ಯುಗಾದಿ ಹಬ್ಬದ ಶುಭಾಶಯಗಳು

ಯುಗಾದಿ ಹಬ್ಬದ ಶುಭಾಶಯಗಳು

ಸಿಂಗರಿಸಿಕೊಂಡಿದೆ ಪ್ರಕೃತಿ ವಸಂತರಾಜನ ಸ್ವಾಗತಿಸಲು....
ಮೂಡುತಿವೆ ಹೊಂಗಿರಣಗಳು ಈ ಭೂಮಿಯ ಚುಂಬಿಸಲು....

ಚಿಗುರಿದ ಮಾಮರಗಳಿಗೆ ಹೂವಾಗುವ ಬಯಕೆ
ಹಾಡಿಗೆ ಸ್ವರವಾಗುವ ತವಕ ಕೋಗಿಲೆಗಳ ಮನಕೆ

ನಳನಳಿಸಿದೆ ತೋರಣ ಮನೆಮನೆಗಳಲ್ಲಿ
ನಲಿವು ತುಂಬಿದೆ ಎಲ್ಲರ ಮನಗಳಲ್ಲಿ

ವಿರೋಧಿ ನಾಮ ಸಂವತ್ಸರವು ಶುಭವಾಗಿರಲಿ
ಮೊಗ್ಗಾಗಿರುವ ನಿಮ್ಮ ಕನಸುಗಳು ಅರಳಲಿ.....

ಈ ಸಂವತ್ಸರ ಪೂರ ಈ ಸಂತೋಷ ತುಂಬಿರಲಿ
ನಿಮ್ಮ ಮೊಗದಲ್ಲಿನ ಮಂದಹಾಸ ಬಾಡದಿರಲಿ

Rating
No votes yet

Comments