ಯಾರು ದೊಡ್ಡವರು ?

ಯಾರು ದೊಡ್ಡವರು ?

 ಅಮೇರಿಕ ಮತ್ತು ಇಂಗ್ಲೆಂಡ ಮಧ್ಯೆ ಘೋರ ಯುದ್ಧ ನಡೆಯುತ್ತಿದ್ದ  ಕಾಲ ಅದು. ಒಂದು ದಿನ ಅಮೇರಿಕಾದ ಸೈನಿಕರು ತುಂಬ ಭಾರವಾದ ಮರದ ದಿಮ್ಮಿಯೊಂದನ್ನು ಬೆಟ್ಟದ ಮೇಲಕ್ಕೆ ತೆಗೆದುಕೊಂಡು ಹೋಗಬೇಕೆಂದು ಸೇನಾಧಿಕಾರಿಯ ಅಪ್ಪಣೆಯಾಗಿತ್ತು. ಸೇನಾಧಿಕಾರಿ ದೂರದಲ್ಲಿ ನಿಂತು ಆದೇಶಿಸುತ್ತಿದ್ದ.
ಸೈನಿಕರಿಗೆ  ಇನ್ನೋರ್ವನ ನೆರವು  ದೊರೆತರೆ ಸುಲಭವಾಗಿ ಸಾಗಿಸಬಹುದಿತ್ತು.ಅದೇ ವೇಳೆಗೆ ಸಾಧಾರಣ ಉಡುಪು ಧರಿಸಿದ್ದ ವ್ಯಕ್ತಿಯೋರ್ವ ಅಲ್ಲಿಗೆ ಬಂದ. ಅವನು  ಸೈನಿಕರ ಅವಸ್ಥೆಯನ್ನು ನೋಡಿ ಸೇನಾಧಿಕಾರಿಯ ಬಳಿ ಬಂದು "ನೀನೇಕೆ ಅವರಿಗೆ ನೆರವಾಗಬಾರದು?" ಎಂದು ಕೇಳಿದಾಗ ಸೇನಾಧಿಕಾರಿ ಸಿಡುಕಿನಿಂದ "ಅದು ನನ್ನ ಕೆಲಸವಲ್ಲ" ಎಂದಾಗ ಆ ವ್ಯಕ್ತಿ ಮರುಮಾತಾಡದೇ ಸೈನಿಕರ ಬಳಿ ಹೋಗಿ ನೆರವು ನೀಡಿದ.
           ಕೆಲಸವಾದ ಮೇಲೆ ಆತ ಸೇನಾಧಿಕಾರಿಗೆ ಹೇಳಿದ " ಇನ್ನೊಮ್ಮೆ ಇಂತಹ ಕೆಲಸವಿದ್ದರೆ ನಿನ್ನ ಸೇನಾದಂಡನಾಯಕರಿಗೆ ಹೇಳಿ ಕಳಿಸು " ಎಂದ. ತಕ್ಷಣ ಕಕ್ಕಾಬಿಕ್ಕಿಯಾದ ಸೇನಾಧಿಕಾರಿಗೆ ಆ ವ್ಯಕ್ತಿಯ ಗುರುತು ಸಿಕ್ಕಿತು. ಆತ  ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಆತನೇ ಅಮೇರಿಕಾದ ಸೇನಾ ದಂಡನಾಯಕ ಜಾರ್ಜ ವಾಷಿಂಗ್ಟನ್.  ಆಗ ಸೇನಾಧಿಕಾರಿ "ತನ್ನನ್ನು ಕ್ಷಮಿಸಿರಿ" ಎಂದಾಗ ಜಾರ್ಜ ವಾಷಿಂಗ್ಟನ್.  " ನಾನು ಯಾರೇ ಆಗಿರಲಿ ಅದು ಮುಖ್ಯವಲ್ಲ.ಶ್ರಮಜೀವಿಗಳಿಗೆ ನೆರವಾಗುವದು ಮನುಷ್ಯನಾದವನ ಪ್ರಥಮ ಕೆಲಸ " ಎಂದರು.ಸೇನಾಧಿಕಾರಿ ನಮ್ರತೆಯಿಂದ ತಲೆಬಾಗಿದ.

Rating
No votes yet

Comments