ರಾಗಿಯ ಬನದಾಗ ಹಕ್ಕಿ ಕುಂತೈತೆ ...
ರಾಗಿಯ ಬನದಾಗ ಹಕ್ಕಿ ಕುಂತೈತೆ
ರಾಗದಿ ಒಂದು ಹಾಡು ಹಾಡೈತೆ !
ಮೂಗಿಗೂ ಕೂಡ ಆಸೆ ತಂದೈತೆ
ಮಗುವಿಗೆ ಚೋವಿಯ ಸವಿನಿದ್ರೆ ತಂದೈತೆ
ಮಾಗಿಯ ಚಳಿಯಲ್ಲೂ ಇಂಪು(ತಂಪು) ತಂದೈತೆ
ಮಂಗಗು ಒಂದು ಸಂಗೀತ ಕಲಿಸೈತೆ !!
ರಾಗಿಯ ಬನದಾಗ ಹಕ್ಕಿ ಕುಂತೈತೆ
ರಾಗದಿ ಒಂದು ಹಾಡು ಹಾಡೈತೆ !
ರಂಗಿನ ನಾಟ್ಯ ಮನದಲ್ಲಿ ಸುಳಿದೈತೆ
ಬೀಗರ ಮನೆಯ ಸವಿಯ ನೆನಸೈತೆ
ಮಗನ ಕಿರುನಗೆಯ ಮಮತೆಯ ಹರಿಸೈತೆ
ತಂಗಿಯ ಒಂದು ಸವಿನೆನಪು ತರಿಸೈತೆ !!
Rating