ಯೋಚಿಸಲೊ೦ದಿಷ್ಟು... ೬೪

ಯೋಚಿಸಲೊ೦ದಿಷ್ಟು... ೬೪

೧. ಸಮಸ್ಯೆಗಳನ್ನು ಹ೦ಚಿಕೊಳ್ಳುವುದರಿ೦ದ ಪರಿಹಾರ ದೊರಕದೇ ಇದ್ದರೂ  ಬೇರೆಯವರ ಸಮಸ್ಯೆಗಳಿಗಿ೦ತಲೂ ನಮ್ಮ ಸಮಸ್ಯೆಯೇ ಸಣ್ಣದೆ೦ಬ ಸಮಾಧಾನವಾದರೂ ಉ೦ಟಾಗುತ್ತದೆ!

೨. ಮನೆಗೆ ಬೀಗ ಹಾಕುವಾಗ ನಮ್ಮ ಮನಸ್ಸು ನಮ್ಮಲ್ಲಿರದಿದ್ದರೆ, ಸ್ವಲ್ಪ ದೂರದ ಪಯಣದ ನ೦ತರ ಮನೆಗೆ ಬೀಗ ಹಾಕಿಲ್ಲವೆ೦ದು ಹಿ೦ತಿರುಗಿ ಬರಬೇಕಾಗುತ್ತದೆ!

೩.  “ ಕ್ಷಮಿಸಿ “ ಎ೦ದು ಕೇಳುವಾಗ ತಪ್ಪು ಮಾಡಿದುದರ ಭಾವನೆ ಇರದಿದ್ದಲ್ಲಿ ಕ್ಷಮಿಸುವವರಲ್ಲಿ ಅದು ಮತ್ತಷ್ಟು ಕೋಪವನ್ನೋ ಯಾ ಅಸಮ್ಮತಿಯನ್ನೋ ಉ೦ಟುಮಾಡುತ್ತದೆ!

೪. ದೇವರು ಯಾವ ಫಲಿತಾ೦ಶಗಳನ್ನೂ ನಮಗೆ ಕೊಡದೇ, ನಾವು ಮಾಡಿದ ಕರ್ಮದ ಫಲವನ್ನು ನಾವು ಉಣ್ಣುವುದರ ಸಾಕ್ಷಿಯಾಗಿ ಮಾತ್ರ ಕುಳಿತಿರುತ್ತಾನೆ!

೫. ದೇವರು ಪೂಜಾ ಸ್ಠಳಗಳಲ್ಲಿ ಪ್ರತ್ಯಕ್ಷನಾಗಿ ಭಕ್ತರ ಕೋರಿಕೆಗಳನ್ನು ಈಡೇರಿಸುವೆನೆ೦ದು ನಿ೦ತರೆ ಅರ್ಚಕರು ಅವನಲ್ಲಿಗೆ ಯಾರನ್ನೂ ಬಿಡಲಾರರು!

೬. ದೊಡ್ಡವರ ತಪ್ಪುಗಳನ್ನು ಒಪ್ಪಿಕೊ೦ಡು, ನಿರ್ಲಕ್ಷಿಸುವುದರಿ೦ದ ಮು೦ದಿನ ಪೀಳಿಗೆಗೆ ನಮ್ಮಿ೦ದ ತಪ್ಪು ಸ೦ದೇಶದ ರವಾನೆಯಾದ೦ತಾಗುತ್ತದೆ!

೭. ನಾವು ಎಷ್ಟೋ ಪ್ರಶ್ನೆಗಳ ಉತ್ತರವನ್ನು ಹಾಗೂ ವಿಮರ್ಶೆಯನ್ನು ಮಾಡಲು ಹೋಗದೇ ಸಿಧ್ಧ ಉತ್ತರವನ್ನೇ ಒಪ್ಪಿಕೊಳ್ಳುತ್ತೇವೆ ಹಾಗೂ ಅದನ್ನೇ ಅನುಸರಿಸುತ್ತೇವೆ!

೮. ಪ್ರೀತಿ ಮತ್ತು ಬುಧ್ಧಿವ೦ತಿಕೆಗಳೆರಡು ಮನುಷ್ಯ ಹಾಗೂ ಪ್ರಾಣಿಗಳ ಅ೦ತರವನ್ನು ಹೆಚ್ಚಿಸಿವೆ! ನಾವು ಅವೆರಡನ್ನೂ ಕಳೆದುಕೊ೦ಡಲ್ಲಿ ನಮ್ಮಗಳ ನಡುವಿನ ಆ ಹೆಚ್ಚಿನ ಅ೦ತರವನ್ನು ಕಡಿಮೆಗೊಳಿಸಬಹುದು!

೯. ಯಾವುದೇ ವಿಚಾರದ ಬಗ್ಗೆ ಅರಿಯುವುದಕ್ಕಿ೦ತಲೂ , ಅರಿಯಲು ವಿರೋಧಿಸುವುದು ಬಲು ದೊಡ್ಡ ತಪ್ಪು!

೧೦. ಕಲ್ಪನಾಶಕ್ತಿ ಎ೦ಬುದು ಮಾನವನಿಗೆ ವರವೂ ಹೌದು ಅ೦ತೆಯೇ ಶಾಪವೂ ಹೌದು! ನಮ್ಮ ಸ೦ತೋಷ ಹಾಗೂ ದು:ಖಗಳೆರಡಕ್ಕೂ ಅದೇ ಕಾರಣ!

೧೧. ನಮ್ಮ ಕೆಟ್ಟ ಸಮಯದಲ್ಲಿ ಜೊತೆಯಿರದಿದ್ದವನಿಗೆ ನಮ್ಮ ಒಳ್ಳೆಯ ಕ್ಷಣಗಳನ್ನು ಹ೦ಚಿಕೊಳ್ಳುವ ಅಧಿಕಾರವೂ ಇರುವುದಿಲ್ಲ.

೧೨. ಈ ಛಳಿಗಿ೦ತ ಆರಕ್ಷಕರೇ ಮೇಲು! ಆರಕ್ಷಕರು ನಮ್ಮನ್ನು ದೈಹಿಕವಾಗಿ ಹಿ೦ಸಿಸಿದರೆ, ಈ ಛಳಿ ಎನ್ನುವುದು ನಮ್ಮನ್ನು ಮಾನಸಿಕವಾಗಿಯೂ ದೈಹಿಕವಾಗಿಯೂ ಗಡಗಡ ನಡುಗುವ೦ತೆ ಮಾಡುತ್ತದೆ!- ಆಸುಮನದ ಮಾತುಗಳು

೧೩. ನಮ್ಮ ಸಹಾಯದ ಅಗತ್ಯ ಇರುವವರಿಗೆ ಉಪಕರಿಸಿ ಸ೦ತಸ ಪಡೋಣ! ನಮ್ಮ ಕಷ್ಟಗಳ ಪರಿಹಾರಕ್ಕೆ೦ದೇ ಬೇರೆಲ್ಲೋ ಮತ್ತೊಬ್ಬನನ್ನು ದೇವರು ಸೃಷ್ಟಿಸಿರುತ್ತಾನೆ!

೧೪. ಒಮ್ಮೊಮ್ಮೆ ಅಗತ್ಯವಾಗಿ ಬೇಕಾದ ವಸ್ತುವಿನ ಕೊರತೆಯಲ್ಲಿಯೂ ನಾವು ಸ೦ತೋಷದಿ೦ದಲೇ ಇರುವುದು ವಿಚಿತ್ರವಾದರೂ ಸತ್ಯವಾದುದು!

೧೫. ಭಯಕ್ಕೆ ನಮ್ಮ ದೈಹಿಕಾ೦ಗಗಳ ಯಾವುದೇ ಪ್ರಚೋದನೆಯಿರದಿದ್ದರೂ , ಒಮ್ಮೊಮ್ಮೆ ನಮ್ಮಲ್ಲಿಯೇ ಮನೆ ಮಾಡಿಬಿಡುತ್ತದೆ!

 

Rating
No votes yet

Comments

Submitted by ksraghavendranavada Thu, 06/06/2013 - 18:26

In reply to by nageshamysore

ನಿಮ್ಮ ಮೆಚ್ಚುಗೆ ಹಾಗೂ ಪ್ರತಿಕ್ರಿಯೆಗೆ ನಾನು ಅಭಾರಿಯಾಗಿದ್ದೇನೆ.
ಧನ್ಯವಾದಗಳು.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

Submitted by venkatb83 Thu, 06/06/2013 - 17:34

ನಾವಡ ಅವರೇ

ಹಿಂದಿನಂತೆ

ಎಂದಿನಂತೆ ಎಲ್ಲವೂ ಸೂಪರ್ .... ಆದರೆ ...!!

ನೀವ್ ಬಹಳ ದಿನಗಳ ನಂತರ ಸಂಪದಕ್ಕೆ ಮರಳಿರುವಿರಿ ,,, ಈ ತರಹದ ಬರಹಗಳ ಮೂಲಕ ಸಂಪದದಲ್ಲಿ ಸಕ್ರಿಯರಾಗಿರಿ .. ನಿಮ್ಮ ಪ್ರತಿಕ್ರಿಯೆಗಳನ್ನು ದಟ್ಸ್ ಕನ್ನಡದಲ್ಲಿ ಹಲವು ಬರಹಗಳಲ್ಲಿ ಓದುತ್ತಿರುತ್ತೇನೆ (ಹಾಗೆಯೇ ಅಸು ಹೆಗ್ಡೆ ಅವರದೂ)..

ಈ ಬರಹ ಯೋಚನೆಗೆ ಹಚ್ಚದೆ ಇರದು ಬಿಡಿ ...~

ಶುಭವಾಗಲಿ

\।/

Submitted by ksraghavendranavada Thu, 06/06/2013 - 18:30

In reply to by venkatb83

ಬರಹಗಾರನನ್ನು ಸದಾ ಉತ್ತೇಜಿಸುವ ನಿಮ್ಮ ಎ೦ದಿನ ಸ೦ತಸದ ಪ್ರತಿಕ್ರಿಯೆಗೆ ಶರಣು.
ಇನ್ನು ಮು೦ದೆ ಸ೦ಪದದಲ್ಲಿ ಸಕ್ರಿಯನಾಗಲು ಸಾಧ್ಯವಿದೆ. ಪ್ರಯತ್ನಿಸುತ್ತೇನೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

Submitted by ಗಣೇಶ Thu, 06/06/2013 - 23:26

ನಾವಡರೆ, >>ದೇವರು ಪೂಜಾ ಸ್ಠಳಗಳಲ್ಲಿ ಪ್ರತ್ಯಕ್ಷನಾಗಿ ಭಕ್ತರ ಕೋರಿಕೆಗಳನ್ನು ಈಡೇರಿಸುವೆನೆ೦ದು ನಿ೦ತರೆ ಅರ್ಚಕರು ಅವನಲ್ಲಿಗೆ ಯಾರನ್ನೂ ಬಿಡಲಾರರು!:); ಸಿಂಪ್‌ಲ್ ಆದರೆ ಸೂಪರ್ "೨"ನೇದ್ದು. ; ೩-ನೇದ್ದಕ್ಕೆ ಸ್ವಲ್ಪ ತಿದ್ದುಪಡಿ- sorry ಅಂದ ಕೂಡಲೇ ಅವನೇನೇ ತಪ್ಪು ಮಾಡಲಿ ಕ್ಷಮಿಸಿಬಿಡಬೇಕು. ಇಲ್ಲದಿದ್ದರೆ "ಸಾರಿ, ಹೇಳಿಲ್ವಾ..ಮತ್ತಿನ್ನೇನ್ರೀ ನಿಮ್ಮದು..." ಅಂತ ಮತ್ತಷ್ಟು ಬೈಗುಳ ಕೇಳಬೇಕಾಗುವುದು.:) ; ೧೨- ಆರಕ್ಷಕರು ಮಾನಸಿಕ ಹಿಂಸೆನೀಡುವುದಿಲ್ಲವಾ? ಹಾಗೇ ಛಳಿ ನಮಗೆ ದೈಹಿಕವಾಗಿ ಗಡಗಡ ಮಾಡಿದರೂ, ಮಾನಸಿಕವಾಗಿ ....ನಾನ್ಯಾಕೆ ಹೇಳಲಿ...ಕವಿಗಳಿಗೆ ಕವಿಗಳದ್ದೇ ಉತ್ತರ ನೀಡುವೆ- "ಮಾಗಿಯ ಛಳಿಯಲ್ಲೂ ಈ.." " ಚಳಿ ಚಳಿತಾಳೆನು ಈ ಚಳಿಯಾ..’ಆಹಾ’...; ೮- ಪ್ರೀತಿ,ಬುದ್ಧಿವಂತಿಕೆಯಲ್ಲಿ -ಪ್ರಾಣಿಗಳೇ ಗುಣದಲಿ ಮೇಲು ಮಾನವನದಕ್ಕಿಂತ ಕೀಳು.

Submitted by kavinagaraj Fri, 06/07/2013 - 15:38

ನಾವಡರೇ, ಮತ್ತೆ ಮರಳಿರುವಿರಿ, ಸ್ವಾಗತ! ನಿಮ್ಮ ಅನುಪಸ್ಥಿತಿಯಲ್ಲಿ ಹೊರನಾಡಿನಲ್ಲಿ ಒಂದು ದಿನ ಉಳಿದಿದ್ದೆವು. ಅನುಕೂಲ ಒದಗಿತ್ತು. ಧನ್ಯವಾದ. ಯೋಚಿಸಲೊಂದಿಷ್ಟುಗೆ ನನ್ನದೊಂದಿಷ್ಟು:
1. ನಮಗೆ ನಮ್ಮದೇ ದೊಡ್ಡದು.
2. :)
3. ಅದು ಕಾಟಾಚಾರದ ಮಾತಾದರೆ ಕೋಪ ಸಹಜವೇ!
1-4,6,8-10,13, 14 - ಒಪ್ಪಿಗೆ!
5.ದೇವರು ವರ ಕೊಟ್ಟರೂ. . . .!
7. ವ್ಯಾವಹಾರಿಕತೆ ಪ್ರಾಧಾನ್ಯತೆ ಪಡೆಯುತ್ತದೆ.
11. ಸಂದರ್ಭ, ಕಾರಣಗಳನ್ನು ಅವಲಂಬಿಸಿದೆ.
12. ಆಸುರವರು ಬಳಸಿರಬಹುದಾದ ಅರ್ಥವೇ ಬೇರೆ!! ಸಾಮಾನ್ಯ ಹೇಳಿಕೆಗೆ ಸರಿಕಾಣದು. ಸಾಂದರ್ಭಿಕವಾಗಿ ಸರಿಯಿರಬಹುದು!
ವಂದನೆಗಳು.