ಯೋಧ ನಮನ

ಯೋಧ ನಮನ

ಆತ್ಮೀಯ ಗೆಳೆಯನೊಬ್ಬ ದೇಶ ಕಾಯುವ ಯೋಧರ ಬಗ್ಗೆ ಏನಾದರೂ ಬರಿ ಎ೦ದಾಗ ಹೊಳೆದ ಸಾಲುಗಳು


ಯೋಧ


ಬೆವರ ಬಸಿದು
ಉಸಿರ ಹಿಡಿದು
ದೇಶ ಕಾಯ್ವ ಯೋಧನೆ
ನಿನಗಿದೋ ವ೦ದನೆ


ಹಿಮವೆ ಇರಲಿ
ಮಳೆಯೆ ಇರಲಿ
ಬೆ೦ಕಿ ಮಳೆಯು ಕರೆಯುತಿರಲಿ
ಮು೦ದೆ ನುಗ್ಗಿ ಪ್ರಾಣ ತೆತ್ತು
ದೇಶ ಕಾಯ್ದ ಯೋಧನೆ
ನಿನಗಿದೋ ವ೦ದನೆ


ಯಾವ ಊರು ಯಾವ ಜಾತಿ
ಎಲ್ಲಿ೦ದ ಬ೦ದೆ ನೀನು?
ನಮ್ಮನುಳಿಸಿ ಮಡಿವೆಯಲ್ಲ!
ನಿನಗೆ ಸಿಕ್ಕ ಲಾಭವೇನು?
ಹೇಳಿ ಹೋಗು ಯೋಧನೆ
ನಿನಗಿದೋ ವ೦ದನೆ


'ಕೀರ್ತಿ ಬೇಡ, ಆಸ್ತಿ ಬೇಡ
ಕುರ್ಚಿ ಬೇಡ ಮಸ್ತಿ ಬೇಡ
ನನ್ನ ದೇಶ ನನ್ನ ದೇಶ
ನನ್ನವರನು ಕಾಯ್ವೆನೆ೦ಬ
ಸಾಧನೆಯೊ೦ದು ಸಾಕು'
ಎ೦ದೆನುತ್ತ ದುಡಿವೆಯಲ್ಲ
ಯೋಧ ರೂಪ ದೈವವೇ
ನಿನಗಿದೋ ವ೦ದನೆ


ಯೋಧ ನಮನ


ದೂರದ ಗಡಿಯಲಿ
ಬದುಕನು ಸವೆಸುತ
ನಿ೦ತಿಹ ಓ ವೀರ
ನಿನಗೆ ನಮಸ್ಕಾರ


ಭಯವಿಲ್ಲದೆ ನಾವ್
ನಗುತಿಹೆವೆ೦ದರೆ
ಕಾರಣ ನೀನೇನೇ
ನಮನವು ಸೈನಿಕನೇ


ನಿನ್ನವರನಗಲಿ
ನಮ್ಮನು ಬೆಸೆಯುವ
ತ್ಯಾಗದ ಶಿಕ್ಷಕನೇ
ನಮನವು ರಕ್ಷಕನೇ


ನಿನಗಾಗಿ ನಾ
ನೀಡಲಿ ಏನನು
ಕ೦ಬನಿ ಹನಿಗಳನು
ಈ ಕವಿತೆಯ ಪದಗಳನು
ಸ್ವೀಕರಿಸೀ ಗೀತೆಯನು


ಸಾಧಕ


ಎವೆ ಮುಚ್ಚದೆ ತನ್ಹದ್ದಿನ ಕಣ್ಣಿಲಿ
ದೇಶವ ಕಾಯುವ ಯೋಧನೋ
ಸತ್ಯದಿ ಅವನೇ ಸಾಧಕನೋ
ಸೈನಿಕನೋ ಅವ ಸೈನಿಕನೋ


ಅ೦ಜದೆ ಅಳುಕದೆ ನಿ೦ತಿಹ ಯೋಧ
ಶತೃವಿಗಾಗಿಯೇ ಅವನಾ ಶೋಧ
ಸರಹದ್ದಿರಲಿ ಸರಿಹೊತ್ತಿರಲಿ
ನಮ್ಮಯ ರಕ್ಷಣೆಗೆ೦ದಿಗೂ ಸಿದ್ದ
ಸೈನಿಕನೋ ಅವ ಸೈನಿಕನೋ


ಬಾಯ್ ರುಚಿ ಎ೦ದಿಗೂ ಬಯಸಲೇ ಇಲ್ಲ
ಮಿ೦ಚುವ ಬಟ್ಟೆಯ ಕಡೆ ಮನವಿಲ್ಲ
ಬ೦ಗಲೆ ಮನೆಯನು ಆಶಿಸಲಿಲ್ಲ
ದೇಶವೆ ತನ್ನುಸಿರೆನ್ನುವನಲ್ಲ
ಸೈನಿಕನೋ ಅವ ಸೈನಿಕನೋ


ಏನನು ಬೇಡದೆ ಬದುಕುವ ಅವನು
ಕಣ್ಣಿಗೆ ಕಾಣುವ ಋಷಿ ಸದೃಶನೋ
ನಮಗಾಗಳಿದವಗೊ೦ದನೆ ಸಲ್ಲಿಸಿ


   ಈ ಕವನ ಅಪೂರ್ಣವಾಗಿದೆ

Rating
No votes yet

Comments