ಯಕ್ಷಗಾನ ಬಯಲಾಟದಲ್ಲಿ ಶೃಂಗಾರ

ಯಕ್ಷಗಾನ ಬಯಲಾಟದಲ್ಲಿ ಶೃಂಗಾರ

ಚಿತ್ರ

ಶ್ರೀಮತೀ ಟಿ ಎಸ್ ಸತ್ಯವತೀಯವರ ಪ್ರಶ್ನೆಗೊಂದು ಪ್ರತಿಕ್ರಿಯೆ
=====================================
http://youtu.be/lTp_uc1L-kk?t=4m28s
=====================================

ಸಾಮಾನ್ಯವೂ ನೈಜವೂ ಆದ ಹೆಣ್ಣುಗಂಡಿನ ಸಂಬಂಧದ ಬಗ್ಗೆ ಮಾತಾಡುವುದು ಅಭಿನಯಿಸುವುದು ಗ್ರಾಮ್ಯ ವಾತಾವರಣದಲ್ಲಿ ಮತ್ತು ಭಾರತೀಯ ಪ್ರಾಚೀನ ನೈತಿಕತೆಯ ದೃಷ್ಟಿಯಿಂದ ಅಶ್ಲೀಲ ಅಥವಾ ಕೆಳದರ್ಜೆಯದು ಎನ್ನಿಸಿಕೊಳ್ಳುವುದಿಲ್ಲ. ಯಕ್ಷಗಾನದಲ್ಲಿ ಶೃಂಗಾರದ ಅವಿಭಾಜ್ಯ ಅಂಗ ಅದು. ಇದು ಅಶ್ಲೀಲ ಎನ್ನುವುದು ಪಾಶ್ಚಾತ್ಯರಿಂದ ನಮಗೆ ಬಂದ ನೈತಿಕತೆಯೇ ಹೊರದು ಮೂಲ ಗ್ರಾಮ್ಯ/ಭಾರತೀಯ ನೈತಿಕತೆಯಲ್ಲ. "ಕಂಡನು ಭಸ್ಮಾಸುರನು ಮೋಹಿನಿಯನ್ನು ಕಂಡನು ಭುವನ ಸುಂದರಿಯ ಭೂಮಂಡಲದೊಳಗೆ ಚೆಲ್ವಿಕೆಯ ಕಂಡುದಿಲ್ಲವೋ ಮುಖಮಂಡಲ ಶಶಿತೆರ ದುಂಡು ಕುಚಾಂಗನೆ ಗೊಂಡೆ ಆನಂದವ...." ಹೀಗೆ ಅನೇಕ ಪದ್ಯಗಳಿವೆ. ಕಾಳಿದಾಸನ ಶಾಕುಂತಲ ನಾಟಕದಲ್ಲೂ ಈ ರೀತಿಯ ವರ್ಣನೆಗಳಿವೆ. ಇವೆಲ್ಲ ಪ್ರಾಚೀನತಹ ಅಶ್ಲೀಲವಲ್ಲ. "ವಿಕ್ಟೋರಿಯನ್ ಮೊರಾಲಿಟಿ"ಯ ಪ್ರಕಾರ ಇದು ಅಶ್ಲೀಲ. ಅದನ್ನೇ ನಾವು ಮೈಗೂಡಿಸಿಕೊಂಡು ನಮ್ಮ ಪ್ರಾಚೀನ ಶೈಲಿಗಳೆಲ್ಲ ತಪ್ಪು ಎನ್ನುವಷ್ಟು ದುರಭ್ಯಾಸ ಬೆಳೆಸಿಕೊಂಡಿದ್ದೇವೆ.

೧೭ನೇ ಶತಮಾನದವರೆಗೂ ಕರ್ನಾಟಕದಲ್ಲಿ ಹೆಚ್ಚಿನ ಹೆಂಗಸರು ಕುಪ್ಪಸ ಧರಿಸುತ್ತಲೇ ಇರಲಿಲ್ಲ! ಇಟಲಿ, ಪೋರ್ಚುಗೀಸ ಮುಂತಾದ ದೇಶದಿಂದ ಕೆಳದಿಗೆ/ಇಕ್ಕೇರಿಗೆ ಬಂದ ಪ್ರಯಾಣಿಕರು ಇದನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಯಕ್ಷಗಾನ ಬಯಲಾಟ ಹಲವು ಭಾರತೀಯ ಕಲಾಶೈಲಿ ಹಿಂದಿನ ಸಾಮಾಜಿಕ ಅರ್ಥೈಕೆಯನ್ನು ಇನ್ನೂ ಉಳಿಸಿಕೊಂಡು ಬಂದಿದೆ. ಅದನ್ನು ನಾವು ಹಾಳುಮಾಡಬಾರದು. ಉದಾಹರಣೆಗೆ, ರಂಗ ಪ್ರವೇಶ ಬಯಲಾಟದಲ್ಲಿ ಎಡ-ಬಲದಿಂದ ಅಲ್ಲ. ರಂಗದ ಮಧ್ಯದಿಂದಲೇ ವೇಷ ಪ್ರವೇಶ ಮಾಡುವುದು! ಅದು ಭಾರತೀಯ ಶೈಲಿ. ಒಮ್ಮೆ ಯೋಚನೆಮಾಡಿ ಯಾಕೆ ಎಡಬಲದಿಂದ ಮಾಡಬೇಕು? ನಾವು ರಂಗದ ಹಿಂದೆ ಬ್ರಿಟೀಷಶೈಲಿಯಲ್ಲಿ ಗೋಡೆ/ಪರದೆ ಕಟ್ಟಿ ಮಧ್ಯದಿಂದ ಪ್ರವೇಶಮಾಡಲು ಬರದಂತೆ ಮಾಡಿಕೊಂಡಿದ್ದೇವೆ. ಬಯಲಾಟಕ್ಕೆ ಹಿಂದಿರುವ ಕತ್ತಲೆಯೇ ಪರದೆಯಾಗಿತ್ತು!! ಹೀಗೆ ನಾವು ಬಯಲಾಟವನ್ನು ನೋಡುವಾಗ ಪಾಶ್ಚಾತ್ಯರಿಂದ ನಮಗೆ ಬಂದ ಕಣ್ಮೈಮನಗಳ ದುರಭ್ಯಾಸ ಬಿಡಬೇಕು.  ಹಿಂದಿನ, ಸಂಪೂರ್ಣ ಭಾರತೀಯವಾದ, ಮೇಲ್ಸ್ತರದವರ ನೈತಿಕತೆ ಅಥವಾ ಸರಿ ತಪ್ಪಿನ ಚಾಳಿಯ ಚಳಿಬಿಟ್ಟು ನೋಡಬೇಕು. ಆಗ ಎಲ್ಲವೂಸರಿಯಾಗಿ ಕಾಣಿಸುತ್ತದೆ.

Rating
No votes yet