ಯೋಚನೆ ಮಾಡಿ, ನಮ್ಮ ಕಥೆ ಏನಾಗಬಹುದು? ಅಂತಾ
ಯಾವ ಕಾರಣದಿಂದ ಈ ಫೋಟೋವನ್ನು fbಯಲ್ಲಿ ಅಪ್ ಲೋಡ್ ಮಾಡಿದ್ದಾರೋ ನಂಗೊತ್ತಿಲ್ಲ. ಆದರೆ ನನಗೆ ಅನ್ನಿಸಿದ್ದು......ಇವತ್ತಿನ ಹಲವು ಮಕ್ಕಳ ಪಾಡುನೋಡಿ. ಕಕ್ಕ-ಉಚ್ಚೆ ಮಾಡಿದ್ರೆ ಅದನ್ನು ಹೀರುವ ಪ್ಯಾಡ್ ಕಟ್ಟಿ ಸುತ್ತ ಒಂದಿಷ್ಟು ಆಟದಸಾಮಾನು ಬಿಸಾಕಿ ಒಂದು ಸ್ಪೆಶಲ್ ಕುರ್ಚಿ ಮೇಲೆ ಕುಕ್ ಹಾಕಿ ಏನಾದ್ರೂ ರಡಿ ಫುಡ್ ತಿನ್ನಿಸೋಕೆ ಆಯಾಗೆ ಹೇಳಿ ಆ ಹೆತ್ತಮ್ಮಾ ಅನ್ನಿಸಿಕೊಂಡೋಳು ದುಡಿಯಲು IT ಕಂಪನೀಗಾದ್ರೂ ಹೋಗಬಹುದು, ಯಾವುದಾದರೂ ಕ್ಲಬ್ ಗಾದರೂ ಹೋಗಬಹುದು. ಇಂತಾ ಘಟನೆ ನೀವು ನೋಡಿಲ್ವಾ? ಆಗ ಪಾಪ ಮನೆಯಲ್ಲಿ ಸಾಕಿದ ನಾಯಿ ತಾನೇ ಬಂದು ಮುದ್ದು ಮಾಡ ಬೇಕಾಗಿರುವುದು. ಅಬ್ಭಾ! ಬಡ ತನದ ಮನೆಯಲ್ಲಿ ಹುಟ್ಟಿದ್ದರೂ ನಮಗೆ ಇಂತಾ ದುರ್ಗತಿ ಬಂದಿರಲಿಲ್ಲ. ರಾಗಿ ರೊಟ್ಟಿನೋ, ತೆಂಗಿನಕಾಯಿನ ಚೂರನ್ನೋ ಮಕ್ಕಳು ಅತ್ತಾಗ ಅಮ್ಮಂದಿರು ಕೊಟ್ಟು ಎತ್ತಿಕೊಂಡು ಮುದ್ದು ಮಾಡ್ತಿದ್ರು. ಆ ಕಾಲ ಹೋಗೇ ಬಿಡ್ತಾ? ಅರೇ, ಟೈಟ್ ಪ್ಯಾಂಟ್ ಟೀ ಶರ್ಟ್ ಹಾಕೊಳ್ಳೋ ಅಮ್ಮಂದಿರ ಎದೆಯಲ್ಲಿ ಹಾಲು ಬರುವುದೇ ಇಲ್ಲಾಂತ ಕಾಣುತ್ತೆ. ಮಕ್ಕಳಾಗಿದ್ದಾಗ ಮಕ್ಕಳ ಪುಟ್ಟಕಾಲುಗಳಿಂದ ಒದೆತ ತಿನ್ನದ ಇವರು ಅವರು ದೊಡ್ದವರಾದ ಮೇಲೆ ಪಡುವ ಭವಣೆ ಕಲ್ಪಿಸಿ ಕೊಳ್ಳಲಾರರು. ಮೊನ್ನೆ ಒಬ್ರು ಮನೆಯಲ್ಲಿ ವಯಸ್ಸಾದ ಅಜ್ಜ ಅಜ್ಜಿಯರಿಗೂ ಅಂಡಿಗೆ ಪ್ಯಾಡ್ ಕಟ್ಟಿ ಮಲಗಿಸಿದ್ರು ಕಂಡ್ರೀ.ದಿನದಲ್ಲಿ ಒಮ್ಮೆ ಆಯಾ ಬಂದು ಕ್ಲೀನ್ ಮಾಡ್ತಾಳಂತೆ. ಹೆತ್ತವರಿಗೆ ಮಾಡುವ ಸೇವೆಯ ಪರಿ ಇದು!! ಸತ್ತಮೇಲೆ ಶ್ರಾದ್ಧ ಮಾತ್ರ ತಪ್ಪದೆ ಮಾಡ್ತೀವಿ ಅಲ್ವಾ? ಪಾಪ ಪ್ಯಾಡ್ ನಲ್ಲಿ ಕಕ್ಕ ಮಾಡಿಕೊಂಡು ಅದರ ವಾಸನೆ ಯಲ್ಲಿ ಇಡೀ ದಿನ ಕಳೀ ಬೇಕಾದ ದು:ಸ್ಥಿತಿ ಈ ವಯಸ್ಸಲ್ಲಿ ಬಂತಲ್ಲಾ ಆ ವೃದ್ಧರಿಗೆ!!!????
Comments
ಉ: ಯೋಚನೆ ಮಾಡಿ, ನಮ್ಮ ಕಥೆ ಏನಾಗಬಹುದು? ಅಂತಾ
ಶ್ರೀಧರ್ ಸರ್,
ಮಕ್ಕಳು ಚಿಕ್ಕವರಿದ್ದಾಗ ತಂದೆ-ತಾಯಿಗಳು ಪ್ಯಾಡ್ ಕಟ್ಟಿದ್ದರ ಪರಿಣಾಮ ದೊಡ್ಡವರಾದ ಮೇಲೆ ಅವರ ಮಕ್ಕಳು ಅವರಿಗೆ ಪ್ಯಾಡ್ ಕಟ್ಟುತ್ತಿದ್ದಾರೆ :((
ಮಗುವನ್ನು ಬೇಬಿ-ಕೇರ್ ಸೆಂಟರಿನಲ್ಲಿ ತಂದೆ-ತಾಯಿಗಳು ಬಿಟ್ಟು ಬಂದರೆ ವೃದ್ಧರಾದ ಮೇಲೆ ಇವರನ್ನು ವೃದ್ಧಾಶ್ರಮಗಳಿಗೆ ಮಕ್ಕಳು ಬಿಟ್ಟು ಬರುತ್ತಾರೆ. ನಾವು ಕಲಿಸಿದ ಪಾಠವನ್ನೇ ಮಕ್ಕಳು ನಮಗೇ ಒಪ್ಪಿಸುತ್ತಿದ್ದಾರೆ :((
ಇಂದಿನ ಸಮಾಜವು ನಾವು ಕಳೆದುಕೊಳ್ಳುತ್ತಿರುವುದೇನು ಎನ್ನುವುದನ್ನು ಸೂಕ್ತವಾದ ದಿಶೆಯಲ್ಲಿ ಆಲೋಚಿಸಬೇಕಾಗಿದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ಯೋಚನೆ ಮಾಡಿ, ನಮ್ಮ ಕಥೆ ಏನಾಗಬಹುದು? ಅಂತಾ
ವಿದೇಶಿ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಸಂಬಂಧಗಳ ಮಹತ್ವವನ್ನೆ ಮರೆತಿದ್ದೇವೆ. ಹಣದಿಂದಲೇ ಎಲ್ಲ ಸುಖ ಸಂತೋಷ ಪಡೆಯಬಹುದೆನ್ನುವ ಭ್ರಮೆ ಇದಕ್ಕೆಲ್ಲ ಕಾರಣ. ಚಿಂತನಾರ್ಹ ಲೇಖನ ಶ್ರೀಧರ್ ರವರೇ ಧನ್ಯವಾದಗಳೊಂದಿಗೆ.....ಸತೀಶ್