ಯು ಆರ್ ಅಮೂ....ನಿಮಗೆ ಸಲಾಮು - ಲಕ್ಷ್ಮೀಕಾಂತ ಇಟ್ನಾಳ

ಯು ಆರ್ ಅಮೂ....ನಿಮಗೆ ಸಲಾಮು - ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ಯು ಆರ್ ಅಮೂ....ನಿಮಗೆ ಸಲಾಮು
                                      
ಶತಮಾನಕ್ಕೊಮ್ಮೆ ಮನುಕುಲಕೆ ನಿನ್ನಂತಹವರ  ಆಗಮನವೇನೊ
ನಮಗಾಗಿ ನಮ್ಮೊಳಗೆ ಹುಟ್ಟಿದ್ದ ಗೆಲಿಲಿಯೋ ನೀನೇ ಏನೋ!

ನಡೆದ ಪ್ರತಿ ಹೆಜ್ಜೆಯಲೂ ಮಿಡಿಸಿದೆ ಕನ್ನಡದ ಛಾಪು
ಅತಿರಥಗಳ ಮಥನದಲಿ ಸಿಡಿಸಿದೆ ಹೇಷಾರವದ ಮತಾಪು

ತಪ್ಪಿದ ತಾಳಗಳ ಒಪ್ಪ ಓರಣಕೆ ಉಸಿರುಸಿರು ಹುರಿಗರೆದು
ಬಿತ್ತಿದೆ ಬಿಸಿಲನ್ನು ದೇಸಗತಿಯಲಿ ದಿಟದಕ್ಷರ ಬರೆಬರೆದು

ನಯವಂತಿಕೆಯ ಮುಖವಾಡಗಳ ನಿರ್ವಂಚನೆಯಿಂದ ಸುಲಿದಿಟ್ಟು
ಸೊಡರುಣಿಸಿ, ಕನ್ನಡ ಕಿಚ್ಚುಗಳ ಎದೆ ಎದೆಯಲೂ ಕಾಪಿಟ್ಟು

ಮನೆಯೆಲ್ಲಾ, ಮನವೆಲ್ಲಾ ಸೂತಕದ ಮೌನದಲೇ ಅದ್ದಿಹವು
ಎಲ್ಲೆಲ್ಲೂ ಕನ್ನಡದ ಕಂಗಳಲಿ ಕಂಬನಿಯ ಬುಗ್ಗೆಗಳೇ ಎದ್ದಿಹವು

 

                              (ಚಿತ್ರ ಕೃಪೆ : ಅಂತರ್ಜಾಲ)

 

Rating
No votes yet

Comments

Submitted by H A Patil Mon, 08/25/2014 - 20:52

ಲಕ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ಕವನ ಚೆನ್ನಾಗಿ ಮೂಡಿ ಬಂದಿದೆ, ಅನಂತ ಮೂರ್ತಿಯವರ ಬದುಕು ಬರಹ ಜೀವನ ಧೋರಣೆಗಳ ಕುರಿತು ಸರಳವಾಗಿ ಸಮರ್ಥವಾಗಿ ದಾಖಲಿಸಿದ್ದೀರಿ,ವಂದನೆಗಳು.