ಯೇಗ್ ದಾಗೆಲ್ಲಾ ಐತೆ ಪುಸ್ತಕದ ಬೆನ್ನು ಹತ್ತಿಹೊರಟಾಗ ಭಾಗ-1
ಈಗ್ಗೆ ಐದಾರು ವರ್ಷಗಳ ಹಿಂದೆ ನಮ್ಮ ಇಲಾಖೆಯ[ಕೆ.ಪಿ.ಟಿಸಿಎಲ್] ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ವೈ.ವಿ.ವೆಂಕಟಕೃಷ್ಣ ನನ್ನೊದನೆ ಮಾತನಾಡುತ್ತಾ "ನೀವು ಯೇಗ್ ದಾಗೆಲ್ಲಾ ಐತೆ "ಪುಸ್ತಕ ಓದಿದ್ದೀರಾ? " ನಿಮ್ಮಂತವರು ಆ ಪುಸ್ತಕ ಓದಬೇಕು ಅಂತಾ ತಮ್ಮೊದನಿದ್ದ ಪುಸ್ತಕ [ಅದು ಮೊದಲ ಮುದ್ರನವಿರಬೇಕು] ವನ್ನು ತೋರಿಸಿದರು. ಸರಿ "ಕೊಡಿ ಓದಿ ಕೊಡ್ತೀನೆಂದೆ. ಒಂದೆರಡು ದಿನಗಳಲ್ಲಿ ಕೊಟ್ತು ಬಿಡಬೇಕೆಂದು ಕೊಡುವಾಗಲೇ ಹೇಳಿ ಕೊಟ್ತರು. ನನ್ನ ಕೆಲಸಗಳ ಒತ್ತಡದಲ್ಲಿ ಎರಡು ದಿನಗಳಲ್ಲಿ ಆ ಪುಸ್ತಕವನ್ನು ಪೂರ್ಣವಾಗಿ ಓದಲಾಗಲಿಲ್ಲ. ಅಲ್ಲಲ್ಲಿ ಕೆಲವು ಪುಟ ಓದಿ ಕುತೂಹಲ ಮೂಡಿಸಿಕೊಂಡಿದ್ದೆ. ಅಷ್ಟರಲ್ಲಿ ಅವರಿಗೆ ಆ ಪುಸ್ತಕ ಹಿಂದಿರುಗಿಸಬೇಕಾಗಿ ಬಂತು. ಆನಂತರ ಒಂದೆರಡು ವರ್ಷಗಳು ಆ ಪುಸ್ತಕ ನೋಡಲಿಲ್ಲ. ಪುನ: ನನ್ನ ಅಂತರ್ಜಾಲದ ಚಟುವಟಿಕೆ ಆರಂಭವಾದಮೇಲೆ ಕಳೆದ ಎರಡು ಮೂರು ವರ್ಷಗಳಲ್ಲಿ ಮಿತ್ರರಾದ ಎಂ.ಡಿ.ಎನ್. ಪ್ರಭಾಕರ್ ಕೃಪೆಯಿಂದ ಯೋಗ ಕೂಡಿ ಬಂತು" ಹೊಸ ಮುದ್ರಣವಾದ "ಯೇಗ್ದಾಗೆಲ್ಲಾ ಐತೆ" ನನ್ನ ಕೈ ತಲುಪಿತು. ಒಂದೆರಡು ಭಾರಿ ಓದಿದೆ. ಕುತೂಹಲ ಇಮ್ಮಡಿ ಯಾಗ್ತಾ ಹೀಯ್ತು. ನನ್ನ ಬ್ಲಾಗ್ ನಲ್ಲಿ ಕೆಲವು ಪುತ ಬರೆದೆ. ಪುನ: ಒಂದೆರಡು ವರ್ಷ ಬಿಡುವು. ಮೊನ್ನೆ ಯಾಕೋ ಮತ್ತೆ ನೆನಪಾಯ್ತು. ಮುಕುಂದೂರು ಸ್ವಾಮಿಗಳ ಬಗ್ಗೆ ಬರೆಯ ಬೇಕೆನಿಸಿತು. ಆರಂಭಮಾಡಿದ್ದು ಸ್ವಾಮೀಜಿಯವರು ಶರೀರ ತ್ಯಜಿಸಿದ ದಿನ ಶ್ರೀ ಬೆಳೆಗೆರೆ ಕೃಷ್ನ ಶಾಸ್ತ್ರಿ ಗಳಿಗೆ ಆದ ದಿವ್ಯಾನುಭವ ಘಟನೆಯಿಂದ.
ಯಾಕೋ ನನ್ನ ಮನದಲ್ಲಿ ಸ್ವಾಮಿಗಳ ಸ್ಮರಣೆ ತುಂಬಿತ್ತು." ಮುಕುಂದೂರು ಎಂಬ ಹಳ್ಳಿ ನಮ್ಮೂರಿನ ಸಮೀಪದಲ್ಲಿದೆ. ಅಲ್ಲಿನ ಸಿದ್ಧ ಪುರುಷರ ಬಗ್ಗೆಯೇ ನನಗೆ ಅರಿವಿಲ್ಲವಲ್ಲಾ! " ನಾನು ಬರೆಯುವುದಕ್ಕಿಂತ ಮೊದಲು ಮುಕುಂದೂರು ಸ್ವಾಮೀಜಿ ಇದ್ದ ಜಾಗವನ್ನು ನೋಡಿ ಬರಬೇಕು " ಎಂದುಕೊಂಡೆ. ರಾತ್ರಿ ಹನ್ನೆರಡವರೆಗೂ " ಯೇಗ್ ದಾಗೆಲ್ಲಾ ಐತೆ" ಪುಸ್ತಕದ ಕೆಲವು ಪುಟ ಓದಿದೆ. ಆಗಲೇ ನಿರ್ಧರಿಸಿದೆ. ಬೆಳಗಾಗೆದ್ದರೆ ಭಾನುವಾರ ಹೋಗಿಬಂದು ಬಿಡೋಣ..ಅವರಿದ್ದುದು ಅರಸೀಕೆರೆಯ ತಾಲ್ಲೂಕು ಬಾಣಾವರದ ಸುತ್ತಮುತ್ತ. ಅವರು ದೇಹತ್ಯಾಗ ಮಾಡಿರುವುದೂ ಅಲ್ಲೇ ಎಂದು ಪುಸ್ತಕದಿಂದ ಗೊತ್ತಾಗಿದೆ. ಸರಿ ಅರಸೀಕೆರೆರೆ ಮೂಲಕ ಬಾಣಾವರಕ್ಕೆ ಹೋದರೆ ಅಲ್ಲಿ ಯಾರನ್ನಾದರೂ ಕೇಳೊಕೊಂಡು ಹೋದರಾಯ್ತು.ಎಂದು ಕೊಂಡೆ. ನನ್ನ ಮೇಜಿನ ಮೇಲಿದ್ದ ರೈಲ್ವೆ ವೇಳಾಪಟ್ತಿ ಕಣ್ಣಿನೆ ಬಿತ್ತು. ಅರಸೀಕೆರೆಗೆ ಬಸ್ ನಲ್ಲಿ ಹೋಗಬೇಕೆಂದರೆ ಹರಮ ಸಂಕಟ. ಟ್ರೈನ್ ನಲ್ಲಿ ಹೋದರಾಯ್ತು, ಎಂದು ವೇಲಾಪಟ್ಟಿ ನೋಡಿದೆ. ಬೆಳೆಗ್ಗೆ 8.00ಕ್ಕೆ ಟ್ರೈನ್ ಇದೆ. ಹೊರಡುವ ನಿರ್ಧಾರ ಮಾಡಿ ಮಲಗಿದೆ. ಬೆಳಿಗ್ಗೆ ಎದ್ದವನೇ ಮೊದಲ್ಯು ಮಾಡಿದ ಕೆಲಸವೆಂದರೆ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರಿಗೆ ಫೋನ್ ಮಾಡಿದ್ದು. ಅವರಾದರೋ ಮೊಬೈಲ್ ನೂ ಮನೆಯಲ್ಲಿಯೇ ಬಿಟ್ಟು ವಾಕಿಂಗ್ ಹೋಗಿದ್ದರು. ಪತ್ನಿ ಭಾರತಿ ಹಲೋ ಎಂದರು.ವಾಕಿಂಗ್ ಹೋಗಿರುವ ವಿಷಯ ತಿಳಿಸಿದರು. ಅವರಿಗೆ ವಿಷಯ ತಿಳಿಸಿ ವಾಕಿಂಗ್ ನಿಂದ ಬಂದ ಕೂಡಲೇ ಮಾತನಾದಲು ಹೇಳಿದೆ. ನಂತರ ಬಾಣಾವರದ ಸಮೀಪ ಎಲ್ಲಿ ಅಂಬುದನ್ನು ಗೊತ್ತು ಮಾಡಿಕೊಳ್ಳಲು ಅರಸೀಕೆರೆಯ ಮಿತ್ರ ಸುಬ್ಬಣ್ಣನಿಗೆ ಫೋನ್ ಮಾಡಿದೆ. ಅವರು ಸರಿಯಾಗಿ ಗುರುತು ಹೇಳಿದರು..................ಮುಂದೇನಾಯ್ತು ಎಂಬುದನ್ನು ನಾಳೆ ಬರೆಯುವೆ....
.
Comments
ಉ: ಯೇಗ್ ದಾಗೆಲ್ಲಾ ಐತೆ ಪುಸ್ತಕದ ಬೆನ್ನು ಹತ್ತಿಹೊರಟಾಗ ಭಾಗ-1