರಿ ಮಾತುಗಳಷ್ಟೆ ದ್ವನಿಯನ್ನು ಹೊರಡಿಸುತ್ತೆ ಅನ್ನುತ್ತಾ ಭಾವಿಸಿದ್ದು ತಪ್ಪು, ಭಾವನೆಗಳನ್ನು ಚಿತ್ರದಲ್ಲಿಯು ಸಹ ಅಡಗಿಸಿ ಇಡಬಹುದು. ಅಂದುಕೊಳ್ಳುವಾಗಲೆ ಅದ್ಯಾರೊ ಪ್ರತಿಕ್ರಿಯೆಯಲ್ಲಿ ಕೂಗುತ್ತಿದ್ದಾರೆ
"ಒಂದು ಚಿತ್ರ ನೂರು ಕತೆಗಳನ್ನು ಹೇಳಬಲ್ಲದು"
ನಿಜ ಅನ್ನಿಸಿತು, ಮನುಷ್ಯ ತನ್ನ ದ್ವನಿಯನ್ನು ಬರಹದಲ್ಲಷ್ಟೆ ಅಲ್ಲ , ವರ್ಣಗಳಲ್ಲಿ ಚಿತ್ರಗಳಲ್ಲಿ, ಒಂದೆ ಒಂದು ಗೆರೆಯಲ್ಲಿ ಸಹ ಅಡಗಿಸಿ ಇಡಬಲ್ಲ ಅಂದುಕೊಳ್ಳೂವಾಗಲೆ ಅವರಿಗೆ ಅನ್ನಿಸಿತು, ಮ್ಯಾಗ್ನಟಿಕ್ ಟೇಪ್ ನಲ್ಲಿ ದ್ವನಿಯನ್ನು ಕೇವಲ ಗೆರೆಯ ರೂಪದಲ್ಲಿಯೆ ಇಟ್ಟಿರುತ್ತಾರಲ್ಲವೆ. ಚಿತ್ರ ಸಂಪುಟ ತೆಗೆದಂತೆ ದಂಗಾಗಿ ಹೋದರು ಸಪ್ತಗಿರಿ ಹಲವು ವರ್ಷಗಳ ಕತೆಯನ್ನು ಕೆಲವೆ ಚಿತ್ರಗಳು ಸಾರುತ್ತಿದ್ದವು, ಮಲೆನಾಡಿನ ಮಳೆಗಾಲ, ಬಯಲುಸೀಮೆಯ ಬೇಸಿಗೆಯ ದಗೆ, ಎಲ್ಲೊ ಕಾಡಿನಲ್ಲಿ ಅರಳಿದ ಹೂವಿನ ಸುತ್ತ ಸುತ್ತುತ್ತಿರುವ ದುಂಬಿಯ ಝೇಂಕಾರ, ಮರದ ಸಂದಿಯಲ್ಲಿ ಗುಟ್ಟುರು ಹಾಕುತ್ತಿರವ ಪ್ರಾಣಿಗಳ ದ್ವನಿ, ದೂರದ ರಾಷ್ಟ್ರದ ಬೆಕ್ಕಿನ ಮಿಯಾವ್ , ದಟ್ಟ ಹಸುರಿನ ವರ್ಣ , ಮನಕ್ಕೆ ಭಯ ಹುಟ್ಟಿಸುವ ರಕ್ತದ ಚೆಲ್ಲಾಟ, ನೋಡುವಾಗಲೆ ನಾಲಿಗೆಯಲ್ಲಿ ನೀರುರಿಸಿ ದ್ವನಿಯಷ್ಟೆ ಅಲ್ಲ ವಾಸನೆಯಿಂದ ಘ್ಹ್ರಾಣೇಂದ್ರಿಯವನ್ನು ತುಂಬುತ್ತಿರುವ ಹತ್ತು ಹಲವು ಚಿತ್ರಗಳನ್ನು ನೋಡುತ್ತ ಸಪ್ತಗಿರಿ ಮೌನವಾದರು.
ಹೊರಬಂದವರಿಗೆ ಅಂಡಾಂಡಬಂಡರು ಎಲ್ಲವನ್ನು ನೋಡಿದೆಯ ಎಂಬಂತೆ ನಗೆ ಬೀರಿದರು,
ತಲೆಯಾಡಿಸುತ್ತ ನುಡಿದರು ಸಪ್ತಗಿರಿ,
"ಸ್ವಾಮಿ ನಿಮ್ಮ ಮಾತು ನಿಜ ಕೇಳಲು ಹೊರಟರೆ ಪ್ರತಿ ಕ್ಷಣದಲ್ಲು ಪ್ರತಿವಸ್ತುವು ದ್ವನಿ ಹೊರಡುಸುತ್ತದೆ , ನೋಡಲು ಹೊರಟರೆ ಮುಗಿಯದ ನೋಟ. ಆದಿಯಲ್ಲಿ ವಿಷ್ಣುವಿನ ಉದರವನ್ನು ಹೊಕ್ಕು ಬೆದರಿದ ಬ್ರಹ್ಮನಂತೆ ನಾನು ಆಗಿದ್ದೇನೆ. ಈ ಸಂಪದದ ವಿರಾಟ್ ಸ್ವರೂಪ ನೋಡುತ್ತ ನಾನು ಬೆರಗಾಗಿದ್ದೇನೆ"
ಅದೇಕೊ ಒಂದು ಅಸಮಾದಾನದ ಗೆರೆ ಅಂಡಾಂಡಬಂಡರ ಮುಖದಲ್ಲಿ ಕಾಣಿಸಿತು. ಇಷ್ಟಾದರು ಇವನು ಮೌನದ್ವನಿಯ ಅರ್ಥವನ್ನು ಪೂರ್ಣವಾಗಿ ಗ್ರಹಿಸಲಿಲ್ಲ ಎಂಬ ನೋವು ಅವರಲ್ಲಿ. ಅವರಿಗೆ ನಂಬಿಕೆ ತಮ್ಮ ಚುರುಕು ಶಿಷ್ಯನನ್ನು ಕುರಿತು. ಮತ್ತೆ ನುಡಿದರು.
"ನಿಜ ತಮ್ಮಾ ನಿನ್ನನ್ನು ನೋಡುತ್ತ ನನಗೆ , ಗಣೇಶನ ವಾಹನ ಮೂಷಿಕನು ನೆನಪಿಗೆ ಬರುವನು. ಗಣೇಶ ಮತ್ತು ಮೂಷಿಕದ ಸ್ವರೂಪದ ಸಂಕೇತವನ್ನು ನೀನು ಮನಗಾಣಬೇಕು, ಗಣೇಶನು ವಿರಾಟ್ ಜ್ಞಾನದ ಪ್ರತೀಕವಾದರೆ, ಮೂಷಿಕನು ಆ ಜ್ಞಾನಪರ್ವತವನ್ನು ಒಳಗಿನಿಂದಲೆ ಕೊರೆಯುತ್ತ ಅಂತರಾತ್ಮದ ಅರ್ಥವನ್ನು ಗ್ರಹಿಸುವನು. ಪರ್ವತ ಹೊರರೂಪವನ್ನು ನಾವು ದೂರದಿಂದ ಕಂಡರೆ ಮೂಷಿಕನು ಅಂತರ್ಗತನಾಗಿ ಅದರ ಕೇಂದ್ರಬಿಂದುವಿಗೆ ಹೋಗಿ ಸಾರವನ್ನು ಗ್ರಹಿಸುವನು. ಆದರೆ ನೋಡಲು ತುಂಬಾ ಚಿಕ್ಕವನಂತೆ ಗೋಚರಿಸಿ, ಅಹಂಕಾರವನ್ನು ದಮನಿಸಿ, ಗಣೇಶನ ಸಮೀಪ ಇರುವನು, ನೀನಾದರು ಅಷ್ಟೆ ಸಂಪದದಲ್ಲಿಯ ಸಾರವನ್ನು ಹೆಕ್ಕುವದರಲ್ಲಿ ಪ್ರವೀಣ. ಒಳಪದರದಲ್ಲಿ ಇರುವ ಚಿನ್ನದ ಕಣಗಳನ್ನು ಹವಳ ವಜ್ರಗಳನ್ನು ನಿನ್ನ ಉತ್ಖನನದ ಮೂಲಕ ಹೊರಹಾಕಿ ನನ್ನನ್ನು ಸಂತಸಪಡಿಸಿರುವೆ, ಆದರು ನೀನು ಮತ್ತೊಮ್ಮೆ ಸಂಪದದ ಯಾರು ಕೇಳಿರದ ದ್ವನಿಯನ್ನು ನೀನು ಕೇಳಲಿ ಎಂದು ಆಸೆ ನನ್ನಲ್ಲಿದೆ, ಪ್ರಯತ್ನಿಸು ಅಂದರು.
ಸಪ್ತಗಿರಿಯವರಿಗೆ ಅನ್ನಿಸಿತು, ಈ ಅಂಡಾಂಡಬಂಡ ಸ್ವಾಮಿಗಳು ಇಂದು ಅದೇನೊ ನನ್ನನ್ನು ಪರೀಕ್ಷಿಸುತ್ತಿದ್ದಾರೆ. ಅವರ ಮನದಲ್ಲಿ ಮತ್ತೇನೊ ಹೇಳುವ ದ್ವನಿಯಿದೆ, ನಾನು ಅದನ್ನು ಗಮನಿಸಬೇಕು. ಅವರು ನನಗೆ ಮತ್ತೇನೊ ಉಪದೇಶ ಕೊಡಬೇಕೆಂದು ಬಯಸುತ್ತಿದ್ದಾರೆ ಏನಿರಬಹುದು ಎನ್ನುತ್ತ ಮೌನವನ್ನು ತಾಳಿ ಮತ್ತೆ ಸಂಪದ ಎಂಬ ಲೋಕವನ್ನು ಹೊಕ್ಕು ಒಳಗೆ ವಿಹರಿಸತೊಡಗಿದರು.
ಈಗ ಅವರಿಗೆ ಮತ್ಯಾವುದೊ ಪಿಸುನುಡಿಗಳು ಕೇಳುತ್ತಿದೆ, ಯಾರೊ ಅನ್ನುತ್ತಿದ್ದಾರೆ,
"ಏ ಇಲ್ಲಿ ನೋಡು ಈ ಕತೆ ಚೆನ್ನಾಗಿದೆ" , 'ನನಗಂತು ಈ ಕವನ ಅಚ್ಚುಮೆಚ್ಚಾಯಿತು" " ಈ ಮಕ್ಕಳ ಹಾಡಿಗೆ ನಾನಂತು ಐದು ನಕ್ಷತ್ರಗಳನ್ನು ಕೊಡುವೆ", 'ಈ ಭಾವಗೀತೆ ನೋಡು ನನ್ನ ಮೆಚ್ಚುಗೆ ಹೇಗಾದರು ತಿಳಿಸಬೇಕು ಇವರಿಗೆ" "ಛೆ ನಾನು ಮೆಂಬರ್ ಆಗಿದ್ದಲ್ಲಿ ಇವರಿಗೆ ಪ್ರತಿಕ್ರಿಯೆ ಹಾಕಬಹುದಿತ್ತು"
ಎಲ್ಲವನ್ನು ಕೇಳುತ್ತಿರುವಂತೆ ಅರಿವಾಗಿ ಹೋಯಿತು ಸಪ್ತಗಿರಿಗೆ ಇವೆಲ್ಲ ಸಂಪದದ ಮೆಂಬರ್ ಆಗದೆ ಹೊರಗಿನಿಂದಲೆ ಅಗಾಗ್ಯೆ ಕೆಲವರು , ಮತ್ತೆ ನಿಯಮಿತವಾಗಿ ಕೆಲವರು ಓದಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ದ್ವನಿಗಳು, ಇವರ ದ್ವನಿಗಳು ಎಂದಿಗೂ ಅಗೋಚರ, ಮತ್ತು ಯಾರಿಗು ಕೇಳಿಸದು. ಸೂಕ್ಷ್ಮ ರೂಪದಲ್ಲಿ ಬರಹಗಳನ್ನು ಓದುವಾಗ ಉಧ್ಬವಿಸಿ ಅಲ್ಲಿಯೆ ಕರಗಿ ಸಂಪದದಲ್ಲಿ ಬಣ್ಣಗಳಾಗಿ ಮೆತ್ತಿಕೊಂಡಿವೆ ಅನ್ನಿಸಿತು. ಈಗ ಅನ್ನಿಸಿತು ಅಂಡಾಂಡಬ್ರಹ್ಮರ ಮನಸಿನಲ್ಲಿ ಇರಬಹುದಾದ ಉದ್ದೇಶವು ಇದೆ ಎಂದು. ಇಂತಹ ಅಗೋಚರ ದ್ವನಿಗಳು ಸಂಪದದಲ್ಲಿ ಸಾವಿರ ಅಥವ ಲಕ್ಷಗಳು ಆದರೆ ಎಲ್ಲಿಯೂ ಯಾರ ಗಮನಕ್ಕು ಬರುವದಿಲ್ಲ ಎಂಬ ಅರಿವಾಯಿತು.
ಮತ್ತೆ ಅನಿಸತೊಡಗಿತು ಸಪ್ತಗಿರಿಗೆ ಇಂತ ಹತ್ತು ಹಲವು ಅಗೋಚರ ದ್ವನಿಗಳಿರಬೇಕಾದರೆ ನನ್ನ ದ್ವನಿಯು ಏಕಾಗಿ ಬೇಕು. ಮಾತು ಆಡದೆಯು ನಮ್ಮ ದ್ವನಿಯನ್ನು ಮುಂದಿರುವರಿಗೆ ತಲುಪಿಸಲು ಸಾದ್ಯವಲ್ಲವೆ. ಕಣ್ಣಿನ ಸನ್ನೆಯಿಲ್ಲದ ಕೈಬಾಯಿಗಳ ಅಲುಗಾಟವಿಲ್ಲದ, ಗಂಟಲಿನಿಂದ ಯಾವ ದ್ವನಿ ತರಂಗಳು ಮೂಡದ ನಮ್ಮ ಮನಸಿನಲ್ಲಿ ಮೂಡವ ಶುದ್ದ ಭಾವನೆಗಳು ಯಾವ ಮಾಧ್ಯಮಗಳಿಲ್ಲದೆ ಸಹ ಬೇರೆಯವರಿಗೆ ತಲುಪಬಲ್ಲದು. ಪ್ರಯತ್ನ ಪಟ್ಟಲ್ಲಿ ನಾವು ಸಹ ಇಂತಹ ದ್ವನಿಗಳನ್ನು ಕೇಳಿಸಿಕೊಳ್ಳಬಲ್ಲವು, ಇಲ್ಲಿ ಶಬ್ದದ ಪ್ರಸಕ್ತಿಯೆ ಬರಲ್ಲ. ಅಂದರೆ ಶಬ್ದವೆ ಇಲ್ಲದೆ ನಿಶ್ಯಬ್ದದಲ್ಲಿ ಸಹ ಮೂಡಬಲ್ಲ ದ್ವನಿಗಳಿವು, 'ಮೌನದ ದ್ವನಿ' ಇವು ಎಂಬ ಅರಿವು ಅವರಿಗಾಗಿತ್ತು. ಅವರ ಮನಸನ್ನು ಎಂತದೊ ಸಂತಸ ಒಂದು ತುಂಬಿಕೊಂಡಿತು. ಮುಖದಲ್ಲಿ ಆ ಸಂತಸ ಎದ್ದು ಕಾಣುವಂತೆ ಎಂತದೋ ಪ್ರಭೆಯೊಂದು ಆವರಿಸಿತು.
ನಿದಾನವಾಗಿ ಸಪ್ತಗಿರಿ ಸಂಪದದಿಂದ ಹೊರಬಂದರು. ಎದುರಿಗೆ ಇದ್ದ ಅಂಡಾಂಡಬಂಡರನ್ನು ದಿಟ್ಟಿಸಿದರು.
ಏನಾದರು ಅವರಲ್ಲಿ ಹೇಳಬೇಕೆಂದು ಅನ್ನಿಸಲಿಲ್ಲ. ನಾನು ಏನು ಹೇಳದೆ ಸಹ ನನ್ನ ಮನಸಿನಲ್ಲಿ ಇರುವ ಭಾವನೆಗಳನ್ನು ಅವರು ಅರ್ಥಮಾಡಿಕೊಳ್ಳಬಲ್ಲರೆಂದು , ದ್ವನಿಯಾಗಿ ಮೂಡದ ತಮ್ಮ ಮಾತುಗಳನ್ನು ಸಹ ಅವರು ಕೇಳಿಸಿಕೊಳ್ಳಬಲ್ಲರೆಂದು ಅವರಿಗೆ ಅನ್ನಿಸಿತು. ಮುಖದಲ್ಲಿ ಕಿರುನಗೆಯೊಂದು ಮೂಡಿತು. ಈಗ ಸಪ್ತಗಿರಿ ಸಹ ತಮ್ಮ ಗುರು ಅಂಡಾಂಡಬಂಡರ ರೀತೆಯೆ ಕಣ್ಣು ಮುಚ್ಚಿ ಕುಳಿತರು. ಆ ಪ್ರಶಾಂತ ಮೌನದಲ್ಲಿಯೆ ಇಬ್ಬರ ನಡುವೆ ಯಾವುದೋ ಸಂವಹನ ನಡೆದಿತ್ತು. ಸಂಪದಲ್ಲಿ ಎಲ್ಲಿಯೊ ಓದಿದ ಪ್ರತಿಕ್ರಿಯೆ ಒಂದರ ಸಾಲುಗಳು ಸಪ್ತಗಿರಿಯ ಮನಸಿನಲ್ಲಿ ಹಾದು ಹೋದವು.
'ಮರದ ಕೆಳಗೆ ಗುರು ದಕ್ಷಿಣಾಮೂರ್ತಿಸ್ವರೂಪರು ಮೌನವಾಗಿ ಕಣ್ಮುಚ್ಚಿ ಕುಳಿತ್ತಿದ್ದಾರೆ. ಅವರ ಮುಂದೆ ಅವರ ಶಿಷ್ಯರು ಮೌನವಾಗಿ ಕುಳಿತಿದ್ದಾರೆ. ಶಿಷ್ಯರು ತಮ್ಮ ಮನಸಿನಲ್ಲಿ ಮೂಡುವ ಭಾವನೆಗಳನ್ನು ಅನುಮಾನಗಳನ್ನು ಹೇಳುವ ಪ್ರಮೇಯವೆ ಇಲ್ಲ. ಗುರು ದಕ್ಷಿಣಾಮೂರ್ತಿ ಅವುಗಳಿಗೆ ಉತ್ತರಗಳನ್ನು ಪರಿಹಾರಗಳನ್ನು ಮನಸಿನ ಮಟ್ಟದಲ್ಲಿಯೆ ಶಿಷ್ಯರಿಗೆ ತಲುಪಿಸಿ ಅವರೆಲ್ಲರ ಸಂದೇಹ ಪರಿಹಾರ ಮಾಡುತ್ತಿರುವಂತೆ ಗುರು ಶಿಷ್ಯರ ನಡುವೆ ಅಗೋಚರ ಜ್ಞಾನಗಂಗೆಯೊಂದು ಹರಿಯುತ್ತಿದೆ. ಅದರ ಬೆಳಕಿನ ಪ್ರತಿಫಲನ ಗುರುಶಿಷ್ಯರ ಮುಖದಲ್ಲಿ ಶಾಂತಿರೂಪದಲ್ಲಿ ಗೋಚರಿಸುತ್ತಿದೆ.'
_______________________________________
ಸಂಪದದಲ್ಲಿ ಪ್ರಕಟವಾಗಿರುವ ಶ್ರೀ ಅಡ್ಡೂರು ಕೃಷ್ನರಾವ್ ರವರ 'ಮೌನದ ಸದ್ದು' ದಿಂದ ಪ್ರೇರಣೆ
Rating
Comments
ಉ: ಮೌನದ ದ್ವನಿ - ಹಾಗು ಸಂಪದ
In reply to ಉ: ಮೌನದ ದ್ವನಿ - ಹಾಗು ಸಂಪದ by nanjunda
ಉ: ಮೌನದ ದ್ವನಿ - ಹಾಗು ಸಂಪದ
ಉ: ಮೌನದ ದ್ವನಿ - ಹಾಗು ಸಂಪದ
In reply to ಉ: ಮೌನದ ದ್ವನಿ - ಹಾಗು ಸಂಪದ by makara
ಉ: ಮೌನದ ದ್ವನಿ - ಹಾಗು ಸಂಪದ
In reply to ಉ: ಮೌನದ ದ್ವನಿ - ಹಾಗು ಸಂಪದ by Jayanth Ramachar
ಉ: ಮೌನದ ದ್ವನಿ - ಹಾಗು ಸಂಪದ
In reply to ಉ: ಮೌನದ ದ್ವನಿ - ಹಾಗು ಸಂಪದ by makara
ಉ: ಮೌನದ ದ್ವನಿ - ಹಾಗು ಸಂಪದ
ಉ: ಮೌನದ ದ್ವನಿ - ಹಾಗು ಸಂಪದ
In reply to ಉ: ಮೌನದ ದ್ವನಿ - ಹಾಗು ಸಂಪದ by sathishnasa
ಉ: ಮೌನದ ದ್ವನಿ - ಹಾಗು ಸಂಪದ:2ಗುರುಗಳೇ ....
In reply to ಉ: ಮೌನದ ದ್ವನಿ - ಹಾಗು ಸಂಪದ:2ಗುರುಗಳೇ .... by venkatb83
ಉ: ಮೌನದ ದ್ವನಿ - ಹಾಗು ಸಂಪದ:2ಸಪ್ತಗಿರಿಯವರೆ
In reply to ಉ: ಮೌನದ ದ್ವನಿ - ಹಾಗು ಸಂಪದ by sathishnasa
ಉ: ಮೌನದ ದ್ವನಿ - ಹಾಗು ಸಂಪದ
In reply to ಉ: ಮೌನದ ದ್ವನಿ - ಹಾಗು ಸಂಪದ by partha1059
ಉ: ಮೌನದ ದ್ವನಿ - ಹಾಗು ಸಂಪದ:ಗುರುಗಳೇ-ಅಚ್ಚರಿಯಾಗುತಿದೆ...!!
ಉ: ಮೌನದ ದ್ವನಿ - ಹಾಗು ಸಂಪದ
In reply to ಉ: ಮೌನದ ದ್ವನಿ - ಹಾಗು ಸಂಪದ by RAMAMOHANA
ಉ: ಮೌನದ ದ್ವನಿ - ಹಾಗು ಸಂಪದ
ಉ: ಮೌನದ ದ್ವನಿ - ಹಾಗು ಸಂಪದ
In reply to ಉ: ಮೌನದ ದ್ವನಿ - ಹಾಗು ಸಂಪದ by kavinagaraj
ಉ: ಮೌನದ ದ್ವನಿ - ಹಾಗು ಸಂಪದ
ಉ: ಮೌನದ ದ್ವನಿ - ಹಾಗು ಸಂಪದ
In reply to ಉ: ಮೌನದ ದ್ವನಿ - ಹಾಗು ಸಂಪದ by H A Patil
ಉ: ಮೌನದ ದ್ವನಿ - ಹಾಗು ಸಂಪದ
ಉ: ಮೌನದ ಧ್ವನಿ- ಹಾಗು ಸಂಪದ
In reply to ಉ: ಮೌನದ ಧ್ವನಿ- ಹಾಗು ಸಂಪದ by ಗಣೇಶ
ಉ: ಮೌನದ ಧ್ವನಿ- ಹಾಗು ಸಂಪದ
ಉ: ಮೌನದ ದ್ವನಿ - ಹಾಗು ಸಂಪದ
In reply to ಉ: ಮೌನದ ದ್ವನಿ - ಹಾಗು ಸಂಪದ by Chikku123
ಉ: ಮೌನದ ದ್ವನಿ - ಹಾಗು ಸಂಪದ