"ಯುಗಾವತಾರಿ " ಬಸವಣ್ಣನವರ ಬಗೆಗೆ ಬರೆದ ಮಹಾಕಾವ್ಯ

"ಯುಗಾವತಾರಿ " ಬಸವಣ್ಣನವರ ಬಗೆಗೆ ಬರೆದ ಮಹಾಕಾವ್ಯ

ಸಂಪದಿಗರೆ, ಸವಿತೃ ಅವರು ಬಸವಣ್ಣನವರ ಬಗ್ಗೆ ಇರುವ ಪುಸ್ತಕಗಳ ಬಗ್ಗೆ ಕೇಳಿದ್ದರು . ಬಹುಶಃ ಬಸವಣ್ಣನವರ ಬಗ್ಗೆ ಬರುತ್ತಿರುವ ಆರು ಸಂಪುಟಗಳ "ಯುಗಾವತಾರಿ" ಶ್ರೀ ಬಸವದರ್ಶನ ಕಾವ್ಯದ ಬಗ್ಗೆ ಅವರಿಗೆ ತಿಳಿದಿರಲಾರದು. ಅದಕ್ಕೆಂದೇ ಈ ಮಾಹಿತಿಯನ್ನು ತಮ್ಮೆಲ್ಲರಿಗೆ ನೀಡುತ್ತಿದ್ದೇನೆ. ಮಂಡ್ಯದ ಹೆಸರಾಂತ ಸಾಹಿತಿಗಳೂ, ವೃತ್ತಿಯಲ್ಲಿ ವೈದ್ಯರೂ ಆಗಿರುವ ಡಾ. ಪ್ರದೀಪಕುಮಾರ ಹೆಬ್ರಿಯವರು ಸತತ ೨೦ ವರ್ಷಗಳ ತಮ್ಮ ಅಧ್ಯಯನದ ಫಲವನ್ನು ಧಾರೆಯೆರೆದು "ಯುಗಾವತಾರಿ" ಶ್ರೀ ಬಸವದರ್ಶನ ಕಾವ್ಯ ಎಂಬ ಕೃತಿಯನ್ನು ರಚಿಸುತ್ತಿದ್ದಾರೆ. ಇಲ್ಲಿ ’ರಚಿಸುತ್ತಿದ್ದಾರೆ’ ಎಂಬ ಪದವನ್ನು ಉಪಯೋಗಿಸಿದ್ದಕ್ಕೆ ಕಾರಣ , ಈ ಮಹಾಕಾವ್ಯವು ಒಟ್ಟು ಆರು ಸಂಪುಟಗಳಲ್ಲಿ ಬರಲಿದ್ದು , ಈಗಾಗಲೇ ೨ ಸಂಪುಟಗಳು ಬಿಡುಗಡೆಯಾಗಿವೆ. ಮೂರನೇ ಸಂಪುಟ ೨೦೦೯ ರ ಬಸವಜಯಂತಿಯಂದು ಬಿಡುಗಡೆಯಾಗಲಿದೆ. ಈ ಕಾವ್ಯಕ್ಕೆ ಈಗಾಗಲೇ ಅನೇಕ ಪ್ರಶಸ್ತಿ , ಗೌರವಗಳು ದೊರೆತಿದ್ದು ರಾಜ್ಯ ಮಟ್ಟದ " ಪಂಡಿತ ಪುಟ್ಟರಾಜ ಗವಾಯಿ ಸಾಹಿತ್ಯ ಪ್ರಶಸ್ತಿ, ಕಳೆದ ಬಾರಿ ಸಿಕ್ಕಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಆಸಕ್ತರು ಡಾ. ಪ್ರದೀಪಕುಮಾರ ಹೆಬ್ರಿಯವರನ್ನು ಸಂಪರ್ಕಿಸಬಹುದು . ಅವರ ಮೊಬೈಲ್ ಸಂಖ್ಯೆ ಹೀಗಿದೆ. ೯೮೪೪೦೧೮೪೫೭ . ಇನ್ನೂ ಈ ಕಾವ್ಯದ ಬಗ್ಗೆ ಮಾಹಿತಿಗಾಗಿ ಪ್ರತಿಕ್ರಿಯಿಸಿ.

Rating
No votes yet

Comments