ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ

ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ

ನೂರು ಕೋಟಿದಾಟಿರುವ, ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಅಭಿವೃಧ್ದಿ ಪಥದಲ್ಲಿ ಸಾಗುತ್ತಿರುವ ಭಾರತದಂತಹ ದೇಶವನ್ನು ಆಳುತ್ತಿರುವ ನಮ್ಮ ರಾಜಕಾರಣಿಗಳಿಗೆ ಕನಿಷ್ಟ ವಿದ್ಯಾರ್ಹತೆಯೂ ಅಗತ್ಯವಿಲ್ಲವೆಂದಾದರೆ, ನಮಗೆ ನಾಚಿಕೆಯೆನಿಸುತ್ತದೆ. ಇಂದಿನ ಕಾಲದಲ್ಲಿ ಒಂದು ಜವಾನನ ಕೆಲಸಕ್ಕೂ ವಿದ್ಯಾರ್ಹತೆ ನಿಗದಿ ಪಡಿಸಿರುವಾಗ ಆಡಳಿತದ ಚಿಕ್ಕಾಣಿ ಹಿಡಿದಿರುವ ನಮ್ಮ ನಾಯಕರಿಗೆ ವಿದ್ಯೆಯ ಅಗತ್ಯ ಕಾಣುತ್ತಿಲ್ಲವೆ. ಇಂತಹ ಪರಿಸ್ಥಿತಿಯಿರುವಾಗಲೆ ಆಡಳಿತವು ಅಧಿಕಾರಿಗಳ ಕೈ ವಶವಾಗಿ , ಹತೋಟಿ ತಪ್ಪುತ್ತದೆ. ವಯಸ್ಸು ತೊಂಭತ್ತಾದರೂ ನಾನಿನ್ನೂ ಪ್ರಧಾನಿಯಾಗಬೇಕು, ರಾಷ್ಟ್ರಪತಿಯಾಗಬೇಕು ಎಂದು ಕನಸು ಕಾಣುತ್ತಾ ಕುಳಿತಿರುವವರು, ನಮ್ಮ ಯುವಕರಿಗೆ ಜಾಗ ಬಿಡಿವುದು ಯಾವಾಗ ? ಇಂದಿನ ಉದಾರೀಕರಣದ, ಜಾಗತೀಕರಣದ ಕಾಲದಲ್ಲಿ, ಅನುಭವದ ಜೊತೆಗೆ, ಸೃಜನಶೀಲತೆ, ಬುದ್ಧಿಶಕ್ತಿಯೂ ಇರುವ ಯುವಕರು ರಾಜಕಾರಣದಲ್ಲಿ ಸಕ್ರಿಯರಾಗುವ ಅಗತ್ಯ ತುಂಬಾ ಇದೆ. ಅಂತೆಯೇ, ಚುನಾವಣೆ ಹತ್ತಿರ ಬಂದಾಗ ಕಪ್ಪೆಗಳಂತೆ ಪಕ್ಷದಿಂದ ಪಕ್ಷಕ್ಕೆ ಹಾರುವ ಕೋತಿ ಬುದ್ದಿಯನ್ನೂ ನಿಯಂತ್ರಣಕ್ಕೆ ತರುವ ಕಾನೂನಿನ ಅಗತ್ಯವೂ ಕಾಣುತ್ತಿದೆ. ಇದೆಲ್ಲ ಆಗುವುದು ಯಾವಾಗ ?

Rating
No votes yet