'ಯೇ ದಿಲ್ ನಾ ಹೋತ ಬೇಚಾರ' ಎಂಬ ಕಿಶೋರ್ ಹಾಡಿದ ಹಾಡು !

'ಯೇ ದಿಲ್ ನಾ ಹೋತ ಬೇಚಾರ' ಎಂಬ ಕಿಶೋರ್ ಹಾಡಿದ ಹಾಡು !

ಚಿತ್ರ

'ಕಲ್ಕತ್ತದ ನ್ಯೂ ಥಿಯೇಟರ್ಸ್' ಪ್ರಸಿದ್ಧಿಯ  ಹಿಮಾಂಶು ರಾಯ್,(1892, 1922),  ದೇವಿಕಾರಾಣಿ, (1908, 1933), ವಿ. ಶಾಂತಾ ರಾಮ್, (1901-1927) ಅಲಬೇಲ ಚಿತ್ರನಿರ್ಮಾಣದ ಯಶಸ್ಸಿನಲ್ಲಿ ಮಿಂದು ಎಲ್ಲರ ಕಣ್ಮಣಿಯಾಗಿದ್ದ  ಭಗವಾನ್, (1913, 1951) ಅತ್ಯಂತ ಹಿರಿಯ ನಿರ್ಮಾಪಕ ನಟ, ಮೋತಿಲಾಲ್ ರಾಜವಂಶ್ ** ( 1910, 1934) ನಟ, ಗಾಯಕ, ಕುಂದನ್ ಲಾಲ್ ಸೈಗಾಲ್ (1904, 1937)  ಭರತ್ ಭೂಷಣ್  (1920-1941),  ನಿರ್ಮಾಪಕ, ಯಶಸ್ವಿ ನಟ, ಸೊಹ್ರಾಬ್ ಮೋದಿ, (1897,1936)  ಮೊದಲಾದವರು ಆಗಲೇ ತಮ್ಮ ಛಾಪನ್ನು ಮೂಡಿಸಿ ಆದರ್ಶಪ್ರಾಯರಾಗಿದ್ದರು. ಪೃಥ್ವಿ ರಾಜ್ ಕಪೂರ್ (1906, 1944,) ಮತ್ತು ಅವರ ಮಕ್ಕಳಿಂದ ಹಿಡಿದು ಹಿಂದಿ ಸಿನಿಮಾದಲ್ಲಿ ಚಿತ್ರನಿರ್ಮಿಸುವ ನಟಿಸುವ ಹುಚ್ಚು ಆಗ ಎಲ್ಲಾ ಸಿನಿಮಾ ವೀಕ್ಷಕರ ಮನಸ್ಸಿನಲ್ಲಿ ಭುಗಿಲೆದ್ದು ನರ್ತಿಸುತ್ತಿತ್ತು. ಕೆಲವರು ಪ್ರಯತ್ನಿಸಿ ಸೋತರು, ಮತ್ತೆ ಕೆಲವರು ಅವರ ಆದ್ಯತೆಗಳನ್ನು ಬದಲಾಯಿಸಿಕೊಂಡು ಬೇರೆ ಬೇರೆ ವಿಷಯಗಳಲ್ಲಿ  ಯಶಸ್ವಿಯಾದರು. 

 
ಬೊಂಬಾಯಿಗೆ ಆಗತಾನೆ ಬಂದಿದ್ದ. ಗುರುದತ್  (1925, 1945) ದೇವ್ ಆನಂದ್, (1923, 1946)  ಸಹಿತ ಕೇವಲ ಚಿತ್ರಗಳಲ್ಲಿ ನಟಿಸುವುದಲ್ಲದೆ ಫಿಲಂ ನಿರ್ಮಾಣದಲ್ಲಿ ಬಹಳ ಮಹತ್ವದ ಪಾತ್ರ ವಹಿಸಿರುವುದು ದಾಖಲುಮಾಡಲು ಯೋಗ್ಯವಾಗಿದೆ. ಇವರ ಸಹಭಾಗಿತ್ವದಲ್ಲಿ ಅನೇಕ ಕಲಾವಿದರು, ಚಿತ್ರಕಥಾ ಲೇಖಕರು, ಸಂಗೀತಕಾರರು, ಪಾರ್ಶ್ವ ಸಂಗೀತ ಗಾಯಕ, ಗಾಯಕಿಯರು, ಸಂಗೀತ ನಿರ್ದೇಶಕರು, ಸಿನಿಮಾಟೋಗ್ರಫಿಯಲ್ಲಿ ನಿಷ್ಣಾತರು, ನೃತ್ಯಪಟುಗಳು, ಇನ್ನೂ ಮೊದಲಾದ ಕಲಾವಿದರು ಒಂದು ಪರಿವಾರದ ತರಹ ಹೊಂದಿಕೊಂಡು ಸಿನಿಮಾ ರಂಗದಲ್ಲಿ ಬಹಳ ಶ್ರಮವಹಿಸಿ ದುಡಿಯುತ್ತಿದ್ದರು. ಅವರಲ್ಲಿ ಚಿತ್ರ ಸಂಗೀತಕಾರ ಸಚಿನ್ ದೇವ್ ಬರ್ಮನ್ ಗುರುದತ್ ಹಾಗೂ ದೇವ್ ಆನಂದ್ ರ ಆರಂಭಿಕ  ಪ್ರೊಡಕ್ಷನ್ ನಲ್ಲಿ ಬಹಳ ಸಕ್ರಿಯರಾಗಿ ದುಡಿದರು. 
 
ನಾನು ಇಲ್ಲಿ ಸಾದರಪಡಿಸುವ ಸಿನಿಮಾ ರಂಗದಲ್ಲಿ ಸಿದ್ಧಿಗಳಿಸಿದ ಕಲಾವಿದರೆಂದರೆ, ಗುರುದತ್, ದೇವ್ ಆನಂದ್,  ವಹೀದಾ ರೆಹ್ಮಾನ್, ಮಾಲ ಸಿಂಹ, ರೆಹ್ಮಾನ್, ಧರ್ಮೇಂದರ್,  ಮೊದಲಾದವರು. 
ಗುರುದತ್ ಈ ಪಂಕ್ತಿಯಲ್ಲಿ ಒಬ್ಬ ಮಹಾನ್ ಸಾಧಕರೆಂದು ಮೀಡಿಯಾದಲ್ಲಿ ಪ್ರಸಿದ್ಧಿಗಳಿಸಿದ್ದಾರೆ. ಅವರು ಪ್ಯಾಸಾ, ಕಾಗಜ್ ಕೆ ಫೂಲ್  ಚಿತ್ರಗಳನ್ನು ತಯಾರಿಸಿ ಖ್ಯಾತಿಗಳಿಸಿದರು. ಹಾಗೂ ಮೊದಮೊದಲು  ಕೈಸುಟ್ಟುಕೊಂಡರು. ತದನಂತರ ಮೀಡಿಯಾ ವಿಶ್ಲೇಷಣೆಗಳ ಬಳಿಕ ಜನಪ್ರಿಯತೆಗಳಿಸಿದರೆನ್ನುವುದು ನಿಜವೇ ಆಗಿದೆ. ಹೀಗೆ ಎಡವಿ ಬಿದ್ದು, ತಡವರಿಸಿಕೊಂಡೆದ್ದು  ಫಿಲಂ ತಯಾರಿಕೆಯಲ್ಲಿ ಮುಂದುವರೆಯುತ್ತಿದ್ದ ಆಗಿನ ಕಾಲದ  ಅನೇಕ ಕಲಾವಿದರ ತರಹ,  ಗುರುದತ್ ಸಹಿತ ಒಬ್ಬರೆನ್ನಬಹುದು. ಅವರು ಮುಂಚೂಣಿಯಲ್ಲಿದ್ದರೆನ್ನುವುದು ಗಮನಿಸಬೇಕಾದ ಸಂಗತಿ. ಈಗ  

ಬಹರೇನ್ ಫರ್ ಭೀ ಆಯೆಂಗಿ  ಎನ್ನುವ  ಹೆಸರಿನ ಚಿತ್ರ ನಿರ್ಮಿಸುವ ಪ್ರಬಲ ಬಯಕೆಯಾಗಿತ್ತು. ವರ್ಷ ೧೯೬೧ ರಲ್ಲಿ ಆಗಿನ  ಬಹಳ ಪ್ರಖ್ಯಾತ ಮ್ಯೂಸಿಕ್ ಡೈರೆಕ್ಟರೊಬ್ಬರು (ಎಸ್. ಡಿ. ಬರ್ಮನ್) ಒಂದು ಹಾಡನ್ನು ಖ್ಯಾತ ಗಾಯಕ, ಮೊಹಮ್ಮದ್ ರಫಿಯವರ ಕಂಠದಿಂದ ರೆಕಾರ್ಡ್ ಮಾಡಿದ್ದರು. ಆದರೆ ಸ್ವಲ್ಪ ಕಾಲದ ಬಳಿಕ ಅದೇ ಪ್ರಖ್ಯಾತ ಸಂಗೀತ ನಿರ್ದೇಶಕರು  ಕಿಶೋರ್ ಕುಮಾರ್ ರವರಿಂದ ತಮ್ಮ ಅದೇ ಹಾಡನ್ನು  ಹಾಡಿಸಿದರು. ಆದರೆ  ಆ ಗೀತೆಯನ್ನು ಕೇಳಿದವರಲ್ಲಿ ಅನೇಕರು ಕಿಶೋರ್ ಕುಮಾರ್ ಹಾಡಿನ ವರ್ಶನ್  ಕೇಳಿ ತೃಪ್ತರಾಗಿ ಬಹಳ ಸಂತೋಷಪಟ್ಟರು. ಹಾಗಾದರೆ ಯಾರವರು ಹೀಗೆ ಬೇರೆ ಬೇರೆ ಗಾಯಕರಿಂದ ಹಾಡು ಹೇಳಿಸಿದವರು ಎನ್ನುವ ಬಗ್ಗೆ  ತಿಳಿಯೋಣವೇ ? 

ಯೇ ದಿಲ್ ನಾ ಹೋತ ಬೇಚಾರ 
ಕದಂ ನ ಹೋತೇ ಆವಾರ ;
ಜೋ ಖೂಬ್ ಸೂರತ್ ಕೊಯಿ 
ಅಪ್ನಾ ಹಮ್ ಸಫರ್ ಹೋತ, 
 
ಗುರುದತ್ ರು ಈಗಾಗಲೇ ಹಿಂದೆ  ನಿರ್ಮಿಸಿದ   ಎರಡು ಹೆಸರಾಂತ ಚಿತ್ರಗಳಾದ 'ಪ್ಯಾಸಾ',' ಕಾಗಜ್ ಕೆ ಫೂಲ್'   ಸಂಗೀತ ಒದಗಿಸಿದ್ದ ಎಸ್ ಡಿ ಬರ್ಮನ್ ರವರ ಬಳಿಯೇ ಹಿಂದೆ ಪ್ರಸ್ತಾಪಿಸಿದ  ರೆಕಾರ್ಡ್ ಇತ್ತು. ಎಸ್ ಡಿ. ಬರ್ಮನ್ ರು ಒಟ್ಟು  ೫ ಗೀತೆಗಳ ಧುನ್ ತಯಾರಿಸಿ ತಮ್ಮ ಬಳಿ ಇಟ್ಟುಕೊಂಡಿದ್ದರು. ಹಾಗೆ ಮಾಡಿದ ಧುನ್ ಗುಚ್ಛದಲ್ಲಿನ ಗೀತೆಗಳಲ್ಲಿ ಒಂದನ್ನು ಮೊಹಮ್ಮದ್ ರಫಿ ಯವರು ಹಾಡಿದ್ದರು. ಈ ರೆಕಾರ್ಡಿಂಗ್ ನಡೆದ ಕೆಲವು ದಿನಗಳಮೇಲೆ ಬರ್ಮನ್ದಾ ರವರಿಗೆ ಹೃದಯಾಘಾತವಾಗಿ ಆರೈಕೆಯಲ್ಲಿದ್ದರು. 
 
ಆ ಸಮಯದಲ್ಲಿ ಅವರ ವೈದ್ಯರು ಬರ್ಮನ್ದಾದಾರವರು ಕಡಿಮೆ-ಕಡಿಮೆ ಎಂದರೆ ೬  ತಿಂಗಳಾದರು ಕೆಲಸದಿಂದ ರೆಸ್ಟ್  ತೆಗೆದುಕೊಳ್ಳುವುದು ಅತಿ ಆವಶ್ಯಕ, ಯಾವ ರೆಕಾರ್ಡಿಂಗ್ ಗೂ  ಹೋಗಬಾರದು, ಗೀತರಚನೆ, ಸಂಗೀತ ಅಳವಡಿಕೆಯ ಪ್ರಕ್ರಿಯೆಗಳನ್ನು ಕೂಡಲೇ ನಿಲ್ಲಿಸಿ' ಎಂದು ಸಲಹೆ ಮಾಡಿದರು. ಎಸ್ ಡಿ. ಯವರು ಸ್ವಲ್ಪ ಚೇತರಿಸಿಕೊಂಡರಾದರೂ ವೈದ್ಯರ ಸಲಹೆಯನ್ನು ದೂರೀಕರಿಸುವಂತಿರಲಿಲ್ಲ. ಹೃದಯಾಘಾತ ಬಹಳ ನಾಜೂಕಾದ ಕಾಯಿಲೆ. ಸರಿಯಾದ ನಿಗಾವಹಿಸದಿದ್ದರೆ,  ಯಾವ ಸಮಯದಲ್ಲಾದರೂ ಕೈಕೊಡಬಹುದು. ಇಂತಹ ಕಾಲಘಟ್ಟದಲ್ಲಿ ಗುರುದತ್ ತಮ್ಮ ಚಿತ್ರತಯಾರಿಕೆಯನ್ನು ೬ ತಿಂಗಳ ಕಾಲ ಸ್ಥಗಿತಗೊಳಿಸುವ ಮನಸ್ಥಿತಿಯಲ್ಲಿರಲಿಲ್ಲ. ಬರ್ಮನ್ದಾ  ಜತೆ ಮಾತಾಡಿ, 'ಓ ಪಿ. ನಯ್ಯರ್' ರನ್ನು ಅವರ ಜಾಗದಲ್ಲಿ  ನೇಮಿಸಿದರು. ಹೊರಗಡೆ ಒಪ್ಪಿಗೆ ಕೊಟ್ಟರಾದರೂ  ಈ ಬದಲಾವಣೆಯಿಂದ ಅವರು ಸಂತುಷ್ಟರಾಗಿರಲಿಲ್ಲ. ಆದರೆ ಹೊರಗೆ ವ್ಯಕ್ತಪಡಿಸುವಂತಿಲ್ಲ. ಅದಲ್ಲದೆ ಅವರು ಈಗಾಗಲೇ ತಮ್ಮ ಧುನ್ ಗಳು ಸಿದ್ಧವಾಗಿವೆ ; ನನ್ನ ಮಗ ಆರ್. ಡಿ. ಬರ್ಮನ್ (ಪಂಚಮ್ ) ಗೆ  ಹೇಳಿ ಸಂಗೀತ ತಯಾರಿಸಿಕೊಡುವೆ ಎಂದು ಹೇಳಿದಾಗ, ಗುರುದತ್  ಒಪ್ಪಲು ತಯಾರಿರಲಿಲ್ಲ; ಏನೇಆಗಲಿ ನೀವೇ ಆ ಕೆಲಸ ಮಾಡಿದರೆ ನನಗೆ ಸಮಾಧಾನವೆಂದು     ಹಠಹಿಡಿದರು. ಈಗ  ಹೊಸ ಸಂಗೀತ ನಿರ್ದೇಶಕ  ಒಪಿನಯ್ಯರ್ ಕೆಲಸವನ್ನು ಕೈಗೆ ತೆಗೆದುಕೊಂಡರೂ ಎಸ್ಡಿಯವರು  ಹಿಂದೆ ತಾವು ಧ್ವನಿಮುದ್ರಿಸಿದ್ದ  ಗೀತೆಯನ್ನು ಬಿಟ್ಟುಕೊಡಲು ಸಿದ್ಧರಾಗಿರಲಿಲ್ಲ ; ಹಾಗಾಗಿ ರಫಿಯವರಿಂದ ಹಾಡಿಸಿದ ಗೀತೆ ಕಸದ ಡಬ್ಬದಲ್ಲಿ ಬಿದ್ದು ನಿಷ್ಕ್ರಿಯವಾಯಿತು. 
 
ಅದೇ ಕಾಲಘಟ್ಟದಲ್ಲಿ ದೇವ್ ಆನಂದ್ ರವರ ಗೈಡ್ ಚಿತ್ರ  ನಿರ್ಮಾಣ ಭರದಿಂದ ಸಾಗುತ್ತಿತ್ತು. ಅವರದೇ ಆದ ಮತ್ತೊಂದು ಚಿತ್ರ,  ಜ್ಯುಯೆಲ್ ತೀಫ್ ಚಿತ್ರವೂ ಬೆಳವಣಿಗೆಯ ವಿವಿಧ  ಹಂತದಲ್ಲಿತ್ತು. ಆಗಿನ ಸಮಯದ ಅತ್ಯಂತ ಯಶಸ್ವಿ ಸಿನಿಮಾ ನಾಯಕ ನಟ, ದೇವಾನಂದ್ ಯಾವಾಗಲು ತಮ್ಮ ಚಿತ್ರಗಳಿಗೆ ಎಸ್. ಡಿ. ಬರ್ಮನ್ ರನ್ನೇ ತೆಗೆದುಕೊಳ್ಳುತ್ತಿದ್ದರು. ಈಗ ದಾದಾ ಚೇತರಿಸಿಕೊಂಡಿದ್ದಾರೆ. ಅವರಿಗಾಗಿ ಕಾಯುತ್ತಿದ್ದ ದೇವ್ ತಮಗಾಗಿ ಒಳ್ಳೆಯ ಗೀತೆಗಳನ್ನು  ಹಾಡಲು  ಪ್ರಾರ್ಥಿಸಿದರು. ಆಗ ದಾದಾ ತಮ್ಮ ಶಿಷ್ಯ ಕಿಶೋರ್ ಕುಮಾರ್ ರನ್ನು ಕರೆದು, ಗೀತೆಯನ್ನು ಮೊದಲು ಮೊಹಮ್ಮದ್ ರಫಿಯವರಿಂದ ಹಾಡಿಸಬೇಕಾದ ಪ್ರಮೇಯ  ಬಂದಿತ್ತು. ಏನೋ ಕಾರಣಕ್ಕಾಗಿ ಅದನ್ನು ಬಳಸಲಾಗಲಿಲ್ಲ ಈಗ ಅದೇ ಗೀತೆಯನ್ನು ರಫಿಯವರಿಗೆ ಸವಾಲಾಗಿ ಅತ್ಯಂತ  ಸುಂದರವಾಗಿ  ನೀವು ಹಾಡಿ, ಎಂದು ಕರೆಕೊಟ್ಟು ಪ್ರೋತ್ಸಾಹಿಸಿದರು. "ಯೇ ದಿಲ್ ನಾ ಹೋತ ಬೇಚಾರ" ಗೀತೆಯನ್ನು ದೇವಾನಂದ್ ನಟನೆಯಲ್ಲಿ ಕೇಳಲು ಸಿನಿ-ನೋಡುಗರು ಬಹಳ ಆಸಕ್ತಿ ವಹಿಸಿದರು. ಹೀಗೆ 'ಜ್ಯೂಯೆಲ್ ತೀಫ್ ಚಿತ್ರ' ದ  ಹಾಡು ಕಿಶೋರ್ ರವರ ಕಂಠದಲ್ಲಿ ಮೂಡಿಬಂದು,  ಗಲ್ಲಾ ಪೆಟ್ಟಿಗೆಯಲ್ಲಿ  ಒಂದು ದೊಡ್ಡ ಹೆಸರನ್ನು ಮಾಡಿ ಜನಮನದಲ್ಲಿ ಸ್ಥಾನಗಳಿಸಿತು  
 
* (ಜನಿಸಿದ ತಾರೀಖು ಮತ್ತು ಸಿನಿಮಾರಂಗದಲ್ಲಿ ಪಾದಾರ್ಪಣೆ)
 
** ಮೋತಿಲಾಲ್ ನಮ್ಮದೇ ಆದ ಶೈಲಿಯಲ್ಲಿ ತಮ್ಮ ಮದುವೆಯ ಬಗ್ಗೆ  ಬಣ್ಣಿಸುತ್ತಿದ್ದಾಗ ಅವರ ಕಣ್ಣಿನಲ್ಲಿ ವಿಶೇಷ ಮಿಂಚು ಮಿನುಗುತ್ತಿತ್ತು. ಅವರು ಹೇಳಿದ್ದು ಹೀಗೆ : 
 
"ವಿವಾಹವಾಗಿದ್ದು ನೂರು ಬಾರಿ. ಎರಡು ಬಾರಿಯಂತೂ  ಮರಣಿಸಿದೆ, ನಂತರ ಜನಿಸಲೇ ಇಲ್ಲ ; ಆದರೆ  ಯಾವಾಗಲೂ  ಪ್ಯಾರಾಚೂಟ್  ದಯದಿಂದ  ಕೆಳಗಿಳಿದೆ "
Rating
Average: 4 (3 votes)