ಮೌಲ್ಯ - ಲಕ್ಷ್ಮೀಕಾಂತ ಇಟ್ನಾಳ
ಚಿತ್ರ
ಮೌಲ್ಯ
ಅವನು ಯಾರಲ್ಲೂ ಮಾರುವುದಿಲ್ಲ ಏನೊಂದು
ಆದರೂ ಅನ್ನುವರು ಬಲು ತುಟ್ಟಿ ಸಹಿಯೆಂದು
ಅಗ್ಗವಾದುದಕ್ಕೆ ಮುಗಿಬೀಳಬೇಕಲ್ಲವೇ
ದೂರ ಓಡುವರೆಲ್ಲ.... ಅವಳು ಅಗ್ಗವೆಂದು
ಸಾವಿಲ್ಲ, ಅಮೂಲ್ಯ ಎಂದೇ ಬೊಬ್ಬೆ ಅದಕೆ
ನಿತ್ಯ ಮಾತುಗಳಲ್ಲಿ ಶವವಾಗುವುದು ಸತ್ಯವೊಂದು
ಎಷ್ಟೊಂದು ಹಗುರ ಅವನ ಮಾತುಗಳಾದರೂ
ನೆಗುವ ಧೈರ್ಯ ಮಾಡರಾರೂ ಎಂದೆಂದು
ಉಚಿತವೆಂದರೂ ಯಾರೂ ಇಲ್ಲ ಸರತಿಯಲ್ಲಿ
ಕೆಲ ರೈತರಷ್ಟೆ , ಸಾವಿನ ಮನೆಯಲ್ಲಿ ಇಂದು
Rating
Comments
ಉ: ಮೌಲ್ಯ - ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳರೆ ನಮಸ್ಕಾರ. ಮೌಲ್ಯಮಾಪನಕ್ಕೆ ಜಗದಲ್ಲಿ ಅದರದೆ ನಿಯಮ, ವ್ಯಾಖ್ಯೆ. ಅರ್ಥಗರ್ಭಿತ ಕವನ.
ಉ: ಮೌಲ್ಯ - ಲಕ್ಷ್ಮೀಕಾಂತ ಇಟ್ನಾಳ
ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
’ಮೌಲ್ಯ’ ಒಂದು ಅರ್ಥಗರ್ಭಿತ ಕವನ, ಸಾವಿನ ಮನೆಗೆ ಸರತಿ ಸಾಲಿನಲ್ಲಿ ಸಾಗುತ್ತಿರುವ ರೈತರ ಇಚ್ಛಾಮರಣ ಯಾತ್ರೆಗೆ ಕೊನೆ ಹೇಳ ಬೇಕಿದೆ, ರೈತರ ಸಾವಿಗೆ ಅರ್ಥಪೂರ್ಣ ಶ್ರದ್ಧಾಂಜಲಿ.ಕವನದಷ್ಟೆ ಅಅರ್ಥಪೂರ್ಣವಾದ ಚಿತ್ರ, ಕವನ ಚಿತ್ರಗಳೆರಡೂ ಮನ ತಟ್ಟಿದವು.ದನ್ಯವಾದಗಳು.
ಉ: ಮೌಲ್ಯ - ಲಕ್ಷ್ಮೀಕಾಂತ ಇಟ್ನಾಳ
ಕವನದಲ್ಲಿ ನಿಮ್ಮ ಹಿಡಿತ ಚೆನ್ನಾಗಿದೆ. ಸುಂದರ ಪೊಸ್ಟ್ ಕೂಡಾ ಮೆಚ್ಫ್ಚುಗೆ ಯಾಯಿತು.
ಉ: ಮೌಲ್ಯ - ಲಕ್ಷ್ಮೀಕಾಂತ ಇಟ್ನಾಳ
ಅರ್ಥಗರ್ಭಿತ ಕುಟುಕುಗಳು!