ಯುಗಾದಿ

ಯುಗಾದಿ

ಚಿತ್ರ
ಯುಗಾದಿಯ ದಿನದಂದು ಎರಡು ಪುಟ್ಟ ಕವಿತೆಗಳು:
 
ಹಗಲು ಹೆಚ್ಚುತ ಹೋಗುತಿರುವುದು
ಚಿಗುರು ಎಲ್ಲೆಡೆ ಕಾಣುತಿರುವುದು
ಮುಗಿಲ ಕೆಳೆಯನು ಮರೆತ ಬಾನಿನ ಚೆಲುವು ಹೆಚ್ಚಿಹುದು |
ಮಿಗಿಲು ಬಿರಿದಿಹ ಹೂಗಳೆಲ್ಲೆಡೆ
ನಗುತ ಕಂಪನು ಸೂಸಿ ನಲಿದಿರೆ
ಹಗುರವೆನಿಸದೆ ಮನವು ವರುಷದ ಮೊದಲ ದಿನದಂದು ||
 
ಚಂದದಾ ಕುಡಿಮೇಲಿನಿಬ್ಬನಿ
ಬಿಂದುಗಳ ಸಾಲಂತೆ ಮನದಲಿ 
ನಿಂದ ಬಯಕೆಗಳೆಲ್ಲ ಚಿಗುರುತ ಹಣ್ಣ ನೀಡಿರಲಿ |
ಬಂದಿರಲು ಶೃಂಗಾರ ಮಾಸವು
ನಂದನದ ವತ್ಸರದ ಹೆಸರಲಿ
ತಂದು ಕೊಡಲಿ ಸಂಪದಿಗರಿಗೆ ತುಂಬು ಹರುಷವನು ||
 
-ಹಂಸಾನಂದಿ
 
 
Rating
No votes yet

Comments