ಯಡಿಯೂರಪ್ಪನವರ ಅಧಿಕಾರದ ಅಂತ...?!
ಯಡಿಯೂರಪ್ಪನವರ ಅಧಿಕಾರದ ಅಂತ
ಕಾಣ ಬಯಸಿರುವಂತಿದೆ ನಮ್ಮ ಅನಂತ
ಇಲ್ಲವಾದರೆ ವಿಶ್ವೇಶ್ವರ ಭಟ್ಟರೇ ಇಂದೀಗ
ನೈಸ್ ಕತೆ ಯಾಕೆ ಬರೆಯಬೇಕಿತ್ತು ಅಂತ
ಅನಂತರು ಒಪ್ಪಿಗೆ ನೀಡದೇ ಭಟ್ಟರು ಕತೆ
ಬರೆದರೆಂದರೆ ನಂಬಲೇ ಆಗದು ನನ್ನಿಂದ
ಅನಂತರ ಜೊತೆಗೆ ದುಡಿದ ಆ ದಿನಗಳ
ಮರೆಯಲಾಗುವುದೇ ಹೇಳಿ ಈ ಭಟ್ಟರಿಂದ
ಹೊರಗಿನವರು ಎಷ್ಟು ಕಿರುಚಾಡಿದರೂ
ಯಡ್ಡಿ ಉಳಿದಿರಬಹುದು ಅಬಾಧಿತರಾಗಿ
ಕುರ್ಚಿಯೇ ಅಡಿಯಿಂದ ಸುಡತೊಡಗಿದರೆ
ಕೂತಿರಬಹುದೇ ಇನ್ನು ನಿರಾತಂಕವಾಗಿ
ಅಂತೂ ಇಂತೂ ಈ ನಿರ್ವೀರ್ಯ ಸರಕಾರ
ಪತನಗೊಳ್ಳುವ ಎಲ್ಲ ಸೂಚನೆಯೂ ಬಂದಿದೆ
ಆದರೆ ಆಸುಮನದೊಳಗೆ ಮುಂದೆ ಅದಿನ್ಯಾವ
ಸರ್ಕಾರ ಬರಬಹುದೆಂಬ ಭಯವೂ ಕಾಡಿದೆ!!!
*************************
ಆಸು ಹೆಗ್ಡೆ
Rating
Comments
ಉ: ಯಡಿಯೂರಪ್ಪನವರ ಅಧಿಕಾರದ ಅಂತ...?!
In reply to ಉ: ಯಡಿಯೂರಪ್ಪನವರ ಅಧಿಕಾರದ ಅಂತ...?! by Harish Athreya
ಉ: ಯಡಿಯೂರಪ್ಪನವರ ಅಧಿಕಾರದ ಅಂತ...?!
ಉ: ಯಡಿಯೂರಪ್ಪನವರ ಅಧಿಕಾರದ ಅಂತ...?!