ರಾಜಕೀಯ ಚಾಣಾಕ್ಷತನ

ರಾಜಕೀಯ ಚಾಣಾಕ್ಷತನ

ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ ಇದರ ಮೇಲೆ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಮತ್ತು ಅನಿಲದ ಬೆಲೆ ದುಬಾರಿಯಾಗಲಿದೆಯೆಂಬ ಮುನ್ಸೂಚನೆ ಕೂಡ ಬರುತ್ತಿದೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗುವುದು ಖಂಡಿತ. ಆದರೆ ನಾವು ಗಮನಿಸಬೇಕಾದ್ದು ಈ ಬೆಲೆ ಏರಿಕೆಯ ಬಿಸಿಯ ಬಿಸಿ ಸರ್ಕಾರಕ್ಕೆ ತಟ್ಟದಂತೆ ಮಾಡಿದ್ದು ಶಾರುಖ್ ಖಾನ್, ರಾಹುಲ್ ಗಾಂಢಿ ಮತ್ತು ರಾಜ್, ಉದ್ಭವ್ ಠಾಖ್ರೆಯ ನಡುವಣ ಸಮರ, ಇವರುಗಳ ನಡುವಿನ ವಾಕ್ಸಮರಕ್ಕೆ ಹೆಚ್ಚು ಒತ್ತು ಕೊಡುತ್ತಿರುವ ವಿದ್ಯುನ್ಮಾನ ಸುದ್ದಿವಾಹಿನಿಗಳು, ಮುದ್ರಣ ಮಾಧ್ಯಮಗಳು ಬೆಲೆ ಏರಿಕೆಯನ್ನು ಸಂಪೂರ್ಣವಾಗಿ ತಾವೂ ಮರೆತು ಜನರೂ ಮರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿರುವುದು ಜಾಣತನವಲ್ಲವೆ?
ಸಾಮಾನ್ಯ ವಸ್ತುಗಳ ಬೆಲೆ ಏರಿಕೆಯ ಲಾಭ ಅದನ್ನು ಬೆಳೆದವನಿಗೆ ನ್ಯಾಯವಾಗಿ ದೊರೆತಿದ್ದರೆ ಖಂಡಿತ ನಾವಿಲ್ಲಿ ಹೆಚ್ಚು ಆತಂಕಕ್ಕೊಳಗಾಗಬೇಕಿರಲಿಲ್ಲ. ಆದರೆ ಅದಾಗುತ್ತಿದೆಯೆ?
ಮಹಾನಗರಪಾಲಿಕೆಯ ಚುನಾವಣೆಯ ಮುಂದೂಡಿಕೆ, ಆಡಳಿತ ವೈಫಲ್ಯ, ರೈತರ ಮೇಲಿನ ದಾಳಿ ,ನೆರೆ ಪರಿಹಾರದಲ್ಲಿನ ವಿಫಲತೆಗಳನ್ನು ಮುಚ್ಚಿಕೊಳ್ಳಲು ಚರ್ಚ್ ದಾಳಿಯ ತನಿಖೆಯ ಮಧ್ಯಂತರ ವರದಿ ಬಹಿರಂಗಗೊಳಿಸುವಿಕೆಯಿಂದ ಜನರ ಗಮನ ಸೆಳೆದದ್ದು ಸರ್ಕಾರದ ಚಾಣಾಕ್ಷತನವೆನ್ನಬೇಕೊ? ನಾಚಿಕೆಗೇಡು ಎನ್ನಬೇಕೊ? 

Rating
No votes yet