ಯಕ್ಷ ಪ್ರಶ್ನೆ equivalent!

ಯಕ್ಷ ಪ್ರಶ್ನೆ equivalent!

'ಸಂಪದ'ವೆಂಬಂತಹ ಒಂದು ವೆಬ್ಸೈಟ್ ಪ್ರಾರಭಿಸಬೇಕೆಂಬುದು ನನ್ನ ಉದ್ದೇಶವಾಗಿರಲ್ಲಿಲ್ಲವಾದರೂ ಹೇಗು ಹೇಗೋ ಹೀಗೊಂದು ತಾಣವಾಗಿ ಹೋಯ್ತು. ನಿಮ್ಮಲ್ಲಿ ಯಾರಿಗಾದ್ರೂ 'ಯಾಕ್ ಹೀಗ್ ಮಾಡಿದ್ನೋ' ಅಂತ ಸಿಟ್ಟು ಇದ್ದರೆ ಇದರ ಉಗಮವಾಗುವಂತಿದ್ದ 'ವಿಧಿ'ಗೆ ಬೈದುಕೊಳ್ಳಿ. ಅಥವಾ “'ಯುನಿಕೋಡ್'ಗೆ ನಿಮ್ಮ ತಾಣಗಳನ್ನು ಪರಿವರ್ತಿಸಿ" ಎಂದು ನಾನು ಗೋಗರಿದರೂ ಪರಿವರ್ತಿಸದ ವೆಬ್ಸೈಟುಗಳ ownerಗಳನ್ನ ಬೈದುಕೊಳ್ಳಿ. 'ಬಹಳ ಒಳ್ಳೆ ಕೆಲಸ ಮಾಡಿದಾನೆ, ಇವನಿಗೆ ಬಾಳ ಜೋಷ್' ಅನ್ನುವವರು ನಾನು ಅಂತಹ ಜೋಷ್ ಪಾರ್ಟಿನೂ ಅಲ್ಲ, ಅಂತಹ ದೊಡ್ಡ ಕೆಲಸವೇನೂ ಮಾಡಿಲ್ಲವೆಂಬುದನ್ನ ತಿಳಿಯಿರಿ :) ಸತ್ಯವೇನೆಂದರೆ, ನಾನೊಬ್ಬ ಶುದ್ಧ ಸೋಮಾರಿ. ಏನೋ ಕನ್ನಡದ ಬಗ್ಗೆ ಹುಚ್ಚು... ಕನ್ನಡ ಬರೆಯೋಕೆ, ಮಾತಾಡೋದಕ್ಕೆ ಸರಿಯಾಗಿ ಬರ್ದಿದ್ರೂ ಒಂದಷ್ಟು ಬರೆಯಬೇಕೆಂಬ ಹುಚ್ಚು.... ಓದಬೇಕೆಂಬ ಹುಚ್ಚು. ನನ್ನ ಕಂಪ್ಯೂಟರಿನಲ್ಲಿ, ನಾನುಪಯೋಗಿಸುವ 'ಲಿನಕ್ಸ್' ತಂತ್ರಾಂಶದಲ್ಲಿ ಕನ್ನಡ ನೋಡಬೇಕೆಂಬ ಹುಚ್ಚು. ಹೀಗಿದ್ದೂ, 'ಸಂಪದ'ದಲ್ಲಿರುವ ಹಲವರ ಪೈಕಿ ನನ್ನದು 'ಕಡಿಮೆ ಹುಚ್ಚು' ಎಂದೇ ಹೇಳಬಹುದು.

ಆದರೆ ಪ್ರಾರಂಭ ಮಾಡಿ ಹೆಚ್ಚು ಕಡಿಮೆ ಮೂರು ತಿಂಗಳಾಗುತ್ತ ಬಂದರೂ 'ಸಂಪದ'ವನ್ನು ವೀಕ್ಷಿಸಿದ ಕೆಲವು ಕನ್ನಡಿಗರಿಂದ ಕೆಲವೊಂದು irritating ಪ್ರಶ್ನೆಗಳು ಬರುತ್ತಲೇ ಇದ್ದು, ನನಗೆ ಬೇರೊಂದು ರೀತಿಯ ಹುಚ್ಚು ಹಿಡಿಸಿವೆ. ಈ ರೀತಿಯ ಹುಚ್ಚಿಗೆ ಬರವಣಿಗೆಯೇ ಪರಿಹಾರವೆಂದು ತಿಳಿದು ಸ್ವಲ್ಪ ಸಮಯ ತೆಗೆದಿಟ್ಟು ಅಂತಹ ಪ್ರಶ್ನೆಗಳನ್ನೂ ಅದರ ಉತ್ತರವನ್ನೂ ಪ್ರಶ್ನೆ - ಮಾತುಕತೆ ರೂಪದಲ್ಲಿ ಹಲವರಿಗೆ ವಿವರಿಸಿದಂತೆ ಇಲ್ಲಿಯೂ ಬರೆದಿರುವೆ. ಓದಿ:

*******

ಹೆಚ್ಚಿನಂತೆ ನನ್ನ ಮೇಲೆ frequent ಆಗಿ ಶೂಟ್ ಮಾಡಲಾಗುವ ಪ್ರಶ್ನೆಗಳು ಕೆಳಗಿನಂತೆ:

"ಏನಯ್ಯಾ, ಎಲ್ಲರೂ ಬರೆಯೋದೆಂದ್ರೆ ಹೇಗೆ? ಕೆಲವರು ಪ್ರತಿಭಾವಂತ ಲೇಖಕರು ಒಂದು ಪತ್ರಿಕೆಗೋ ಮ್ಯಾಗಜೀನಿಗೋ ಬರೆಯೋದನ್ನ ಕೇಳಿದೀನಿ. ಎಲ್ಲರೂ ಬರೀಬೋದು ಅಂದ್ರೆ ಇದೇನಿದು, ವಿಚಿತ್ರ?”

"ಸಂಪಾದಕರಿಲ್ಲವೆ? (ಹೀಗೆ ಹೇಳುವಾಗ ಜಗತ್ತೇ ತಲೆಯ ಮೇಲೆ ಬಿದ್ದಂತಹ ಎಮೋಶನ್ ಮುಖದಲ್ಲಿ) ಎಲ್ಲರೂ ಬರೆಯಬಹುದೆ? ಯಾವುದರ ಬಗ್ಗೆ ಬೇಕಿದ್ದರೂ ಬರೆಯಬಹುದೆ ??!!”

"ಯುನಿಕೋಡೆ? ಯಾವ ಕೋಡಪ್ಪಾ ಅದು? ಕೇಳೇ ಇಲ್ವಲ್ಲಾ? ಅದು ಬರಹ ಉಪಯೋಗಿಸುತ್ತಾ?”

"ಏನಯ್ಯಾ? ತಲೆ ಗಿಲೆ ಕೆಟ್ಟಿದೆಯಾ? ಅಷ್ಟೊಂದು ಜನರನ್ನು ಸದಸ್ಯರನ್ನಾಗಿಟ್ಕೊಂಡು ಸ್ವಲ್ಪ ಜಾಹಿರಾತು ಆದ್ರೂ ಹಾಕೋದಲ್ವೆ?”

*******

ಆ ದಿನ ರಾಜಣ್ಣ ಊರಿಂದ ಬಂದಿದ್ದರು. ಅವರಿಗೆ ಕಂಪ್ಯೂಟರಿನಲ್ಲಿ ಅದೂ ಇದೂ ತೋರಿಸುತ್ತ ಮಾತು 'ವಿಕಿಪೀಡಿಯ' ಹಾಗೂ 'ಸಂಪದ'ದ ವರೆಗೆ ಬಂತು.

"ಛೆ! ಯಾಕೋ ಎಲ್ಲರಿಗೋ ಬರೆಯೋಕ್ಕೆ ಬಿಡೋದು ನನಗಂತೂ ಸರಿ ಕಾಣಲ್ಲ ಕಣಯ್ಯ!”

"ಯಾಕ್ ಮಾಮ?”

"ಅಲ್ವೋ, ಚೆನ್ನಾಗಿ ಬರೆಯೋರಿಗೂ, ಚೆನ್ನಾಗಿ ಬರೆಯದೇ ಇರೋರಿಗೂ ಏನು ವ್ಯತ್ಯಾಸ ಉಳೀತು ಹೇಳು? ಎಲ್ರಿಗೂ ಒಂದೇ ಕಡೆ ಬರೀಲಿಕ್ ಕೊಟ್ಟಿದೀಯ! ಚೆನ್ನಾಗಿ ಬರೆಯೋರಿಗೆ ಗೌರವ ಕೊಟ್ಟು ಪ್ರತ್ಯೇಕ ಕಾಲಮ್ ಮಾಡ್ಬೇಕಲ್ವೇನೊ?"

"ಅಲ್ಲೇ ಅಲ್ವ ಇದರ uniqueness ಇರೋದು, ಮಾಮ?”

"ಏನು uniqueness ಅಪ್ಪಾ ಅದು?”

"ನಾವೆಲ್ಲರೂ ಒಂದಲ್ಲ ಒಂದು ದಿನ ಬರೆಯೋದರಲ್ಲಿ ಕುಂಟುತ್ತ, ತೊದಲುತ್ತಾ, ಕಲಿಯುತ್ತಾನೆ ಮುಂದು ಬಂದಿರ್ತೀವಿ, ಅಲ್ವೆ? ಹಾಗಿದ್ದಾಗ ಬರೆಯೋಕೆ ಬರದೇ ಇರೋರಿಗೆ ಒಂದು podium ಇಲ್ದೇ ಹೋದ್ರೆ ಅವರು ಬರೆಯುವುದನ್ನು ಕಲೆಯೋದ್ ಹೇಗೆ? ಚೆನ್ನಾಗಿ ಬರೆಯುವವರು ಖಂಡಿತ ತಮ್ಮ ಟ್ಯಾಲೆಂಟ್ ಮೂಲಕ ಜನರ ಮನಸ್ಸು ಗೆದ್ದೇ ಗೆಲ್ತಾರೆ. ಹೊಸದಾಗಿ ಬರೆಯುವವರು ಬರೆಯುತ್ತಾ ಬರೆಯುತ್ತಾ, ಚೆನ್ನಾಗಿ ಬರೆಯುವವರ ಲೇಖನಗಳನ್ನೂ ಓದ್ತಾ ಬರೆಯುವುದರಲ್ಲಿ prowess ಪಡೀತಾರೆ. ಒಟ್ನಲ್ಲಿ ಕನ್ನಡ ಬೆಳೆಸ್ದಾಗ್ ಆಗೋದಿಲ್ವೆ? ಬರೆ ಇಂಗ್ಲಿಷ್ ಲೇಖನಗಳನ್ನ ಓದಿ ಓದಿ ಒಂದು ತರಹ reverence ಕ್ರಿಯೇಟ್ ಆಗಿ ಈಗ ನಾವುಗಳು ಇಂಗ್ಲಿಷಿನಲ್ಲಿ ಬರೆಯೋದನ್ನೇ ರೂಡಿಸಿಕೊಂಡು ಅದೇ ಪ್ರೆಸ್ಟೀಜಿಯಸ್ ಎಂಬಂತೆ ಆಗಿಲ್ವೇ? ಹಾಗೇನೆ ಇದೂನು"

"ಹಾಗಾದ್ರೆ ಚೆನ್ನಾಗಿ ಬರೆಯೋರಿಗೆ ಏನಪ್ಪಾ ಸಿಗತ್ತೆ ಇದ್ರಿಂದ?”

"ಇನ್ನಷ್ಟು famous ಆಗ್ತಾರೆ ;) ಅವರು ಬರೆಯೋದನ್ನ ಎಷ್ಟೊಂದು ಜನ ಓದಿ, ಮೆಚ್ಚಿಕೊಂಡು, ಅವರ ಹೆಸರು ಇನ್ನೂ ಹೆಚ್ಚು known ಆಗುತ್ತೆ, ಅಲ್ವೆ? ಆದ್ರೂ ಅಂಥವರು usually fameಗಾಗಿ ಬರೆಯೋದು ಕಡಿಮೆ. ತಮ್ಮ ಟ್ಯಾಲೆಂಟ್ ಇನ್ನಷ್ಟು ಶಾರ್ಪ್ ಮಾಡ್ಕೊಳ್ಳೋದಕ್ಕೆ ಬರೀತಾರೆ ಅನ್ಸುತ್ತೆ. ಹಾಗೇ ಫೇಮಸ್ ಆಗಿರೋರೊಬ್ರು ಸಂಪದದ ಲೇಖನಗಳಲ್ಲಿ ಲೇಖಕರ ಫೋಟೊ ಹಾಕೋವಾಗ 'ಬೇಡ ಕಣಯ್ಯ, ಫೋಟೊ ಮಾತ್ರ ಹಾಕ್ಬೇಡ' ಎಂದಿದ್ರು, ಗೊತ್ತಾ? ವಿಶಾಲ ಮನಸ್ಸಿನವರು, ಕನ್ನಡದ ಬಗ್ಗೆ ನಿಜವಾದ affection ಇರೋರು ಖಂಡಿತ fame ಗೋಜಿಗೆ ಹೋಗದೆ ಬರೀತಾರೆ. ಕೊನೆಗೆ 'fame' ಅನ್ನೋದು ನೀವು ಹುಡುಕಿಕೊಂಡು ಹೋಗೋ ಅಂತದ್ದಲ್ಲ, ಅದೇ ನಿಮ್ಮನ್ನ ಹುಡುಕಿಕೊಂಡು ಬರುವಂತದ್ದಲ್ವೆ?”

"ಸರಿ ಕಣಯ್ಯ, ಏನೋ ಮಾಡಿದೀಯ, ನೋಡಣ!”

*******

ವಯೋವೃದ್ದರೊಬ್ಬರು, ಮನೆಗೆ ಭೇಟಿ ಕೊಟ್ಟಾಗ:
"ಏ ಹರಿ, ಸಂಪದ ನೋಡ್ದೆ ಕಣೋ! ಚೆನ್ನಾಗಿದೆ. ಆದರೆ ಅದೇನದು, ಬರ್ದದ್ದು ಯಾರೂ editing ಮಾಡೋದಿಲ್ವೆ? ಸಂಪಾದಕರಿಲ್ವಾ? ಏನಾದ್ರೂ ಬಾಯೀಗ್ ಬಂದಹಾಗ್ ಬರೆದು ಹಾಕಿದ್ರೆ ಏನೋ ಮಾಡ್ತೀಯ?”

"ಅಯ್ಯೊ, ಹಾಗಾಗೋದು ಕಡಿಮೆ, ಯೋಚನೆ ಮಾಡ್ಬೇಡಿ. ಲೇಖನಗಳು ಕ್ಯೂ ಸೇರುತ್ವೆ. ಎಲ್ರೂ ಬೇಕಿದ್ರೆ vote ಕೂಡ ಮಾಡ್ಬೋದು. ಸದ್ಯಕ್ಕೆ ಯಾರೂ ವೋಟ್ ಹಾಕ್ದೇ ಇರೋದ್ರಿಂದ sysop ಗಳಾದ ನಾವುಗಳೇ ಕೆಲವರು ನೋಡಿ ನೋಡಿ ಆರ್ಕೈವಿಗೆ ಎತ್ತು ಹಾಕ್ತೀವಿ. ತುಂಬಾ ಚೆನ್ನಾಗಿರೋ ಲೇಖನ ಆದ್ರೆ ಅದು ಮುಖಪುಟ ಸೇರುತ್ತೆ. ಹಾಗೇನಾದ್ರೂ ಕೆಟ್ಟದಾಗಿ ಬರೆದ್ರೆ ಡಿಲೀಟ್ ಮಾಡಿ ಹಾಕ್ತೀವಿ. ಒಂದು ತರಹ ಎಲ್ಲರೂ ಕೂಡಿ ಸಂಪಾದನೆ ಮಾಡಿದ್‌ಹಾಗೆ"

"ಓಹ್, ಹಾಗೋ!”

*******

ಇನ್ನು, ಲೆಕ್ಕವಿಲ್ಲದಷ್ಟು ಜನ ಕೇಳಿದ ಪ್ರಶ್ನೆ:

"ಏನಪ್ಪಾ ಇದು ಯುನಿಕೋಡು? ಏನ್ ಕೋಡು ಇದು?”

ಎಲ್ರಿಗೂ http://sampada.net/fonthelp ಓದಿ ಅಂತ ಹೇಳಿ ಹೇಳಿ ಬೇಜಾರಾಗಿ ಬಿಟ್ಟಿದೆ. ಜನರಿಗೆ ಓದೋಕ್ಕೆ ಬರೋದಿಲ್ವೋ ಅಥವಾ ಮುಖ ಪುಟದಲ್ಲೇ ದೊಡ್ಡದಾಗಿರುವ 'ಕನ್ನಡ ಕಾಣುತ್ತಿಲ್ವೆ' ಲಿಂಕೇ ಕಾಣೋದಿಲ್ವೋ, ಆ ದೇವರೇ ಬಲ್ಲ!

ಲಿಂಕು ಕೊಟ್ಟ ಮೇಲೆ ಸುಮಾರು ಜನ ಇದನ್ನೆ ಹೇಳೋದು:
"ಓಹ್! ಗಮನಿಸಲಿಲ್ಲ. ಈಗ ನೋಡ್ತೇನೆ"

*******

ಮೊನ್ನೆ ಮೊನ್ನೆ ಮೈಸೂರಿನ ಒಬ್ಬ ಸ್ನೇಹಿತ,

"ಲೋ ತಲೆ ಕೆಟ್ಟಿದೆ ಮಗಾ, ನಿಂಗೆ. ads ಹಾಕೋ! ಸಾಕಷ್ಟು ದುಡ್ಡು ಬರತ್ತೆ!”

"ಇಲ್ಲ ಕಣೋ. Adsಉ ಒಂದು ರೀತೀಲಿ ಕಮರ್ಶಿಯಲ್ ಟಚ್ ಕೊಡತ್ತೆ, ಫೀಲಿಂಗೇ ಹೊರಟುಹೋಗತ್ತೆ! ಸಂಪದ ads ಇಲ್ದಿದ್ರೇನೆ ಚೆಂದ"

"ಹಾಗೇನಿಲ್ಲ ಮಾರಾಯ. ಸುಮ್ನೆ ಕೆಳಗ್ ಹಾಕು. ಯಾರಾದ್ರೂ ಬೇವಕೂಫ್ ಗಳಾದ್ರೂ ಕ್ಲಿಕ್ ಮಾಡ್ತಾರೆ!”

*******

ಇನ್ನು ಮುಂದೆ ಯಾರಾದ್ರೂ ನನಗೋ ನಿಮಗೋ ಮತ್ತೆ ಈ ಪ್ರಶ್ನೆಗಳನ್ನ ಕೇಳಿದ್ರೆ, ಇದೇ ಲೇಖನವನ್ನೇ ತೋರಿಸೋದು, 'ಓದಿ' ಅಂತ ಹೇಳಿ. ಏನಂತೀರಿ?

Rating
No votes yet

Comments