ಯಾರು ಹೇಳುತ್ತಾರೆ ಇಲ್ಲಿ ಗೌಡರ ಆಡಳಿತ ಮುಗಿದಿದೆ ಎಂದು...
ಯಾರು ಹೇಳುತ್ತಾರೆ ಇಲ್ಲಿ ಗೌಡರ ಆಡಳಿತ ಮುಗಿದಿದೆ ಎಂದು
ನಮ್ಮ ರಾಜ್ಯದಲ್ಲಿ ನಡೆಯುತ್ತಿದೆ ಗೌಡಾರ ಆಡಳಿತವೇ ಇಂದು
ಅಂದು ದೇವೇಗೌಡರ ನಂತರ ಅವರ ಮಗ ಕುಮಾರ ಗೌಡಾ
ಹಾಗೀಗ ನಮ್ಮ ಯಡ್ಯೂರಪ್ಪನವರೂ ಆಗಿಲ್ಲವೇ ಹೇಳಿ ಗೌಡಾ
ಗೌಡರ ಮಕ್ಕಳೀ ಹೊಸಾ ಗೌಡಾರಿಗೆ ಅದೆಲ್ಲಿ ಗೌರವ ಕೊಡುತ್ತಾರೆ
ಆದರೆ ರಾಜ್ಯದ ಉದ್ದಗಲಕ್ಕೂ ಜನ ಇವರನ್ನು ಗೌಡಾ ಅನ್ನುತ್ತಾರೆ
ನಮ್ಮ ಗೃಹಮಂತ್ರಿಯನ್ನು ಎಲ್ಲ ಡಾಕ್ಟರ್ ಡಾಕ್ಟರ್ ಕರೆಯುತ್ತಾರೆಂದು
ನಮ್ಮ ಮುಖ್ಯಮಂತ್ರಿಗಳು ಪಡೆದಿದ್ದಾರೆ ಗೌರವ ಡಾಕ್ಟರೇಟು ಇಂದು
ನಾವು ಗೃಹಮಂತ್ರಿಯನು ಡಾ. ವಿ. ಎಸ್. ಆ. ಎಂದು ಕರೆಯುವಂತೆ
ಮುಖ್ಯಮಂತ್ರಿಯನ್ನು ಡಾ. ಬಿ.ಎಸ್. ವೈ. ಎಂದು ಕರೆಯಬಹುದಂತೆ
ನಮ್ಮ ಗೃಹಮಂತ್ರಿ ರೋಗಿಗಳ ನಾಡಿ ಬಡಿತವನ್ನು ಅರಿಯುವಂತೆ
ನಮ್ಮ ಮುಖ್ಯಮಂತ್ರಿಗಳು ಜನರ ಮಿಡಿತವನ್ನು ಅರಿಯಬೇಕಂತೆ
ಅವರು ಗಮನ ಕೊಡುತ್ತಿರಲಿ ರಾಜ್ಯದ ಸುರಕ್ಷೆಯ ಆರೋಗ್ಯದತ್ತ
ಇವರು ಗಮನ ನೀಡಲಿ ಜನರಿಗೆ ನೆಮ್ಮದಿಯ ಜೀವನ ನೀಡುವತ್ತ
- ಆಸು ಹೆಗ್ಡೆ
Rating
Comments
ಉ: ಯಾರು ಹೇಳುತ್ತಾರೆ ಇಲ್ಲಿ ಗೌಡರ ಆಡಳಿತ ಮುಗಿದಿದೆ ಎಂದು...
In reply to ಉ: ಯಾರು ಹೇಳುತ್ತಾರೆ ಇಲ್ಲಿ ಗೌಡರ ಆಡಳಿತ ಮುಗಿದಿದೆ ಎಂದು... by asuhegde
ಉ: ಯಾರು ಹೇಳುತ್ತಾರೆ ಇಲ್ಲಿ ಗೌಡರ ಆಡಳಿತ ಮುಗಿದಿದೆ ಎಂದು...