ಯುಗಾದಿ ಹಬ್ಬದ ಶುಭಾಷಯಗಳು

ಯುಗಾದಿ ಹಬ್ಬದ ಶುಭಾಷಯಗಳು


ಯುಗಾದಿ ಎಂಬುದು ಚೈತ್ರ ಮಾಸದ ಮೊದಲನೆಯ ದಿನ (ಹಿಂದು ಪಂಚಾಂಗದ ಪ್ರಥಮ ದಿವಸ) 
ಕನ್ನಡಿಗರಿಗೆ ಸಂಭ್ರಮೋತ್ಸವದ ಹಬ್ಬ. ಹೊಸ ವರ್ಷದ ಆರಂಭೋತ್ಸವ. ಮನೆ ಮನೆಯಲ್ಲಿ ಸಡಗರ
ಸಂಬ್ರಮ. ಹಸಿರು ತೋರಣಗಳ  ಅಲಂಕಾರ. ಬೇವು ಬೆಲ್ಲವನ್ನು ಹಂಚಿ ತಿನ್ನುವ ಸಂಪ್ರದಾಯ.
ಮುಂಬರುವ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುತ್ತೇವೆ ಎಂಬ ವಾಗ್ದಾನದ ಸಂಕೇತ.
 
ಯುಗಾದಿ ಹಬ್ಬದ ವಿಶೇಷ ಭಕ್ಷ್ಯಒಬ್ಬಟ್ಟು (ಹೋಳಿಗೆ). ಎಲ್ಲರೂ ನಕ್ಕು ನಲಿದಾಡುವ ಹಬ್ಬ ಯುಗಾದಿ. ಕನ್ನಡಿಗರಿಗೆ ಬಹಳ ಮುಖ್ಯವಾದ ಹಬ್ಬ ಇದು.ಈ ಹಬ್ಬದ ಆಚರಣೆಯಲ್ಲಿ ನನ್ನನ್ನೂ ಕೂಡ ನಿಮ್ಮ ಜೊತೆ ಸೇರಿಸಿಕೊಳ್ಳಿ..................
 
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ

ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ

ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ
ಎಲೇ ಸನತ್ಕುಮಾರದೇವ ಎಲೇ ಸಾಹಸಿ ಚಿರಂಜೀವ ನಿನಗೆ  ಲೀಲೆ ಸೇರದೋ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ನಮ್ಮನಷ್ಟೆ ಮರೆತಿದೆ


 

Rating
No votes yet

Comments