ಯೇಗ್ ದಾಗೆಲ್ಲಾ ಐತೆ ‍ಪುಸ್ತಕದ ಬೆನ್ನು ಹತ್ತಿಹೊರಟಾಗ- ಭಾಗ-2

ಯೇಗ್ ದಾಗೆಲ್ಲಾ ಐತೆ ‍ಪುಸ್ತಕದ ಬೆನ್ನು ಹತ್ತಿಹೊರಟಾಗ- ಭಾಗ-2

ಮಿತ್ರರಾದ ಅರಸೀಕೆರೆ ಸುಬ್ಬಣ್ಣ ನವರಿಗೆ ಫೋನ್ ಮಾಡಿದಾಗ  ಅವರು  ಯಗಟಿ ಎಂಬ ಊರಿಗೆ  ಬಸ್ ಪ್ರಯಾಣ ಮಾಡ್ತಾಇದ್ರು. " ಸಾsssರ್ ,ಎಂತಾ ಕೆಲ್ಸಾ ಆಯ್ತು, ನಾನೂ ಬಂದ್ ಬಿಡ್ತಾಇದ್ದೆ,ಕುಟುಂಬ ಸಮೇತ ಯಗಟಿಗೆ ಹೋಗ್ತಾ ಇದೀವಿ.ಏನ್ ಮಾಡೋದು"ಅಂದ್ರು.
-’ಪರವಾಗಿಲ್ಲಾ, ಸುಬ್ಬಣ್ಣ, ಇನ್ನೊಮ್ಮೆ ಒಟ್ಟಿಗೆ ಹೋಗೋಣ, ಇವತ್ತು ನಾನು ಹೋಗಲು ದಾರಿ ಹೇಳಿ" ಎಂದಾಗ ಸರಿಯಾಗಿ ಹೇಳಿದರು.
-"ಅರಸೀಕೆರೆಯಿಂದ ಬಾಣಾವರಕ್ಕೆ ಹೋಗಿ. ಅಲ್ಲಿಂದ ಜಾವಗಲ್ ಬಸ್ ಹತ್ತಿ    ಅರಕೆರೆಯಲ್ಲಿ ಇಳಿದುಕೊಳ್ಳಿ, ಅರಕೆರೆಯಲ್ಲಿ ಯಾರನ್ನಾದರೂ "ವಿರಕ್ತ ಮಠ ಎಲ್ಲಿ" ಅಂದ್ರೆ  ಹೇಳ್ತಾರೆ.  ಅರಕೆರೆ  ಮುಖ್ಯ ರಸ್ತೆ ಯಿಂದ ಒಂದು ಕಿಲೋ ಮೀಟರ್ ದೂರ ಕಚ್ಚಾ ರಸ್ತೆಯಲ್ಲಿ ಕಾಲು ನಡಿಗೆಯಲ್ಲಿ ಹೋಗ ಬೇಕು:-ಅಂದ್ರು.   ಅಲ್ಲಿಗೆ ತಲುಪಿದಷ್ಟೇ ಸಮಾಧಾನವಾಯ್ತು.
ಅಷ್ಟು ಹೊತ್ತಿಗೆ  ಕವಿನಾಗರಾಜ್ ಫೋನ್ ಮಾಡಿದರು-ಎಂಟು ಗಂಟೆ ಗೇ ಹೊರಡಲು ನನಗೆ ಸಾಧ್ಯವಾಗುವುದಿಲ್ಲ. ನೀವು ಹೋಗಿ ಬನ್ನಿ, ಎಂದ್ರು. ನಾನು ಮತ್ತೆ ನಿಮಗೆ ಫೋನ್ ಮಾಡುವೆನೆಂದು ಅವರಿಗೆ ತಿಳಿಸಿ ,ಬೇಲೂರಿನಲ್ಲಿರುವ ಮಿತ್ರ ಡಾ. ಶ್ರೀವತ್ಸ ಎಸ್.ವಟಿಯವರಿಗೆ ಫೋನ್ ಮಾಡಿ.-"ವಟಿ ಹೀಗೆ ಮಾಡಬಹುದಾ?"-ಎಂದು ಆಕ್ಷೇಪಿಸುವಂತೆ ಮಾತು ಆರಂಭಿಸಿದೆ.
-"ಏನ್ ಮಾಡ್ದೇ ಸ್ವಾಮಿ?"
-ನೀವು ನನ್ನನ್ನು   ಅರಕೆರೆಕೆ ಕರೆದುಕೊಂಡು ಹೋಗಿದ್ದಿರೀ ತಾನೇ? ಅಲ್ಲಿ ಬರೀ ದೇವಸ್ಥಾನ ತೋರಿಸಿಕೊಂಡು ಅದರ ಬಗ್ಗೆ  ಪತ್ರಿಕೆಗೆ ಲೇಖನ ಮಾಡಿಸಿದಿರೇ ಹೊರತೂ ಅಲ್ಲಿ "ಮುಕುಂದೂರು ಸ್ವಾಮಿಗಳ ಆಶ್ರಮವನ್ನೇ ತೋರಿಸಲಿಲ್ಲವಲ್ಲಾ! ತಪ್ಪಲ್ವಾ?
-ಅಲ್ಲೆಲ್ಲಿದೆ, ಆಶ್ರಮ ? ನಿಮಗ್ಯಾರು ಹೇಳಿದ್ರು?
-ಅಲ್ಲಿ ಇರೋದು ಗೊತ್ತಾಗಿದೆ. ನಾನು ಹೋಗ್ತಾ ಇದೀನಿ. ಬರ್ತೀರೋ?
-ಈಗೆಲ್ಲಾಗುತ್ತೆ ಸ್ವಾಮಿ?
-ಅದೇನೋ ನಂಗೊತ್ತಿಲ್ಲ. ನಾನು ಅರ್ಸೀಕೆರೆ ಮಾರ್ಗ ಬರ್ತೀನಿ. ನೀವು ಕಳೇಬೀಡುಮಾರ್ಗ ಬನ್ನಿ. ಅಷ್ಟೆ. ಅಂದೆ
ನಾಗರಾಜ್ ಗೆ  ಫೋನ್ ಮಾಡಿ "ಸಾರ್ 10.00 ಗಂಟೆಗೆ  ಮತ್ತೊಂದು ಟ್ರೈನ್ ಇದೆ. ಹೊರಡುತ್ತೀರಾ?" ಎಂದೆ
-ಆಯ್ತು ಶ್ರೀಧರ್. ನಾನು ನೇರವಾಗಿ ರೈಲ್ವೆ ಸ್ಟೇಶನ್ ಗೇ ಬರ್ತೀನಿ, ಅಂದ್ರು.
ಅವರಾಗಲೇ 9.30 ಕ್ಕೆ ರೈಲ್ವೆ ಸ್ಟೇಶನ್ ತಲುಪಿ ನನಗೆ ಫೋನಾಯಿಸಿ"ಏನೂ ಎಲ್ಲಿದ್ದೀರಿ?" ಎಂದ್ರು
 
ಆಗ ನಾನು ಆಟೋ ಹತ್ತಿ   ಸ್ಟೇಶನ್     ತಲುಪಿದರೆ ಟ್ರೈನ್ ಒಂದು ಗಂಟೆ ತಡವಾಗಿಬಂತು. ಆ ಹೊತ್ತಿಗೆ ವಟೀ ಕೂಡ ತಾವು ನೇರವಾಗಿ ಅರಕೆರೆಗೆ ಬರುವುದಾಗಿ ಫೋನ್ ಮಾಡಿದ್ರು. ನಾವು ಅರಸೀಕೆರೆ ತಲುಪಿ ಬಸ್ಸ್ ನಲ್ಲಿ ಅರಕೆರೆ ತಲುಪುವಹೊತ್ತಿಗೆ, ವಟೀ ಅಲ್ಲಿ ಹಾಜರಿದ್ದರು. ಮೂವರೂ ತೋಟದ ದಾರಿಯಲ್ಲಿ ಅಶ್ರಮದತ್ತ ಹೆಜ್ಜೆ ಹಾಕಿದೆವು

 

Rating
No votes yet

Comments