ಯಾರೆ ನೀ ಚಲುವೆ..................
ಯಾರೆ ನೀ ಚಲುವೆ
ಕನಸಿನಲಿ ನೀ ಯಾಕೆ ಬಂದು ಕಾಡುವೆ
ಇಲ್ಲ ಸಲ್ಲದ ಆಸೆ ನೀ ಯಾಕೆ ಹುಟ್ಟಿಸುವೆ
ಹುಟ್ಟಿಸಿ ಸ್ವರ್ಗಕ್ಕೆ ನೀ ಕೊಂಡೊಯ್ಯುವೆ
ಕಣ್ಣು ಬಿಟ್ಟೊಡನೆ ನೀ ಯಾಕೆ ಮಾಯವಾಗುವೆ
ಯಾರೆ ನೀ ಚಲುವೆ …....................
ಯಾರೆ ನೀ ಚಲುವೆ
ಯಾರೂ ಕೊಡದಷ್ಟು ಪ್ರೀತಿ ನೀ ಕೊಡುವೆ
ಮನಸ್ಸು ಚಿಂತೆಗೀಡಾದಾಗ ಜೊತೆನಿಲ್ಲವೆ
ಕನಸಿನಲಿ ನನ್ನ ಜೊತೆ ಪಿಸು ಮಾತನಾಡುವೆ
ಕಣ್ಣು ಬಿಟ್ಟೊಡನೆ ನೀ ಯಾಕೆ ಮಾಯವಾಗುವೆ
ಯಾರೆ ನೀ ಚಲುವೆ..................
ಯಾರೆ ನೀ ಚಲುವೆ
ಒಂದು ದಿನ ನೀ ಕಾಣದಾದರೆ ಬಾರದೆ
ನನಗೆ ನಿದ್ದೆ ನಿನಗಾಗಿ ಕನಸಿನಲಿ ದಿನವೂ ಕಾಯುವೆ
ಅದರಲ್ಲೆ ನನಗೆ ದಿನವೂ ಹರುಷವೆ
ಆದರೆ ಕಣ್ಣು ಬಿಟ್ಟೊಡನೆ ನೀ ಯಾಕೆ ಮಾಯವಾಗುವೆ
ಯಾರೆ ನೀ ಚಲುವೆ......................
ಯಾರೆ ನೀ ಚಲುವೆ
ದಿನವೂ ದೇವರಲಿ ಬೇಡುವೆ
ಕನಸಿನಲಿ ಬರೋ ಚಲುವೆಯೆ
ಆಗಲಿ ಕೈ ಹಿಡಿದು ನಡೆಸೊ ಬಾಳ ಸಂಗಾತಿ
ದಿನವೂ ಬರುವುದಾ ನೀ ಮರೆಯ ಬೇಡವೆ
ಯಾರೆ ನೀ ಚಲುವೆ..................
ನಿಮ್ಮವ
ಮಧುಸೂದನ್ ಗೌಡ
Rating
Comments
ಉ: ಯಾರೆ ನೀ ಚಲುವೆ..................
In reply to ಉ: ಯಾರೆ ನೀ ಚಲುವೆ.................. by ಅರವಿಂದ್
ಉ: ಯಾರೆ ನೀ ಚಲುವೆ..................