ರಸ್ತೆಗಳ ನಾಗರಿಕ ಉಪಯೋಗಗಳು
ಇದು ಬೆಂಗಳೂರಿಗರಿಗೆ ಹೆಚ್ಚು ಅನ್ವಯಿಸುತ್ತಾದರೂ ಅನ್ಯರೇನೂ ಹೊರತಲ್ಲ.
ರಸ್ತೆಗಳ ಉಪಯೋಗವೇನು ಎಂದಾಕ್ಷಣ ಹೊಳೆಯುವುದು ಕೇಳುಗನಿಗೆ ತಲೆಕೆಟ್ಟಿರಬಹುದು ಎಂಬ ಅನುಮಾನ, ಇರಲಿಬಿಡಿ ನಾನು ಮಾಡಿರುವ ಪಟ್ಟಿ ಓದಿದ ಮೇಲೆ ನಿಮ್ಮ ಅಭಿಪ್ರಾಯ ಬದಲಿಸಿ ಕೊಳ್ಳಲಿದ್ದೀರಿ ಎಂಬ ಖಾತ್ರಿ ನನಗಿದೆ.
ಮೊಟ್ಟಮೊದಲನೆಯ ಉಪಯೋಗ: ಪೀಕುದಾನಿ, ಅರ್ಥ ಆಗಲಿಲ್ವ? ಉಗುಳುವ ಪಾತ್ರೆ. ನಡೆಯುವವರು ವಾಹನ ಚಾಲಕರು ಬಸ್ ಕಾರ್ ಎಲ್ಲ ರೀತಿಯ ವಾಹನ ಪ್ರಯಾಣಿಕರಿಗೂ ಇದನ್ನು ಪೀಕುದಾನಿಯನ್ನಾಗಿ ಉಪಯೋಗಿಸುವುದು ಅತ್ಯಂತ ಪ್ರೀತಿಯ ಹವ್ಯಾಸ. ಕೆಲವರಂತೂ ನಡೆದು ಹೋಗುತ್ತಿದ್ದರೆ ಅವರ ಮುಂದೆಯೆ ಉಗಿದುಕೊಂಡು ಅದರ ಮೇಲೆಯೇ ನಡೆದುಕೊಂಡು ಹೋಗುವ ಮಡಿವಂತರು :(
ಎರಡನೆಯದು: ಕಸದತೊಟ್ಟಿ, ಮನೆಯ ಕಸವನ್ನೆಲ್ಲ ಮುಂಚೆ ಪಕ್ಕದ ಮನೆಗೆ ಎಸೆಯುತ್ತಿದವರಿಗೆ ಪಕ್ಕದ ಮನೆಯವರು ಎಚ್ಚೆತ್ತುಕೊಂಡಿರುವುದು ದುಃಖದಾಯಕ ವಿಷಯ. ಆದ್ದರಿಂದಲೇ ರಸ್ತೆಗೆಸುದುಬಿಟ್ಟರೆ ಯಾರೂ ಕೇಳುವವರಿಲ್ಲ. ನನ್ನ ಒಂದು ಅನುಭವ ಹೀಗಿದೆ. ವಿಕ್ಕಿಯೊಡನೆ ವಾಕಿಂಗ್ ಮುಗಿಸಿ ಹಿಂದಿರುಗಿ ಬರುತ್ತಿದ್ದ ನಮಗೆ ಮನೆಯ ಎದುರಿಗೆ ಹೊಸದಾಗಿ ನಿರ್ಮಿಸಿರುವ ಬಹುಮಹಡಿ (ಬಾಡಿಗೆಗೆಂದು) ಕಟ್ಟಡದ ಮನೆಯೊಂದರಿಂದ ತೊಪಕ್ಕನೆ ಕಸದ ಚೀಲವೊಂದು ಮೇಲಿಂದ ನಮ್ಮ ಮುಂದೆ ಕಾಲಿನ ಬಳಿ ಬಿತ್ತು( ನಮ್ಮ ಅದೃಷ್ಠ ತಲೆಯ ಮೇಲೆ ಬೀಳಲಿಲ್ಲ. ನೆನಪಿರಲಿ ಹೆಚ್ಚು ಆದಾಯವಿರುವ ಕ್ಷೇತ್ರದಲ್ಲಿ ಕೆಲಸ ಮಾಡುವ ದಂಪತಿಗಳ ಕೆಲ್ಸ. ಇರ್ಲಿ ಬಿಡಿ ನಾಗರೀಕತೆಗೂ ವಿದ್ಯೆಗೂ ಸಂಭಂದವಿಲ್ಲ ಎಂಬುದು ಅನುಭವೇದ್ಯವಾದದ್ದು.
ಮೂರನೆಯದು: ವ್ಯಾಪಾರಿ ತಾಣ, ಬಹುಶಃ ಇದರ ಬಗ್ಗೆ ಹೆಚ್ಚು ವಿವರಣೆ ಅಗತ್ಯವಿಲ್ಲವೆನಿಸುತ್ತದೆ.
೪: ಮಕ್ಕಳ ಕ್ರೀಡಾಂಗಣ. ಪಡ್ಡೆ ಹುಡುಗರ ಮೋಜಿನ ತಾಣ
೫ ಕೊನೆಯದಾಗಿ ನನಗನಿಸಿದ್ದು, ನಾಯಿಗಳ ಯಮ ಸದನ.
ಇದೆಲ್ಲದರ ಜೊತೆಗೆ ಇಂದಿಗೂ ಯುದ್ದಭೂಮಿಗಿಂತ ಹೆಚ್ಚು ಸಾವು ನೋವು ಸಂಭವಿಸುತ್ತಿರುವುದು ರಸ್ತೆಗಳಲ್ಲೆ. ಅದನ್ನು ರಸ್ತೆಗಳಾಗಷ್ಟೆ ಉಪಯೋಗಿಸಿದ್ದಿದ್ದರೆ...........?
ಇನ್ನಿತರ ಉಪಯೋಗಗಳು ನಿಮ್ಮ ಗಮನಕ್ಕೂ ಬಂದಿರಬಹುದು. ಪಟ್ಟಿ ಮಾಡಿ ನೋಡುವ
Comments
ಉ: ರಸ್ತೆಗಳ ನಾಗರಿಕ ಉಪಯೋಗಗಳು
ಪ್ರಾಸ್ಕರವರೆ ರಸ್ತೆಗಳ ಉಪದಯೋಗದ
ಪ್ರಾಸ್ಕರವರೆ ರಸ್ತೆಗಳ ಉಪದಯೋಗದ ಕುರಿತು ಸಂಪದ ಓದುಗರ ಗಮನಕ್ಕೆ ತಂದಿರುವದಕ್ಕೆ ಧನ್ಯವಾದಗಳು. ನನಗೆ ತಿಳಿದ ಮಟ್ಟಿಗೆ ಕೆಲವು ಉಪಯೋಗಗಳೆಂದರೆ ನಮ್ಮ ಉತ್ತರ ಕರ್ನಾಟಕದಕಡೆಗೆ "ಒಕ್ಕರಣೆ ಮಾಡಲು ರಾಶಿ ಕಣ ರಬಸವಾಗಿ ವಾಹನ ಚಲಾಯಿಸುವ ದಾರಿಹೋಕರಿಗೆ ಮೈ ಮರೆತರೆ ಮರಣ" ಹಾಗೂ ಬೆಂಗಳೂರಿನ ಪ್ರಿಡಮ್ ಪಾರ್ಕನ ಪಕ್ಕದಲ್ಲಿನ ರಸ್ತೆಯಲ್ಲಿ ವಿವಿಧ ಸಂಘಟನೆಗಳಿಂದ ದರಣಿ ನಡೆಸುವವರಿಗೆ ದರಣಿ ನಡೆಸಲು ಸೂಕ್ತ ಸ್ಥಳ ಮತ್ತು ಕುಡುಕರಿಗೆ ನಸೆ ಜಾಸ್ತಿಯಾದಗ ಮಲಗಲು ಪವಿತ್ರ ಸ್ಥಳ ಹಾಗೆ ಇನ್ನೊಂದು ಪ್ರಮುಖ ವಿಷಯವೆಂದರೆ ನಮ್ಮಕಡೆ ಗ್ರಾಮೀಣ ಪ್ರದೇಶದ ಸುಸಜ್ಜಿತ ಬಯಲು ಶೌಚಾಲಯ, ಮತ್ತು ರಸ್ತೆಗಳನ್ನು ನಿರ್ಮಿಸಿದ ರಸ್ತೆಯನ್ನೆ ಪ್ರತಿ ವರ್ಷ ನಿರ್ಮಿಸುವದು,ದುರಸ್ತಿ ಮಾಡಲು ಗುತ್ತಿಗೆಯ ಅಕ್ಷಯ ಪಾತ್ರೆ ಹಿಗೆ ಬೆಳೆಯುತ್ತದೆ ರಸ್ತೆಯ ನಾಗರಿಕ ಹಾಗೂ ಅನಾಗರಿಕ ಉಪಯೋಗಗಳು.......