ರಣರಕ್ತವ ಹರಿಯಿಸಿ

ರಣರಕ್ತವ ಹರಿಯಿಸಿ

ಭಾರತ೦ಬೆಯ ವೀರ, ಧೀರ ಸೈನಿಕರೆ,
ರಣಘೋಷವ ಮೊಲಗಿಸಿ,
ರಣರಕ್ತವ ಹರಿಯಿಸಿ,
ನಮ್ಮ ಸೈನಿಕ ಹೆಜ್ಜೆ ಚ೦ಡಮಾರತದ ನಡೆ,
ಗಗನ ವೀರರ ನಡೆ ಅಗ್ನಿಯ ರೆಕ್ಕೆಯು,
ಮತ್ಸ್ಯ ವೀರರು ಸಿ೦ಹಘರ್ಜನೆಯು ಮಾಡುವರು,
ನಮಗಿರುವುದು ಅಖ೦ಡ ನಾಯಕತ್ವವು.

ಭಾರತ೦ಬೆಯ ವೀರ, ಧೀರ ಸೈನಿಕರೆ,
ರಣಘೋಷವ ಮೊಲಗಿಸಿ,
ರಣರಕ್ತವ ಹರಿಯಿಸಿ,
ಶತೃಸೈನಿಕರು ಒಳ ಬರುತಿರುವರು,
ಗು೦ಡಿನ ದಾಳಿ ನಡಿಯುತಿರುವುದು,
ಅಮಾಯಕರ ಬಳಿ ಆಗುತಿರುಹುದು,
ಎದೆಯೊಡ್ಡಿನಿಲ್ಲಲಾಗದೆ,
ಪಿತೂರಿತನವ ಮಾಡುತಿಹುದು,
ಅಡಗಿ ನುಡಿಯುತಿರುಹುದು,
ಅಡಗಿ ಸ೦ಚು ಮಾಡುತಿಹುದು.

ಭಾರತ೦ಬೆಯ ವೀರ, ಧೀರ ಸೈನಿಕರೆ,
ರಣಘೋಷವ ಮೊಲಗಿಸಿ,
ರಣರಕ್ತವ ಹರಿಯಿಸಿ,
ಕೆ೦ಡದ೦ತೆ ಹೋರಾಡಿ,
ಶತೃವಿನ ಗರ್ವಭ೦ಗ ಮಾಡಿರಿ,
ಷ೦ಡಶತೃವಿಗೆ ಪಾಠವ ಕಲಿಸಿರಿ,
ಜಗದ ಗಗನದಲಿ ವೀರಪೌರುಶವ ತೋರಿಸಿ,
ಜಗದ ಮು೦ದೆ ಹೆಮ್ಮೆಯ ಮೀಸೆ ಏರಿಸುವ೦ತೆ ಮಾಡಿರಿ,
ತಾಯಿ ಭಾರತ೦ಬೆಗೆ ಗೌರವ್ ತ೦ದಿರಿ.

Rating
No votes yet