ಯಾವ ಊರಿನ ಚೆಲುವೆ

ಯಾವ ಊರಿನ ಚೆಲುವೆ

ಯಾವ ಊರಿನ ಚೆಲುವೆ

ನಿನ್ನ ಮನವ ಕದ್ದಿಹಳು

ನಿನ್ನೆದೆಯ ಒಲವೆಲ್ಲ

ತಾನೊಬ್ಬಳೆ ಬಾಚಿಕೊ೦ಡವಳು

ಹುಣ್ಣಿಮೆಯ ಹಾದಿಯಲಿ

ಜೊತೆಯಾಗಿ ಬ೦ದವಳು

ಚೆ೦ದಿರನ ಕಾ೦ತಿಯೆನೆ

ನಾಚುವ೦ತೆ ಮಾಡಿದವಳು

ಮು೦ಗಾರು ಮಳೆಯಲ್ಲಿ

ಮಿ೦ಚಾಗಿ ಸುಳಿದವಳು

ಸ್ವಾತಿಯ ಹನಿಗಳ ಹಾಗೆ

ನಿನ್ನೆದೆಯಲ್ಲಿ ಮುತ್ತಾದವಳು

ಯಾರವಳು ಯಾರವಳು

ಬೆಳ್ಮುಗಿಲಿನ ಒಡತಿಯೊ

ಬೆಳ್ದಿ೦ಗಳ ರಾಣಿಯೊ

ನೀಲ್ಗಡಲಿನ ನೀಲವೇಣಿಯೊ

- ಜಯಪ್ರಕಾಶ. ನೇ. ಶಿವಕವಿ

Rating
No votes yet