ಯಡೂರಪ್ಪನ ಸರ್ಕಾರಕ್ಕೆ ಸಪೋರ್ಟ್
ಬೆಳಗ್ಗೆನೇ ಗೌಡಪ್ಪ ಒಂದು ನಾಕು ಪಾಕೆಟ್ ಪೋಚ್ಕಂಡು ಅರಳಿ ಮರದ ಕೆಳಗೆ ಹಗ್ಗದ ಮಂಚದ ಮ್ಯಾಗೆ ಬೀಡಿ ಎಳಿತಾ ಕಿಸ್ಕಂಡಿದ್ದ. ಮಗಾ ಬೀಡಿ ಎಲ್ಲಿ ಸಿಗಲ್ವೋ ಅಂತಾ ಎರಡು ಬೀಡಿನಾ ಒಟ್ಟಿಗೆ ಸೇದ್ತಾ ಇದ್ದ. ಮಗಂದು ಹೊಗೆ ಅನ್ನೋದು ಇಟ್ಟಿಗೆ ಗುಮ್ಯಾಗೆ ಬಂದಂಗೆ ಬರೋದು. ಕೆರೆತಾವ ಹೋಗೋರು ಎಲ್ಲೋ ಬೆಂಕಿ ಹತ್ಕಂಡೈತೆ ಅಂತಾ ಚೊಂಬ್ನಾಗಿನ ನೀರನ್ನ ಹಾಕಿ ಹೋದ್ರು. ಏ ಥೂ ಅಂದು ಗೌಡಪ್ಪ ಅದನ್ನೇ ಉಫ್ ಉಫ್ ಅಂತಾ ಹಸೀ ಬೀಡಿ ಎಳಿತಾ ಇದ್ದ. ಯಾಕ್ರೀ , ಬೆಂಕಿ ಪಟ್ಟಣದಾಗೆ ಕಡ್ಡಿ ಇಲ್ಲ ಕಲಾ ಅಂದ. ಒಂದು ಧಮ್ ಹೊಡೆದು ಯಡೂರಪ್ಪ ನೀನೇ ಕಾಪಾಡಪ್ಪ ಅಂದ. ನಿಮಗ್ಯಾಕ್ರೀ ಯಡೂರಪ್ಪನ ಮೇಲೆ ಆಟೊಂದು ಪಿರುತಿ ಅಂದ ನಿಂಗ. ಅವನ ದಯೆ ಇಂದನೇ ಕಲಾ ನನಗೆ ಮಗಾ ಆಗಿರೋದು ಅಂದ. ಯಾರು ನಮ್ಮ ಯಡೂರಪ್ಪನ. ಅಯ್ಯೋ ನಿನ್ನ ಮಕ್ಕೆ ಚಾ ಚಲ್ಟಾ ಹುಯ್ಯಾ. ನಾನು ಹೇಳಿದ್ದು ಯಡಿಯೂರು ಸಿದ್ದಲಿಗೇಸ್ವರ ಕಲಾ. ಏನ್ರಲಾ ಲಿಂಕ್ ಎಲ್ಲಿಂದ ಎಲ್ಲಿಗೋ ತಗೊಂಡು ಹೋಗ್ತೀರಲ್ಲೋ ಅಂದ ಗೌಡಪ್ಪ.
ನಮ್ಮ ಗ್ರಾಮ ಪಂಚಾಯಿತಿಗೆ ನನ್ನ ಸೋದರಳಿಯನ್ನ ಟ್ರಾನ್ಸ್ ಫರ್ ಮಾಡ್ಸಿದ್ದೇ ನಮ್ಮ ಯಡೂರಪ್ಪ ಕಲಾ ಅಂದ ಗೌಡಪ್ಪ. ಯಾರು ಸಿದ್ದಲಿಂಗೇಸ್ವರ ಯಡೂರಪ್ಪನ . ಏ ಥೂ ಮುಕ್ಕಮಂತ್ರಿ ಯಡೂರಪ್ಪ ಕಲಾ. ನಾವೆಲ್ಲೋ ಕೆ.ಎ.ಎಸ್ ಇಲ್ಲಾ. ಐ.ಎ.ಎಸ್ ಟ್ರಾನ್ಸ್್ಫರ್್ ಮಾಡ್ಸಿದ್ದೀರಾ ಅಂದ್ರೆ ಕಾರ್ಯದರ್ಸಿ ಅಂತೆ ಉಗಿಯಲಾ ಮಕ್ಕೆ ಅಂದ ಸುಬ್ಬ. ಆದ್ರೂ ಟ್ರಾನ್ಸ್್ಫರ್ ಮಾಡ್ಸಿದ್ದಾರೆ. ಸಹಾಯ ಮಾಡಿದವರ ಋಣ ತೀರಿಸೋದು ನಮ್ಮ ಗೌಡಪ್ಪನ ಪರಂಪರೆ ಅಂದ. ನಿಮ್ಮ ತರಾ ಕಿತ್ತೋದು ಮನೆತನ ಅಲ್ಲ ಕಲಾ ಅಂದ. ಮಗಂದು ಏನು ರಾಜರ ಮನೆತನ.
ಅಟ್ಟೊತ್ತಿಗೆ ಪೋನ್ ಬಂತು. ಯಾರಲಾ. ನಾನಲೇ ಯಡೂರಪ್ಪ. ಕ್ಸಮಿಸಿ ಬುದ್ದಿ. ನಮ್ಮಿಂದ ತಮಗೆ ಏನು ಸೇವೆ ಆಗಬೇಕು ಅಂತಾ ಅಪ್ಪಣೆ ಆಗಲಿ ಅಂದ್ರು. ಅಲ್ಲಾ ಕಲಾ ಅಲ್ಲಿ ಸುಬ್ಬ ಮತ್ತೆ ಗ್ಯಾಂಗ್ ಜೊತೆ ನನ್ನನ್ನ ಅವಮಾನ ಮಾಡ್ತಿದ್ದೀಯಾ ಅಂತಾ ಸಾನೇ ಉಗಿದ್ರು. ಪೋನ್ ಕಟ್ಟಾದ್ ಮ್ಯಾಕೆ ಅಲ್ಲ ಕಲಾ ಯಡೂರಪ್ಪಂಗೆ ನಾನು ಇಲ್ಲಿರೋದು ಹೆಂಗೆ ಗೊತ್ತಾತು ಅಂತಾ ಯೋಸನೆ ಮಾಡ್ತಿದ್ದಾಗೆನೇ ತಂತಿ ಪಕಡು ಸೀತು ಬಂದು ನಾನು ಹೇಳಲಿಲ್ವಾ ಗೌಡ ಹೆಂಗೆ ಮಂಗ ಆಯ್ತಾನೆ ಅಂತಾ ತೆಗಿಯಲಾ 100ರೂಪಾಯಿ ಅಂದ ಸೀನಂಗೆ. ಲೇ ನೀನ್ ಏನಲಾ ಪೋನ್ ಮಾಡಿದ್ದು. ಅಯ್ಯೋ ನಿನ್ ಮಕ್ಕೆ ನಮ್ಮ ದನದ ಸಗಣಿ ಹಾಕ ಅಂತಾ ಬೆನ್ನತ್ಕಂಡು ಹೋದ. ವಾಲಾಡ್ಕಂತಾ ಚೆರಂಡ್ಯಾಗೆಲ್ಲಾ ಬಿದ್ದು, ಕೆಸರಾಗಿದ್ದ ಪಂಚೆನಾ ಹೆಗಲ ಮೇಲೆ ಹಾಕ್ಕಂಡು ಯಾರಿಗೆ ಬೇಕು ಈ ಲೋಕಾ ಅಂತಾ ಹೋದ.
ಸರಿ ಸಂಜೆ ತಾವ ಮನೆಹತ್ರ ಹೋದ್ರೆ ಗೌಡಪ್ಪ ಬಾಳ ಸೀರಿಯಸ್ಸಾಗಿ ಕುಂತಿದ್ದ. ಯಾಕ್ರೀ ಗೌಡರೆ. ಲೇ ಯಡೂರಪ್ಪನ ಸರ್ಕಾರ ಅಲ್ಲಾಡ್ತಾ ಐತೆ ಅಂತ ಪೋನ್ ಬಂತು. ಅದಕ್ಕೆ ಲಾರೀಲ್ಲಿ ಒಂದು ಲೋಡ್ ಬೊಂಬು, ಗೂಟ ಹಾಕ್ಕೊಂಡು ಹೋಗ್ತಾ ಇದೀನಿ ಅಂದ. ಏನು ಹೆಣ ಹೊರಕ್ಕಾ, ಅಲ್ಲ ಕಲಾ ಸರ್ಕಾರಕ್ಕೆ ಸಪೋರ್ಟ್ ಕೊಡಕ್ಕೆ ಅಂದ. ಸರೀ ಹೋಗ್ರೀ ಐತೆ ಅಂದ ನಿಂಗ. ಸರಿ ಲಾರಿ ಬಂತು. ಬೊಂಬು ಗೂಟ ಲೋಡ್ ಮಾಡಿದ್ವಿ.ಕೋಮಲ್ ನೀನು ಬಾರಲಾ ಅಂದ. ರಾತ್ರಿ ಊಟಕ್ಕೆ ಬರಕ್ಕಿಲ್ಲಾ ಕಣಮ್ಮಿ , ಅನ್ನ ಜಾಸ್ತಿ ಮಾಡಬೇಡ. ಅಕ್ಕಿ ದುಬಾರಿ ಆಗೈತೆ ಅಂತಾ ಅವನ ಹೆಂಡರಿಗೆ ಹೇಳಿ ಲಾರಿ ಹತ್ತಿದ. ಏ ಥೂ. ಮಗಂದು ಒಂದು ಚಪ್ಪಲಿ ರಸ್ತೇಲಿ ಬಿದ್ದಿತ್ತು. ಮಗಂದು ಪಂಚೆ ಗಬ್ಬುನಾಥ ಹೊಡೀತಾ ಇತ್ತು. ಡ್ರೇವರ್ ಎರಡು ಕಿತಾ ಆಮ್ಲೇಟ್ ಹಾಕಿದ್ದ. ಯಾಕಲಾ ಕುಡಿದಿದೀಯಾ ಅಂದ್ರೆ. ಗಬ್ಬನಾಥಕ್ಕೆ ಒಂದಿಷ್ಟು ಬೆಂಕಿಹಾಕ ಅನ್ನೋನು.
ಸೀದಾ ಕೇಸವ ಕೃಪಾಕ್ಕೆ ಹೋಗಿ ಯಡೂರಪ್ಪ ಇದಾರಾ . ಇಲ್ಲ ಅವರು ರೇಸ್ ಕೋರ್ಸ್ ರಸ್ತ್ಯಾಗೆ ಇರೋ ಮನೇಲಿ ಇದಾರಾ , ಇಲ್ಲಾ ಈಗ ಡಾಲರ್ಸ್ ಕಾಲೋನಿಗೆ ಹೋದ್ರು ಅಂದ್ರು. ಅಲ್ಲಿ ಹೋದ್ರೆ ಬರ್ತಾರೆ ಕುಂತ್ಕಳ್ರಿ ಅಂತಾ ಯಡೂರಪ್ಪನ ಮಗಳು ಬಿಸಿ ಚಾ ಕೊಟ್ರೆ. ಅದಕ್ಕೆ ಎರಡು ಸುಗರ್ ಮಾತ್ರೆ ಹಾಕ್ಕೊಂಡು ಕುಡಿದ. ಅಲ್ಲಿರೋ ಮುಖಂಡರೆಲ್ಲಾ ಸಾನೇ ಬಿಸಿಯಾಗಿದ್ರು. 20 ಜನ ಸಾಸಕರನ್ನ ಹುಡುಕಿಕೊಡಿ ಅಂತಾ ಕಂಪ್ಲೇಂಟ್ ಕೊಟ್ಟಿದೀವಿ ಅಂತಾ ಇದ್ರು. ಅಟ್ಟೊತ್ತಿಗೆ ಗೌಡಪ್ಪ ಲಾರಿ ಇಲ್ಲೇ ಇದ್ರೆ ಸಾನೇ ಬಾಡಿಗೆ ಆಯ್ತದೆ ಅಂತಾ, ಬೊಂಬು ಗೂಟನ್ನೆಲ್ಲಾ ಯಡೂರಪ್ಪನ ಎದುರು ಮನೆ ಮುಂದೆ ಹಾಕ್ಸಿದ್ದ. ಬಂದೋರೆಲ್ಲಾ ಯಡೂರಪ್ಪ ಗಣಿ ದಂಧೆ ಮಾಡೋದು ಬಿಟ್ಟು ಈ ಬೊಂಬು ಬಜಾರ್ ಬಿಸಿನೆಸ್ ಯಾವಾಗ ಸುರುಹಚ್ಕಂಡ್ರು ಅಂತಾ ಯೋಸನೆ ಮಾಡೋರು. ಅಟ್ಟೊತ್ತಿಗೆ ಯಡೂರಪ್ಪ ಬಂದ್ರು. ಸೀದಾ ಎದುರು ಮನೆಗೆ ಹೋದ್ರು. ಸಂತಾಪ ಹೇಳ್ ಬರವಾ ಅಂತಾ. ಅಲ್ಲಿ ಎಲ್ರೂ ಸರ್ಕಾರದ ಖೋ ಖೋ ಆಟ ಟಿವ್ಯಾಗೆ ನೋಡ್ತಾ ಕುಂತಿದ್ರು. ಏ ಥೂ ಅಂದು ಮನೆಗೆ ಬಂದ್ರು. ಏನಲಾ ಗೌಡ ಹೆಂಗಲಾ ಇದೀಯಾ. ಎಲ್ಲಾ ನಿಮ್ಮ ದಯೆ ಬುದ್ದಿ. ಅಂದಂಗೆ ನೀವು ಹೇಳಿದೀರಾ ಅಂತಾ ರೇಟು ದುಬಾರಿಯಾದ್ರೂ ಸರ್ಕಾರಕ್ಕೆ ಸಪೋರ್ಟ್ ಮಾಡುವಾ ಅಂತಾ ಬೊಂಬು ತಂದಿದೀನಿ ಅಂದ.
ಬೊಂಬು ಯಾಕಲಾ ಅಂತು ಯಡೂರಪ್ಪ. ನಿಮಗೆ ಸಪೋರ್ಟ್ ಕೊಡಕ್ಕೆ. ಅಯ್ಯೋ ನಿನ್ನ ಬುದ್ದಿಗೆ ಒಂದಿಷ್ಟು ಕಲಗಚ್ಚು ಹಾಕ. ಅಟ್ಟೊತ್ತಿಗೆ ಯಾರೋ ಹೋಗಿದಾರೆ ಅಂತಾ ಎದುರು ಮನೆಯಲ್ಲಿ ಸಾನೇ ಜನ. ಅವರು ಬಂದು ಈ ಬೊಂಬು ತಂದು ಹಾಕಿದೋನು ಚಾಪೆ ಸುತ್ಕಂಡ್ ಹೋಗಾ ಅಂತಾ ಬಯ್ತಾ ಇದ್ರು. ಸರೀ ಅಲ್ಲಿರೋ ಬೊಂಬು ಎಲ್ಲಾ ಅರ್ಧ ರೇಟಿಗೆ ಮಾರಿ ಇಸ್ಮಾಯಿಲ್ ಬಸ್ಸಿಗೆ ಬಂದ್ವಿ. ನೋಡಿದ್ರೆ ಗೌಡಪ್ಪನ ಅಳಿಯ ಕಾರ್ಯದರ್ಸಿಗೆ ಬಳ್ಳಾರಿಗೆ ವರ್ಗಾವಣೆ ಆಗಿತ್ತು. ಬೊಂಬು ತಗೊಂಡು ಹೋಗಿದ್ದ ಲಾರ್ಯಾಗೆ ಪ್ಯಾಕ್ ಮಾಡಿಸ್ತಾ ಇದ್ದ. ಯಾಕಲಾ. ಯಡೂರಪ್ಪ ಮಾಡ್ಸಿದಾರೆ ಅಂದ. ಈಗ ಗೌಡರೆ ಸರ್ಕಾರಕ್ಕೆ ಸಪೋರ್ಟು ಅಂದ್ರೆ ಯಾಕೆ ಸುಮ್ಕಿರಕ್ಕೆ ಬರಲ್ವಾ ಅಂತಾನೆ.
Comments
ಉ: ಯಡೂರಪ್ಪನ ಸರ್ಕಾರಕ್ಕೆ ಸಪೋರ್ಟ್
In reply to ಉ: ಯಡೂರಪ್ಪನ ಸರ್ಕಾರಕ್ಕೆ ಸಪೋರ್ಟ್ by malathi shimoga
ಉ: ಯಡೂರಪ್ಪನ ಸರ್ಕಾರಕ್ಕೆ ಸಪೋರ್ಟ್
ಉ: ಯಡೂರಪ್ಪನ ಸರ್ಕಾರಕ್ಕೆ ಸಪೋರ್ಟ್
ಉ: ಯಡೂರಪ್ಪನ ಸರ್ಕಾರಕ್ಕೆ ಸಪೋರ್ಟ್
ಉ: ಯಡೂರಪ್ಪನ ಸರ್ಕಾರಕ್ಕೆ ಸಪೋರ್ಟ್
In reply to ಉ: ಯಡೂರಪ್ಪನ ಸರ್ಕಾರಕ್ಕೆ ಸಪೋರ್ಟ್ by suresh nadig
ಉ: ಯಡೂರಪ್ಪನ ಸರ್ಕಾರಕ್ಕೆ ಸಪೋರ್ಟ್
ಉ: ಯಡೂರಪ್ಪನ ಸರ್ಕಾರಕ್ಕೆ ಸಪೋರ್ಟ್
In reply to ಉ: ಯಡೂರಪ್ಪನ ಸರ್ಕಾರಕ್ಕೆ ಸಪೋರ್ಟ್ by gopinatha
ಉ: ಯಡೂರಪ್ಪನ ಸರ್ಕಾರಕ್ಕೆ ಸಪೋರ್ಟ್
ಉ: ಯಡೂರಪ್ಪನ ಸರ್ಕಾರಕ್ಕೆ ಸಪೋರ್ಟ್