ಯುಗಾದಿ
ಯುಗಾದಿ
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ
ಅಹುದು ಬಂದೀತು, ಬಂದರೇನು? ಅದು ತಂದದ್ದಾರೂ ಏನು?
ಮೈತುಂಬ ಚಿಗುರು ಹೂಗಳ ಹೊತ್ತ ಮರಗಳು??
ಅದ ಕಂಡು ಕುಣಿದು ಹಾಡುವ ಕೋಗಿಲೆಯು?
ಪಡೆದೆವೇನು ಹೊಸತನು? ಎಲ್ಲವೂ ಹಳೆಯದೆ.
ಇದು ಮತ್ತದೇ ವಸಂತವೋ ಗೆಳೆಯ.
ಮತ್ತೆ ಯುಗಗಳ ಯುಗಾದಿ ತಂದದ್ದಾದರೂ ಏನು?
ತರುವುದಿಲ್ಲ ಅದು ಏನನ್ನೂ
ಇದ್ದುದರಲ್ಲೇ ನಾವು ಹೆಕ್ಕಬೇಕು ಗೆಳೆಯ
ಎಲ್ಲರೊಂದಿಗಿಷ್ಟು ಸಿಹಿಮಾತು, ನಿಷ್ಕಲ್ಮಷ ನಗು.
ನಿನ್ನಿಂದ ಒಳಿತಾಗದೆ ಅನ್ಯರಿಗೆ?
ಸರಿ ಬಿಡು; ಆದರೆ ಕೆಡುಕ ಬಯಸದಿರು
ಸುಖದ ಮನೆಗೆ ದಾರಿಯಿದೆಂದು ನಾ ಹೇಳಲಾರೆ,
ಆದರೆ ನೆಮ್ಮದಿಯ ಗೂಡು ಅಲ್ಲಿಹುದೆಂದು ನಾ ಬಲ್ಲೆ.
ಇದೇ ಸಾರ್ಥಕದ ಹಾದಿ, ಅಲ್ಲಿ ಪ್ರತಿದಿನವೂ ಯುಗಾದಿ
--ಅರುಣ ಸಿರಿಗೆರೆ
Rating