ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
"ನನ್ನ ಮಗ ಹೋಟೆಲ್ಗೆ ಹೋದ ತಕ್ಷಣ ನಂಗೆ ನೂಡಲ್ಸ್ ಬೇಕು ಫ್ರೈಡ್ ರೈಸ್ ಬೇಕು ಇಲ್ಲ ಗೋಬಿ ಮಂಚೂರೀನೆ ಕೇಳೋದು , ಮನೇಲೂ ಅಷ್ಟೇ ಬರೀ ಮಾಗಿ ಮಾಡಿಕೊಡು ಅಂತಾನೆ ಇಲ್ಲ ಅಂದ್ರೆ ಹೋಟೆಲ್ನಿಂದ ತರಿಸಿಕೊಡು ಅಂತಾನೆ" ಆಕೆ ಹೆಮ್ಮೆಯಿಂದ ಹೇಳುತ್ತಿದ್ದರು. ನಾನು ಸುಮ್ಮನೆ ಕೇಳುತ್ತಾ ಇದ್ದೆ. ಹೋಗಲಿ ಪಾಪ ಸಂತೋಷ ಆಗಲಿ ಅಂತ.
"ಅದಿರ್ಲಿ ನಿಮ್ಮಗಳು ಏನೂ ಕೇಳೋದಿಲ್ಲವಾ ? " ಕೊನೆಗೊಮ್ಮೆ ನನ್ನ ಪ್ರಶ್ನೆ ಮಾಡಿಯೇಬಿಟ್ಟರು
ಏನು ಹೇಳಲಿ
"ಹೌದು ಅವಳು ತುಂಬಾ ಹಠ ಮಾಡ್ತಾಳೆ" ಅಂದೆ
"ಏನು ಇಷ್ಟ ಅವಳಿಗೆ ?" ಅಂದರು
"ಅವಳಿಗೆ ರಾಗಿ ಮುದ್ದೆ ತುಂಬಾ ಇಷ್ಟ " ನಿಜವನ್ನೇ ಹೇಳಿದ್ದೆ ಅವಳು ಮುದ್ದೆ ಇಲ್ಲದಿದ್ದರೆ ರಾತ್ರಿ ಏನು ತಿನ್ನುವುದಿಲ್ಲ
" ಮುದ್ದೇನಾ ಅಯ್ಯೋ ನೀವ್ಯಾವ ಜಾತಿ "
ನಾನು ಹೇಳಿದೆ
" ಮೊದಲು ಈ ಹ್ಯಾಬಿಟ್ ಬಿಡಿಸಿ . ಒಳ್ಳೆ ಇತರೆಯವರ ಥರಾ ಅದೇನ್ರಿ " (ಇತರೆಯವರಂದರೆ ?)
"ಯಾಕೆ ಮುದ್ದೆ ತಿಂದರೆ ಏನಾಗುತ್ತೆ" ಅಂತ ಕೇಳಿದೆ ಮುಗ್ದಳಂತೆ
"ಮಕ್ಕಳು ಕಪ್ಪಗಾಗಿ ಬಿಡ್ತಾರಂತೆ"
"ನೀವು ಮುದ್ದೆ ತಿಂದಿದೀರಾ "ಅಂತ ಕೇಳಿದೆ ಆಕೆಯ ಮುಖವನ್ನೆ ನೋಡುತ್ತಾ
"ಇಲ್ಲಪ್ಪ ನಾನು ತಿಂದಿಲ್ಲ ಅದಕ್ಕೆ ----------" ಮುಂದೇನು ಹೇಳುತ್ತಿದ್ದರೋ ಅವರ ಬಣ್ಣ ನೆನಪಾಯಿತೇನೋ ಅಥವ ನನ್ನ ಪ್ರಶ್ನೆಯಲ್ಲಿದ್ದ ವ್ಯಂಗ್ಯ ತಿಳಿಯೇತೇನೋ
ಮುಂದೆ ಮಾತು ಮುಂದುವರಿಸದೆ ಹೊರಟೇ ಬಿಟ್ಟರು , ಹಾದಿಯಲ್ಲಿ ಸಿಕ್ಕು ಹಾದಿಯಲ್ಲೇ ಮಾಯವಾದರು.
ನಂಗೆ ಅರ್ಥವಾಗದ್ದು
ಯಾಕೆ ತಾಯಂದಿರಿಗೆ ಮಕ್ಕಳು ನಾರ್ಥ್ ಇಂಡಿಯನ್, ಚೈನೀಸ್ ಪ್ಫುಡ್ , ಪಿಜಾ ತಿಂದರೆ ಹೆಮ್ಮೆ ಅಂತ.
ನನ್ನ ಮಗಳಿಗೆ
ಪುಳಿಯೋಗರೆ, ಹೋಳಿಗೆ, ಮುದ್ದೆ, ಚಪಾತಿ ಅಂದ್ರೆ ಇಷ್ಟ
ಅದನ್ನ ಹೇಳ್ಕೊಳೋಕೆ ನಂಗೆ ಹೆಮ್ಮೆ ಯಾಕಂದ್ರೆ
ಇವೆಲ್ಲಾ ಆರೋಗ್ಯಕ್ಕೆ ಒಳ್ಳೆಯದು . ಜೊತೆಗೆ ನಮ್ಮ ಸೊಗಡಿನ ತಿಂಡಿಗಳು ಇವು
ಏನಂತೀರಾ
Comments
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
In reply to ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ by savithru
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
In reply to ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ by ಸಂಗನಗೌಡ
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
In reply to ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ by ಮನಹ್ಪಠಲ
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
In reply to ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ by ಮನಹ್ಪಠಲ
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
In reply to ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ by madhava_hs
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
In reply to ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ by ಗಣೇಶ
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
In reply to ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ by hamsanandi
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
ಉ: ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ