ಮೌನ ರಾಗ

ಮೌನ ರಾಗ

ಮೌನ ರಾಗ

ಹಾಗೆ ಸುಮ್ಮನೆ ಗೀಚಿದ ಗೀತೆಗಳು ಹಲವು
ಹೇಳಲಾಗದೆ ಉಳಿದ ಭಾವ ಹಲವು
೬ ಸವಸ್ತರ  ಕಳೆದವು,ಮಾತು ನನ್ನಲೇ ಉಳಿದಿತ್ತು
ಅಂದು ಪ್ರಸ್ತಾವಿಸ ಬೇಕೆಂದೇ ಫೋನಾಯಿಸಲು
ಎನ್ಗಜೆ ದ್ವನಿ ಯೊಂದೇ ಉತ್ತರಿಸಿತು


ರಾತ್ರಿ ನಿದ್ದೆ  ಬಹು ಹೊತ್ತು ಬಾರದಿರಲು
"ಇಂದು ಬೇಡ ಈಗ ತಡ ವಾಗಿಹುದು" ಮನದೊಳಗೆ
ಕನಸ ದಾರಿ ಹಿಡಿಯಲು ಹೊದ್ದು ಕೊಂಡೆ ಅದೇ ಹೊದಿಕೆ
ನನ್ನ ತಳಮಳಕ್ಕೆ ದಿಂಬಿನ ಸಾಂತ್ವನವು ಇತ್ತು


ಆರಕ್ಕೆ ಎದ್ದೆ, ಫೋನಾಯಿಸಿದೆ
ನಿದ್ದೆ ಕಣ್ಣಲ್ಲಿ ಗುನುಗಿದಳು ಆ ನನ್ನ ನಲ್ಲೆ
ಸಂಜೆ ಮಾತಾಡುವ ಎನ್ನುತ್ತಾ ಫೋನ್ ಇಟ್ಟಳು
ಮಾತು ಹಂಗೆ ಉಳಿದಿತ್ತು ನನ್ನೊಳಗೆ

ಆ ದಿನದಲ್ಲಿ ಕಾತುರತೆಯು, ಭಯವು ಇತ್ತು ನನ್ನಲ್ಲಿ,
ಮೊದಲ ಬಾರಿಗೆ ಹೇಳ ಹೊರಟಿದ್ದೆ ಪ್ರೀತಿಯ ಮಾತು ನನ್ನ ಸ್ನೇಹಿತೆಗೆ
ಸಂಜೆಯ ಬರುವಿಕೆಗೆ ಕಾಯುತಿದ್ದೆ
ಆಟ ,ಊಟ ಮಾಡದ ಪರಿವಿರಲಿಲ್ಲ

ಸಂಜೆ ಪುನಃ ಅದೇ ಕರೆಗೆ
ನಲ್ಲೆಯ ಜಾಗದಲ್ಲಿ ಮಾತಾಡುತ್ತಿದ್ದಳು ಅವಳ ಸ್ನೇಹಿತೆ
ನಾನು ಮಾತು ಹೊರಡಿಸುವ ಮುಂಚೆ
ಹೇಳಿ ಬಿಟ್ಟಳು "ರಾಂಗ್ ನಂಬರ್" 

ಆಗ ತಿಳಿಯಿತು ಅವಳಿಗೆ ನಾನಿಷ್ಟ ವಿರಲಿಲ್ಲ
ಬರೇ ನಾನು ಕನಸಿನ ಲೋಕದಲ್ಲಿದ್ದೆ ಅವಳೊಡನೆ
ಆಕೆ ಇಲ್ಲಿ ಯಾರನ್ನೋ ಇಷ್ಟಪದುತಿದ್ದಳು
೬ ವರುಷದಿಂದ ನಾನಂದುಕೊಡಿದ್ದೆ ಅದು ನಾನೇ

ಕೊನೆಗೂ ಉಳಿಯಿತು ನನ್ನ ಮಾತು ನನ್ನಲ್ಲೇ
ಅವಳ ಮಾತು ಅವಳಲ್ಲೇ
ಅವಳ ಸ್ನೇಹಿತೆಯ "ರಾಂಗ್ ನಂಬರ್" ಮಾತ್ರ ನಮ್ಮಿಬ್ಬರ ನಡುವೆ
ಪ್ರೇಮವು ಮುರಿಯಿತು, ಸ್ನೇಹವು ನಿಂತಿತು ಆ ಕರೆಗೆ..

ಕಾಮತ್ ಕುಂಬ್ಳೆ

Rating
No votes yet

Comments