ಯಾಣ - ಕೆಲವು ಸಮಝಾಯಿಶಿಗಳು

ಯಾಣ - ಕೆಲವು ಸಮಝಾಯಿಶಿಗಳು

ವಾರದ ಕಾಲ ಊರಲ್ಲಿಲ್ಲದ ಕಾರಣ ಸಂಪದವನ್ನು ನೋಡಲಾಗಿರಲಿಲ್ಲ. ಮೊನ್ನೆ ಬಂದು ಅನಿವಾಸಿ ಎಂದು ಅಂಕಿತವನ್ನು ಇಟ್ಟುಕೊಂಡಿರುವವರ ಈ ಲೇಖನವನ್ನು (http://www.sampada.net/article/20676) ಓದುತ್ತಿದ್ದಂತೆ ದಿಗ್ಭ್ರಾಂತನಾದೆ! ಏಂಜೆಲ್ ಜಲಪಾತದದಿಂದ ನೀರಾವಿ ಘನೀಭವಿಸಿ ನೀರು ಬೀಳುವ ತತ್ವವನ್ನು ನಾನು ಓದಿದ್ದು ಪೂರ್ಣಚಂದ್ರ ತೇಜಸ್ವಿಯವರ ಮಿಲೆನಿಯಂ ಸಿರೀಸ್ ಪುಸ್ತಕವೊಂದರಲ್ಲಿ. (ಯಾವ ಪುಸ್ತಕ ಎಂದು ಹೇಳುವುದಿಲ್ಲ. ಆಸಕ್ತಿ ಇರುವವರು ಹುಡುಕಿಕೊಳ್ಳಬಹುದು) ಏಂಜೆಲ್ ಜಲಪಾತ ಬೀಳುವುದು ಟಾಪೂಗಳೆಂಬ ಪ್ರಾಕೃತಿಕ ಶಿಲಾವಿನ್ಯಾಸಗಳಿಂದ. ಟಾಪೂಗಳು ಭೂಮಿಯೊಳಗಣ ಒತ್ತಡದಿಂದ ಮೇಲೆದ್ದು ನಿಂತಿರುವ ಶಿಲಾ ಮಾದರಿಗಳು. ಇವುಗಳ ಮೇಲೆ ನೀರಿನ ಸೆಲೆ ಇರುವ ಸಾಧ್ಯತೆ ತೀರಾ ಕಡಿಮೆ. ಸೆಲೆಯಿದ್ದರೂ ಆ ಪ್ರಮಾಣದಲ್ಲಿ ನೀರು ಬೀಳುವುದು ಸಾಧ್ಯತೆಗಳಿಲ್ಲ.
ಇನ್ನು ಲೇಖಕರು ಹೇಳಿರುವ ಕೆರೆಪ್ ನದಿಯ ಬಗ್ಗೆ ಹಾಗೂ ಜಲಪಾತದ ಬಗ್ಗೆ ಹೀಗೆ ಹೇಳಲಾಗಿದೆ."The base of the falls feeds into the Kerep River (alternately known as the Rio Gauya) which flows into the Churun River, a tributary of the Carrao River." . ನಾನು ಅನುವಾದವನ್ನು ತಿರುಚುತ್ತೇನೆ ಎಂದು ಕೆಲವು ದೊಡ್ಡ ಮನುಷ್ಯರು ಆರೋಪ ಮಾಡುತ್ತಿರುವುದರಿಂದ ಅದನ್ನು ಹಾಗೆಯೆ ಬರೆಯುತ್ತಿದ್ದೇನೆ. " base of the falls feeds into the Kerep River " ಅಂದರೇನು? ಸಲ್ಪ ವಿವೇಚಿಸಿ. ನಮ್ಮ ಶರಾವತಿ ನದಿ ಕಂದಕದೊಳಗೆ ಬಿದ್ದು ಜೊಗದಲ್ಲಿ ಜಲಪಾತವನ್ನು ಸೃಷ್ಟಿಸಿದಂತೆ ಕೆರೆಪ್ ನದಿ ಎಂಜೆಲ್ ಜಲಪಾತವನ್ನು ಸೃಷ್ಟಿಸುವುದಿಲ್ಲ. ಕೆರೆಪ್ ನದಿಗೆ ಏಂಜೆಲ್ ಜಲಪಾತದಿಂದ ನೀರು ಹೋಗುತ್ತದೆಯೇ ಹೊರತು ಕೆರೆಪ್ ನದಿಯಿಂದ ಏಂಜೆಲ್ ಜಲಪಾತಕ್ಕಲ್ಲ. ಕೆರೆಪ್ ನದಿ ತಾಪೂವಿನ ಮೇಲೆ ಹರಿಯುವುದಿಲ್ಲ
ಯಾಣದಲ್ಲಿರುವುದು ಪ್ರಾಕೃತಿಕ ಅಗ್ನಿಶಿಲಾ ಬಂಡೆಗಳು. ಸ್ಥಳದಲ್ಲಿ ನೀರಿನ ಜಿನುಗುವಿಕೆಯನ್ನು ಕಂಡಾಗ ನೆಲದಿಂದೆದ್ದ ಸೆಲೆ ಜಿನುಗುವುದಕ್ಕಿಂತ ನಾನು ಹೇಳಿದ ರೀತಿಯಲ್ಲೇ ನೀರು ಸಂಗ್ರಹವಾಗಿರುವ ಸಾಧ್ಯತೆಗಳು ಹೆಚ್ಚು ಕಂಡವು. ನಾನು ವಿಷಯವನ್ನು ಸಂಭಾಷಣೆಯ ರೂಪದಲ್ಲಿ ಬರೆದಿದರಿಂದಲೂ ಮತ್ತು ಒಂದು ಸಾಧಾರಣ ವಿಜ್ಞಾನ ವಿಷಯವನ್ನು ಬರೆದಿದ್ದರಿಂದ ತೇಜಸ್ವಿಯವರ ಹೆಸರನ್ನು ತೆಗೆದುಕೊಳ್ಳಲಿಲ್ಲ. ಅಲ್ಲದೇ ಇದನ್ನು ಸಂಶೋಧಿಸಿದವರು ತೇಜಸ್ವಿಯವರಲ್ಲ ಮತ್ತು ಅವರೂ ಸಹ ಅದನ್ನು ಬೇರಲ್ಲಿಂದಲೋ ತೆಗೆದುಕೊಂಡದ್ದು.

ಇನ್ನು ನೀರು ಎಕರೆಗೆ ಎಷ್ಟು ಆವಿಯಾಗುತ್ತದೆ ಎಂಬುದರ ಬಗ್ಗೆ! ಲಕ್ಷಾಂತರ ಟನ್ ಎಂಬುದು ಉತ್ಪ್ರೇಕ್ಷೆಯೇ ಇರಬಹುದು. ಅದು ಲಕ್ಷಾಂತರ ಟನ್ ಅಲ್ಲ ಸಾವಿರಾರು ಲೀಟರ್ ಎಂದು ಯಾರಾದರೂ ಹೇಳಿದ್ದರೆ ಅಥವಾ ಅನಿವಾಸಿ ಎಂಬುವವರೇ ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಇದಕ್ಕಾಗಿ ಇಷ್ಟೊಂದು ರಂಪ ಮಾಡುವ ಅವಶ್ಯಕತೆ ಏನಿತ್ತು? ಉಳಿದವರಿಗೆ ಇಂತಹ ವಿಷಯದ ಬಗ್ಗೆ ಚರ್ಚೆ ನಡೆಯಬೇಕು ಎಂದು ಪುಕ್ಕಟೆ ಸಲಹೆ ಕೊಡುವ ಬದಲು ತಾವೇ ಆ ಕೆಲಸ ಮಾಡಬಹುದಿತ್ತಲ್ಲ! ಈ ಲೇಖನದಲ್ಲಿ ನನ್ನ ಫ಼ೊಕಸ್ ಇದ್ದದ್ದು ಯಾಣದಲ್ಲಿ ನೀರು ಜಿನುಗುವ ಕಾರಣದ ಬಗ್ಗೆ ಮತ್ತು ನಾನು ನನ್ನ ಸ್ನೇಹಿತರ ಕುತೂಹಲವನ್ನು ಹಾಳು ಮಾಡಿದ್ದರ ಬಗ್ಗೆ ! ಬಹುಷಃ ಎಲ್ಲರೂ ಈ ಕಡೆ ಗಮನ ಕೇಂದ್ರೀಕರಿಸಿದರೇ ಹೊರತು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಲಿಲ್ಲ.

ಯಾಣದಲ್ಲಿ ನೀರು ಜಿನುಗುವ ತಾಣವನ್ನು ನೋಡಿದಾಗ ಇವೆರಡರ ಬಗ್ಗೆ ವಿಶ್ಲೇಷಿಸಿ ನನ್ನ ಅಭಿಪ್ರಾಯವನ್ನು ಸ್ನೇಹಿತರ ಎದುರಿಗೆ ಇಟ್ಟೆ. ಅವರಿಗೆ ಸತ್ಯ ಕಂಡಿದ್ದರಿಂದ ಒಪ್ಪಿಕೊಂಡರು. ಅದು ನಾನು ನಡೆಸಿದ ವಿಶೇಷ ಸಂಶೋಧನೆಯಲ್ಲ. ಒಂದು ಸರಳವಾದ ವಿಜ್ಞಾನದ ತತ್ವ ಅಷ್ಟೇ! ಯಾಣದಲ್ಲಿ ನೀರು ಜಿನುಗುವ ತತ್ವ ನನ್ನ ಸ್ವಂತ ವಿಶ್ಲೇಷಣೆ. ಇದರಲ್ಲಿ ತಪ್ಪಿದ್ದರೆ ಇದ್ದೀತು. ಎಷ್ಟು ಜನ ವಿಜ್ಞಾನಿಗಳ ಸಂಶೊಧನೆಯನ್ನು ಅಲ್ಲಗಳೆಯಲಾಗಿಲ್ಲ! ಅದನ್ನು ಅಲ್ಲೇ ನೇರವಾಗಿ ತೋರಿಸುವುದನ್ನು ಬಿಟ್ಟು ಇಡೀ ಸಂಪದ ಓದುಗರ ಇಗ್ನೊರೆನ್ಸ್ ಬಗ್ಗೆ ಪ್ರಶ್ನೆ ಮಾಡುವುದೆಂಥದು ? ನನ್ನ ಬುದ್ಧಿಗೆ ಇದು 'ಹೀಗೆ ಇದೆ' (http://www.sampada.net/article/20257) ಎಂದು ತೋಚಿತು. ಅಭಿಪ್ರಾಯ ವ್ಯಕ್ತಪಡಿಸುವುದು ಅಪರಾಧವೇ? ನಾನೇನೊ ಘೋರ ಪಾತಕ ಎಸಗಿರುವವನಂತೆ ನನ್ನ ಮೇಲೆ ತಪ್ಪನ್ನು ಹೋರಿಸಿದ್ದೇಕೆ? ತಪ್ಪು ಮಾಹಿತಿ ನೀಡಿದ್ದೇನೆ ಎಂಬ ಆರೋಪಗಳು ಏಕೆ ?

ನನ್ನ ಅಭಿಪ್ರಾಯಕ್ಕೆ ಮೂಲಗಳೇನು ಕಾರಣಗಳೇನು ಎಂದು ನೇರವಾಗಿಯೇ ಕೇಳಬೇಕಿತ್ತು. ನುಣುಚಿಕೊಂಡು ಈಗ ಆರೋಪ ಹೋರಿಸುತ್ತಿರುವುದು ಯಾವ ರೀತಿಯ ವಿವೇಕ? ನನಗೆ ಸರಿಯೆಂದು ತೋಚಿದ ವಿಚಾರವನ್ನು ಹೇಳುವುದು ಬೇಜವಾಬ್ದಾರಿ ಎಂದ ವಿನುತಾರವರು ಪುನರ್ವಿಮರ್ಶಿಸದ ತಮ್ಮ ತಪ್ಪನ್ನು ನನ್ನ ತಲೆಗೆ ಕಟ್ಟಿಬಿಟ್ಟರು! ಇವರ ಪ್ರಕಾರ ನೋಡಿದರೆ ವಿಶ್ವದೆದುರಿಗೆ ಪ್ರಕೃತಿಯ ರಹಸ್ಯವನ್ನು ತೆರೆದಿಡಲು ಪ್ರಯತ್ನಿಸಿದ ಐನ್‍ಸ್ಟೈನ್, ಭೊರ್, ನ್ಯೂಟನ್, ಪೌಲಿ ಇತ್ಯಾದಿ ವಿಜ್ಞಾನಿಗಳು ಬೇಜವಾಬ್ದಾರಿ ವ್ಯಕ್ತಿಗಳು ಏಕೆಂದರೆ ಇವರ ಅನೇಕ ಅಭಿಪ್ರಾಯಗಳು, ಸಂಶೋಧನೆಗಳು ಸುಳ್ಳು ಎಂದು ನಿರೂಪಿತವಾಗಿವೆ! ನಾನು ಹೇಳಿದ್ದನ್ನು ಒಪ್ಪಿಕೊಳ್ಳಿ ಎಂದು ನಾನು ಯಾರಿಗೂ ಎಂದೂ ಹೆಳಿಲ್ಲ. ನೇರವಾಗಿ ಪ್ರಶ್ನಿಸಿ. ಉತ್ತರ ಕೊಡುತ್ತೇನೆ. ಅದು ನನ್ನ ಕರ್ತವ್ಯ! ಯಾವ ವಿಷಯವಾದರೂ ಅಷ್ಟೆ!.
ನನ್ನ ವಿಶ್ಲೇಷಣೆಯ ಬಗ್ಗೆ ಮಾಹಿತಿಯ ಬಗ್ಗೆ ನೇರವಾಗಿ ನನ್ನನ್ನೇ ಕೇಳದೆ ಅದು ತಪ್ಪು ಮತ್ತು ಸುಳ್ಳು ಮಾಹಿತಿ ಎಂದು ನಿರ್ಧಾರಕ್ಕೆ ಬಂದವರ(ವಿನುತಾ ಎಂ .ವಿ ಸೇರಿ) ನಿಲುವು ಬಾಲಿಶವಾದದ್ದು, ವಿವೇಚನಾರಹಿತವಾದದ್ದು ಹಾಗೂ ಮೂರ್ಖತನದ್ದು.

Rating
No votes yet

Comments