ರಂಗ ರಂಗಿಯ ಲವ್ ಸ್ಟೋರಿ

ರಂಗ ರಂಗಿಯ ಲವ್ ಸ್ಟೋರಿ

ಹೀರೋ ರಂಗ ಹಾಗೂ ಹೀರೋಯಿನ್ ರಂಗಿಯದೂ ಹಲವು ವರ್ಷಗಳ ಲವ್.  ಅದರಲ್ಲೂ ಚೆಡ್ಡಿ ರಂಗ ಅಂದರೆ ಸಾಕು, ಅದೇ ನಮ್ ರಂಗಿ ಪಿರುತಿ ಮಾತ್ತಾನಲ್ಲಾ ಅವನ್ ಕಣ್ಲಾ ಅನ್ನುವಷ್ಟರ ಮಟ್ಟಿಗೆ ಹಳ್ಳಿಯಲ್ಲಿ ರವಷ್ಟು ಪೇಮಸ್.  

ರಂಗ ಚಡ್ಡಿ ಬನೀನ್ ಆಕ್ಕೊಂಡು ಕೈಯಲ್ಲಿ ಬೀಡಿ ಇಟ್ಕೊಂಡು ರಸ್ತೇಲಿ ಒಂಟಾ ಅಂದರೆ ಪಕ್ದಾಗೆ ರಂಗಿ ಲಂಗ ದಾವಣಿ ಆಕ್ಕೊಂಡು ನುಲಿತಾ ಓಯ್ತಿದ್ಲು, ಇಬ್ಬರೂ ಒಟ್ಟೊಟ್ಟಿಗೆ ಪಾರ್ಕಿಗೆ, ಸಿನಿಮಾಕ್ಕೆ ಹೋಯ್ತಾರೆ. ಹಂಚಿಕೊಂಡು ಕಳ್ಳೆಕಾಯಿ,ಬಾಳೆಹಣ್ಣು ತಿನ್ತಾರೆ. ಇಷ್ಟೆ ಅಲ್ಲದೆ ಬೈಟೂ ಚಾನೂ ಕುಡಿತಾರೆ (ಕ್ಲೋಸ್ ಅಪ್ ಷಾಟ್). ಹೀಗೆ ಲವ್ ಮುಂದುವರೆದಿರಬೇಕಾದರೆ,
"ರಂಗ, ನಮ್ಮೂರಿನಲ್ಲಿ ನೀನು ರಂಗ ಪರರ ಊರಿನಲ್ಲಿ ಮಂಗ" ಆಗ್ ಬೇಡ್ಲಾ ಅಂತಾ ಅವನ ಸ್ನೇಹಿತರು ಆಗಾಗ ಏಳ್ತಾ ಇದ್ರು. ಬಿಡ್ರಲಾ,ಯಾಕ್ಲಾ, ನಾನು ನಿಜ ಜೀವನದಲ್ಲೂ ಹೀರೋ ಆಯ್ತೀನಿ ಅಂತಿದ್ದ.  ಅವನ ಬಹು ದಿನದ ಕನಸು ಈಡೇರುವ ಸಮಯ ಬಂದೇ ಬಿಡ್ತು.

ಪಕ್ಕದ ಊರಿನ ಸಂತೆಗೆಂದು ರಂಗ ಹೋದಾಗ,  ವಿಲನ್ ಹಾಗೂ ಅವನ ಗ್ಯಾಂಗ್ ಒಂದು ಹುಡುಗಿಯ ಜೊತೆ ಕೀಟಳೆ ಮಾಡುವುದನ್ನು ಕಂಡ  ಫುಲ್ ಗರಂ ಆಗಿ ಏಕಾಏಕಿ  ಯಾ....... ಡಿಶುಂ (ಹೊಟ್ಟೆಗೆ),ಡಿಶುಂ (ಬೆನ್ನಿಗೆ) ...ಮುಖಕ್ಕೆ  ಹೀಗೆ ಹೊಡೆದು, ಪುಲ್ ಆಕಸನ್, ಅವರಿಗೆಲ್ಲಾ ಚಚ್ಚಿ ಬಿಸಾಡಿದ. ಮತ್ತೆ ಅವಾಜ್ ಬೇರೆ. ಬರ್ರಲಾ ಎಷ್ಟು ಜನ ಇದೀರಿ. ಹಾ,ಹಾ ಪ್ರಭಾಕರ್ ಸ್ಟೈಲ್ನಾಗೆ.  ಊರಿಗೆ ಬಂದು ತನ್ನ ಪ್ರಿಯತಮೆ ರಂಗಿ ಹಾಗೂ ಅವನ ಸ್ನೇಹಿತರಿಗೆಲ್ಲಾ 70 ಎಂ.ಎಂ. ಸ್ಟೀರೀಯೋ ಫೋನಿಕ್ ಸೌಂಡ್ ಜೊತೆಗೆ ಒಡೆದಾಟದ ಸೀನ್ ಹೇಳಿದ್ದೇ ಹೇಳಿದ್ದು. ಅವತ್ತು ರಂಗನಿಗೆ ವಿಶೇಷ ಔತಣ ಕೂಟ, ರಾಜ ಮರ್ಯಾದೆ ಹಾಡಿನೊಂದಿಗೆ...
ಮೊದಲು ಸ್ನೇಹಿತರು..... ಬಾ ಬಾರೋ ರಣಧೀರ, ಹಾಗೇ ರಂಗಿ ಡೌಟ್ನಲ್ಲಿ - ಯಾರಿವನೂ ಈ ಮನ್ಮಥನೂ. ಹಾ,ಹಾ ರಂಗ ಬಾರೋ ನನ್ನ ಮುದ್ದು ರಂಗ ಬಾರೋ ಅಂತಾ, ಗಡದ್ದಾಗಿ ಹಳಸಿದ್ದು ಪಳಸಿದ್ದು ತಿಂದ ರಂಗ ಮನೆಗೆ ಹೋದರೆ, ಹೊಗ್ಗೊ ಅತ್ಲಾಗೆ ಮನೆಯಲ್ಲೂ ಹಾಡು ಅಮ್ಮನಿಂದ - ಯಾರು ತಿಳಿಯರು ನಿನ್ನ ಭುಜ ಬಲದ ಪರಾಕ್ರಮ ... ತಲೆಕೆಟ್ಟ ರಂಗ ಶುರುಹಚ್ಕಂಡ ನೋಡಿ - ಅಮ್ಮಾ ಊರೇನೇ ಅಂದರೂ. ಇಷ್ಟೆಲ್ಲಾ ಸೀನ್ ಮುಗಿಯುವ ಹೊತ್ತಿಗೆ ರಾತ್ರಿ 2ಗಂಟೆ. ತಿಂದಿದ್ದು ಮದ ಬೇರೆ ಇತ್ತಾ, ರಂಗ ಸುಮ್ನೆ ಜಗಲಿ ಮೇಲೆ ಪಾಚ್ಕೊಂಡ.  ಅಮ್ಮಾ ಸೊಳ್ಳೆ. ಮೂದೇವಿ ಅಂಗೆ ಬಿದ್ಗೊ ಬಾರ್ದಾ.


Interval

ಈಕಡೆ ವಿಲನ್ ಫುಲ್ ಮೆಂಟ್ಲಾಗಿದ್ದ. ಕಂಡ ಕಂಡವರ ಮೇಲೆಲ್ಲಾ ಹ.ಹ ಅಂತಿದ್ದ.  ಈ ತನಕ  ಯಾರು ಈ ರೇಂಜಿಗೆ ಹೊಡೆದಿಲ್ಲ. ಅದೂ ಒಬ್ಬ ಹಳ್ಳಿಯವನು (ಪ್ಯಾದೆ ನನ್ಮಗ) ಛೆ, ಹೊಡೆದಿದ್ದು ಯಾರೆಂದು ಪತ್ತೆ ಹಚ್ಚಿದ.  ಪಟಾಪಟಿ ಚಡ್ಡಿ ಆಧಾರದ ಮೇಲೆ. ರಂಗಾ ನೀನು,ನೀನು (ಎಕೋ) , ಜಡೇ ಮಾಯಿಸಂದ್ರದವನಾ. ಹಹಹಹಹಹಹಹಹ (ವಜ್ರಮುನಿ),  ಪಟಾ ಪಟಿ ಚಡ್ಡಿ ಹಾಕಿ ಬಿಟ್ಟರೆ ನೀನೇನೂ ದೊಡ್ಡ ಹೀರೋನಾ.ಕೂಗಾಡಿ,ಪರಚಾಡಿ.

ಒಂದು ದಿನ ರಾತ್ರಿ ಅವನ ಊರಿಗೆ  ಬಜಾಜ್ ಸ್ಕೂಟರ್ ತೆಕ್ಕೊಂಡು ಹೋಗಿ ರಂಗೀನಾ ಎತ್ತಾಕೊಂಡು ಹೋಗೇ ಬಿಟ್ಟ. ಇದನ್ನ ತಿಳಿದ ರಂಗ ಹೊಡೆದಾಟದ ದಿನ ಹಾಕಿದ್ದ (ಕೊಳೆತು ನಾರುತ್ತಿದ್ದರೂ) ಪಟಾಪಟಿ ಚಡ್ಡಿ ಹಾಕ್ಕೊಂಡು "ಅಮ್ಮಾ ನೀ ಆಸೀರ್ವಾದ ಮಾಡು", ಜಯಸೀಲನಾಗಿ ಬಾ. ರಂಗ ಸೈಕಲ್ ತೆಗೆದುಕೊಂಡು ನೋಡ ನೋಡುತ್ತಿದ್ದಂತೆ ಹೊಂಟೇ ಬಿಟ್ಟ. ಅವನ ಸ್ನೇಹಿತರೆಲ್ಲಾ ರಂಗ ಬೈಕ್ ತೆಕ್ಕೊಂಡು ಹೋಗ್ಲಾ, ಏಯ್ ಸ್ಕೂಟರ್ ಏನ್ ಫಾಸ್ಟಾಗಿ ಓಗಾಕ್ಕಿಲ್ಲ ಬಿಡ್ಲಾ ಅಂದವನೇ. ಓಡಿ ಹೋಗಿ ಸೈಕಲ್ನ  ಸೀಟ್ ಮೇಲೆ ಎಗರಿದ. ಹಾರಿದ ರಭಸಕ್ಕೆ ಸೀಟ್ ಕೆಳಗೆ ಬಿದ್ದು ಹೋಯ್ತು. ಚಡ್ಡಿ ಸೀಟ್ನ ಬಾರ್ಗೆ ಸಿಕ್ಕಾಕಿಕೊಂಡಿತು. ಅವನ ಪರಿಸ್ಥಿತಿ ನೋಡಿ ಅಮ್ಮನಿಗೆ ಕಂದಾ ನಿಧಾನ ಕಣ್ಲಾ. ಡ್ಯಾಮೇಜ್ ಮಾಡ್ಕ ಬೇಡ್ಲಾ ಅಂದ್ಲು. (ಮದರ್ ಸೆಂಟಿಮೆಂಟ್),

ಬಿಡ ಅಮ್ಮಾ.......ಆ...ಆ ಎಂದು ಸೈಕಲ್ ತುಳಿದ ತುಳಿದ, ವಿಲನ್ ಆಗಲೇ ಸ್ಕೂಟರ್ನಿಂದ ಕಾರ್ಗೆ ಷಿಫ್ಟ್ ಆಗಿದ್ದ. ರಂಗಿ ಕಾಪಾಡಿ ಕಾಪಾಡಿ. ರಂಗನ ಸೈಕಲ್ ಗಾಳಿ ಅದಾಗಲೇ ಹೋಗಿತ್ತು. ಸೈಕಲ್ನ ಅಲ್ಲೇ ಬಿಸಾಕಿದ. ಅದಾಗಲೇ ರಾತ್ರಿ 3ರ ಸಮಯ, ರಸ್ತೆಯಲ್ಲಿ ಯಾರೂ ಇಲ್ಲ. ನಿರ್ಬಿಡ ಪ್ರದೇಶ, ಸುತ್ತಲೂ ಕಾಡು, ಭಯ.  ಒಂದು ಕಾರು ಬಂತು ಲಿಫ್ಟ್ ಪ್ಲೀಸ್ ಅಂತಾ ಧಡಾರನೆ ಕಾರಲ್ಲಿ ಕೂತ. ಏ ನಿಧಾನಕ್ಕಲೆ.  ಎರಡು ಕಿ.ಮೀ ದೂರ  ಹೋಗುತ್ತಿದಂತೆ ಕಾರು ನಿಂತಿತು. ರಂಗ ಅಯ್ಯೊ ಬೇಗ ಹೋಗಿ ಅಂದ. ಅದಕ್ಕೆ ಡ್ರೈವರ್ ನಾವು ಇಲ್ಲೇ ಪಕ್ಕದ ಹಳ್ಳಿಗೆ ಓಯ್ತಾ ಇದೀವಿ ಇಳ್ಕಲೇ .

ಮತ್ತೆ ನನ್ನ ರಂಗಿ,  ರಂಗ ಮತ್ತೆ ಬೇಜಾರಿನಿಂದ ಧಮ್ ಒಡಿತಾ ರಸ್ತೆಯ ಬದಿಯ ಕಿ.ಮೀ ಕಲ್ಲಿನ ಮೇಲೆ ತಲೆ ಮೇಲೆ ಟವಲ್ ಹಾಕ್ಕೊಂಡು ಮತ್ತೊಂದು ಕಾರ್ ಬತ್ತದಾ ಅಂತಾ ಕಾಯ್ತಾ ಕುಳಿತ. ಹಾಗೇ ನಿದ್ದೆ. ಕಣ್ಣು ಬಿಟ್ಟು ನೋಡ್ತಾನೆ  ಮನೆ ಮುಂದೆ ರಂಗಿ ರಂಗೋಲಿ ಹಾಕ್ತಾವ್ಳೆ. ಅಂಗೇ ಒಂದು ಕ್ಲೋಸಪ್ ನಲ್ಲಿ ಸ್ಮೈಲ್. (ಹಲ್ಲು ಉಬ್ಬು ಇರುವುದರಿಂದ ಅದನ್ನ ಸ್ಮೈಲ್ ಅಂತಾನೆ ಭಾವಿಸಬೇಕು)

ಏನ್ಲಾ ಇದು  ಕನಸಾ ಅನ್ಕಂತ್ತಿದ್ದಾಗೆನೇ, ಮೂದೇವಿ ಬೇಗ್ ಏಳ್ಲಾ, ಆ ಕಡೆಯಿಂದ ಎಲ್ಲೋ ಕೇಳಿದ ವಾಯ್ಸ್. ಅಮ್ಮೋ ಚಾ ಕೊಡಮ್ಮಾ. ಬಡ್ಡೆಹೈದ್ನೇ ಹಲ್ ಉಜ್ಕೊಂಡು ಬಾರ್ಲಾ. (ಪಂಚ್ ಡೈಲಾಗ್ ಮನದಲ್ಲೇ) ಅಯ್ಯೋ, ಬಡ್ಡೆ ಹೈಕ್ಲು,  ನಮ್ಮ ರಂಗಿನಾ ಎತ್ತಾಕಂಡ್ ಹೋಗ್ಬಿಟ್ಟಿದ್ರೂ ಅನ್ಕಂಡನಲ್ಲಪ್ಪಾ. ಅಲ್ಲಾ ರಂಗೀ ಇರೋ ಕಲರ್ಗೆ, ಎಂಗಪ್ಪಾ ರಾತ್ರಿ ಕಂಡ್ಳು ಅನ್ನೋದು ನನ್ನ ತಲೆಗೆ ಬರಬರದಾ ಎಂದು ರಂಗ ತಲೆ,ಮೈ,ಹೊಟ್ಟೆ ಕೆರೆಯುತ್ತಾ ಕೊಟ್ಟಿಗೆಗೆ ಸಗಣಿ ಬಾಚಕ್ಕೆ ಹೋದ. (ನಿರ್ದೇಸಕ ದೂರದಾಗೆ. ಆಕಸನ್. ಯಾಕೆಂದರೆ ಸಗಣಿ ವಾಸನೆ,) ಇನ್ನು ಕ್ಲೈಮ್ಯಾಕ್ಸ್ ಸೀನ್ ಮಾತ್ರ ಬಾಕಿ.

Rating
No votes yet