ರಾಜಸ್ಥಾನವೆಂಬ ಸ್ವರ್ಗದ ತುಣುಕು --ಪುಟ-3 ('ಶಿಲ್ಪಗ್ರಾಮ' ವೆಂಬ ಗ್ರಾಮಭಾರತದಾತ್ಮ) - ಲಕ್ಷ್ಮೀಕಾಂತ ಇಟ್ನಾಳ

ರಾಜಸ್ಥಾನವೆಂಬ ಸ್ವರ್ಗದ ತುಣುಕು --ಪುಟ-3 ('ಶಿಲ್ಪಗ್ರಾಮ' ವೆಂಬ ಗ್ರಾಮಭಾರತದಾತ್ಮ) - ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ರಾಜಸ್ಥಾನವೆಂಬ ಸ್ವರ್ಗದ ತುಣುಕು -3
('ಶಿಲ್ಪಗ್ರಾಮ' ವೆಂಬ ಗ್ರಾಮಭಾರತದಾತ್ಮ)       

   ನಮ್ಮ ಬದುಕಿನ ಭಾಗವೇ ಆಗಿಹೋಗಿದ್ದ ಆ  ಹಂತಿ ಪದ, ಚೌಡಕಿ ಪದಗಳು,... ಭಜನೆಗಳು..ಸೋಬಾನೆ ಪದಗಳು, ನಮ್ಮ ಯಕ್ಷಗಾನಗಳು,, ಬಯಲಾಟಗಳು, ಮೂಡಲಪಾಯಗಳು,,ನಾಟಕಗಳು, ಗೀಗಿ ಪದಗಳು... ಕೀಳಿಕೇತರ ತೊಗಲು ಗೊಂಬೆಯಾಟಗಳು, ..ನಾಡಿನ ಎಲ್ಲ ತರಹದ ಹಾಡುಗಳು ಕುಣಿತಗಳು,ತಾಳ, ನೃತ್ಯ ಪ್ರಕಾರಗಳು,  ಎಲ್ಲಾ ಎಲ್ಲಿ ಕಳೆದು ಹೋದವು,,,ಕೆಲವು ಅಲ್ಲಲ್ಲಿ ಉಸಿರು ಹಿಡಿದಿದ್ದರೂ,, ಮೊದಲಿನ ವಾತಾವರಣ ಇದೆಯೇ? ಆ ಗಮ್ಮತ್ತು ಇದೆಯೇ? ಇನ್ನೂ ಹೆಚ್ಚು ಹೆಚ್ಚು ಶ್ರೀಮಂತವಾಗಬೇಕಾದ ಸಂಗತಿಗಳೇ ಅಸಂಗತವಾದರೆ?
        ನಮ್ಮ ಈಗಿನ ಪೀಳಿಗೆಗಳು  ನಾಡಿನ ಈ ನೆಲದ ಕಲೆಗಳಿಂದ ವಂಚಿತರಾಗಿ, ಮೊಬೈಲ್ ಎಂಬ ಪುಟ್ಟ ಪೆಟ್ಟಿಗೆಯ ಪರದೆಯೇ ಅವರ ಅಂಗಳವಾಗಿ ಬಿಟ್ಟಿದೆ. ಯಾವುದೋ ಗೇಮ್ಸ್ ಆಡುತ್ತ, ಕಾಲ ಹರಣ ಮಾಡುವುದನ್ನು ಕಂಡಾಗ, ನಮ್ಮ ಬಾಲ್ಯದ ಆಟಪಾಟಗಳತ್ತ ಮನುಸ್ಸು ತಿರುಗುತ್ತದೆ, ನಾವಾಡುತ್ತಿದ್ದ ಎಲ್ಲಾ ಆಟಗಳು ಟೀಮ್ ಗೇಮ್ ಗಳೇ  ಆ ಗೋಲಿ,  ಲಗೋರಿ, ಚಿನ್ನಿದಾಂಡು, ಕಬಡ್ಡಿ ಆಟಗಳೆಲ್ಲ,, ಹೆಂಗಳೆಯರ ಶೀಗಿ ಹುಣ್ಣಿಮೆ, ಗೌರಿ ಹುಣ್ಣಿಮೆ  ಆಟೋಟಗಳು, ಪಂಚಮಿಯ ಉಂಡಿ, ಜೋಕಾಲಿ,  ಕಾರಹುಣ್ಣಿಮೆಯ ಗಾಳಿಪmಗಳ ಸಂಭ್ರಮ, ಎಲ್ಲಾ ಎಲ್ಲಿ ಹೋದವೇನೋ?, ನಮ್ಮ ರಜೆಗಳೆಲ್ಲವೂ ಅಂಗಳಗಳಲ್ಲೇ ಕಳೆದುಹೋಗುತ್ತಿದ್ದವು   ಈಗ ಏನಿದ್ದರೂ  ಗೋಡೆಗಳೊಳಗೆ ಮಕ್ಕಳ ಆಟೋಟಗಳು. ಅವರು  ನಿಜ ಅಂಗಳಕ್ಕೆ ಬರುವಂತೆಯೇ ಇಲ್ಲ.
  ಈ ನಾಡಿನ ಮಕ್ಕಳ ಗಮನಕ್ಕೆ  ಬರಲಾರದ,  ಅವರು ಗ್ರಹಿಸಲಾರದ ಯಾªದೇ À ಕಲೆಗಳಿರಲಿ, ಅವೆಲ್ಲ  ಈ ಮಕ್ಕಳ ಕಣ್ಣು ಕಿವಿಗಳಿಗೆ ಬೀಳವಂತಾಗಬೇಕು. ಅವರೇ ಒಬ್ಬ ನೇಕಾರನ ಮನೆಯಲ್ಲಿ, ಬಟ್ಟೆ ನೇಯುವುದನ್ನು ನೋಡುವುದಷ್ಟೇ ಅಲ್ಲ.,, ಅವರೂ ಕೂಡ ನೇಯ್ದು ನೋಡುವುದಾದರೆ, ....ಒಬ್ಬ  ಕುಂಬಾರ ತನ್ನ ತಿಗರಿಯಿಂದ ಮಡಕೆಯನ್ನು ಹೇಗೆ ಮಾಡುತ್ತಾನೆ,,ನೋಡುವುದಷ್ಟೇ ಅಲ್ಲ,  ಆ ಮಗುವಿನ ಕೈಯಲ್ಲಿ  ಒಂದು ಪುಟ್ಟ ಮಡಕೆಯನ್ನು ಮಾಡಿಸಿದರೆ ಅವನ ಎದೆಯಾಳದಲ್ಲಿ ಈ ನೆಲದ ಸಿಗ್ನೇಚರ್ ಬೀಳದೇ! ...ಬಿದಿರಿನಿಂದ ಬುಟ್ಟಿ ಮುಂತಾದ ಅನೇಕ ಕರಕುಶಲ, ಗ್ರಾಮೀಣ ಗೃಹೋಪಯೋಗಿ ಸಾಮಗ್ರಿ, ಸಾಮಾನುಗಳ ತಯಾರಿಕೆಯ ಕಲೆಯ ಪರಿಚಯವಷ್ಟೆ ಅಲ್ಲ, ಇದು ನನ್ನದು ಎಂಬ ಭಾವದ ಬೀಜ ಅವನ ಎದೆಯಲ್ಲಿ ಅರಳಬೇಕಲ್ಲವೇ. ಅದಕಷ್ಟು ನೀರು ಗೊಬ್ಬರ ಹಾಕಿದರೆ ಅದು ಚಿಗುರದೇ?.....,ಗಿಡದಲ್ಲಿ ಗಡಿಗೆಗಳು ಹುಟ್ಟುತ್ತವೆ ಎಂದರೂ ನಂಬುವ ಮಟ್ಟಕ್ಕೆ ನಮ್ಮ ಮಕ್ಕಳನ್ನು ಕತ್ತಲೆಯಲ್ಲಿ ಇಟ್ಟು ಬೆಳೆಸುತ್ತಿದ್ದೇವೆ..., ಕಂಬಾರ, ಕುಂಬಾರ, ಬಡಿಗ, ಕರಕುಶಲಿ, ನೇಕಾರ, ಆದಿವಾಸಿ, ಗಿರಿಜನ, ಲಂಬಾಣಿ, ಕುರುಬ.,,ರೈತ,, ಕರಾವಳಿಯ ಮೀನುಗಾರರು,....ಅಂಬಿಗರು. ಅವರ ಜೀವನ ಸಾಂಪ್ರದಾಯಿಕ ಪದ್ಧತಿಗಳು,.. . ಹೆಣ್ಣುಮಕ್ಕಳ ಹಾಡುಗಳು, ಪಂಚಮಿ ಹಾಡುಗಳು, ಜನಪದ , ಸುಗಮ ಸಂಗೀತಗಳು, ಶಾಸ್ತ್ರೀಯ ಸಂಗೀತಗಳು, ...ವಿವಿಧ ಉಪಕರಣಗಳು ಅವುಗಳನ್ನು  ನುಡಿಸುವ ಬಗೆ,,.. ಎಲ್ಲ ಜನಪದೀಯರ ಜೀವನ ರೀತಿ.,, ಅವರ ಹಾಡುಗಳು,  ನಡೆನುಡಿಗಳು, ಸತ್ ಸಂಪ್ರದಾಯಗಳ ಪರಿಚಯ ಮಾಡಿಸಿದರೆ?
     ಹೀಗೆ ಜನಪದೀಯ ಸಮೃದ್ಧಿಯ ಗ್ರಾಮೀಣ ಸೊಗಡನ್ನೇ ಮೈಹೊದ್ದ ಈ ಗ್ರಾಮ ಭಾರತದ ಆತ್ಮವು ಇಷ್ಟು ಸಲೀಸಾಗಿ ವಿನಾಶವಾಗಬಾರದು  ಅಲ್ಲವೇ.? ..ಅಷ್ಟೊಂದು ಸತ್ವಯುತ ಈ ಮಣ್ಣಿನಲ್ಲಿ ಹುಟ್ಟಿದ ಈ ಅಪೂರ್ವ  ಕಲೆಗಳು ನಶಿಸಿದರೆ, ಇತಿಹಾಸಗಳ, ಸಂಸ್ಕøತಿಯ ಬೇರುಗಳೇ ಕಳಚಿದಂತೆ.  ಇದನ್ನೆಲ್ಲ ಮುಂದಿನ ಪೀಳಿಗೆಗೆ ಒಯ್ಯುವ ಸವಾಲುಗಳು ಕೂಡ ನಮ್ಮ  ಮೇಲಿದೆ, ಅದು ನಮ್ಮ ಕರ್ತವ್ಯ ಕೂಡ ...ಇವೆಲ್ಲ ಮತ್ತೆ ನಮ್ಮ  ಪೀಳಿಗೆಯ ಮುಂದೆ ಮತ್ತೊಮ್ಮೆ ಸಾಕ್ಷಾತ್ಕರಿಸಲ್ಪಟ್ಟರೇ.....ಮತ್ತೊಮ್ಮೆ ಅಮೀನ್ ಸಯಾನಿಯ  'ಬಿನಾಕಾ ಗೀತ ಮಾಲಾ' ಮೊಳಗಲು ಸಾಧ್ಯವಾದರೆ?...ಹೌದು, ಇದು ಸಾಧ್ಯವೇ? ಕೆಲವು ಹಿರಿಯ ತಲೆಮಾರಿಗೆ ಕಳೆದು ಹೋದ ಬಾಲ್ಯಗಳನ್ನು ಮರಳಿಸಬಹುದಾದ ಸಂಸ್ಕøತಿಯ ಬೇರುಗಳು ಈ ಕಲೆಗಳು, ಜಗಜಿತ್‍ರ ಗeಲ್ ಒಂದರಲ್ಲಿ ಬರುವ ಸಾಲುಗಳಂತೆ, ' ನ ದುನಿಯಾ ಕಾ ಗಮ್ ಥಾ ನ ರಿಸ್ತೋಂ ಕಾ ಬಂಧನ್, ಬಡೀ ಖೂಬಸೂರತ್ ಥಿ ವೊ ಜಿಂದಗಾನಿ'' (ಬಾಲ್ಯದ ದಿನಗಳ, ಜಗದ ಪರಿವೆ ಇಲ್ಲದ, ಜಾತಿಗಳ ಹಂಗಿಲ್ಲದ, ಮಧುರಾತಿ ಮಧುರ  ಬಾಲ್ಯದ ದಿನಗಳವು''.) ಯಲ್ಲಿ ಹೇಳಿದಂತೆ ಭ್ರಷ್ಟವಾಗದ ಬದುಕಿನ ಮೂಲ ತತ್ವಗಳ ಕೊಂಡಿಗಳು ಈ ಕಲೆಗಳು, ಆಟಪಾಟಗಳು....
...ಅಂದಹಾಗೆ ಇದನ್ನು ಬರೆಯುತ್ತಿರುವ ಈ ದಿನ ಚನ್ನೈನಿಂದ ಆಗಮಿಸಿದ ಬಿಸಿನೆಸ್‍ಮನ್‍ರೊಬ್ಬರು  ಕಾಳಿ ನದಿಯನ್ನು ನೋಡಿ, ಹೀಗೆ ಹರಿಯುತ್ತಿರುವ ನದಿಯೊಂದನ್ನು ನಾನು ಈ ಮೂವತ್ತು ವರ್ಷಗಳಲ್ಲಿಯೇ ಪ್ರಥವiವಾಗಿ ನೋಡಿದೆ.  ಮೊದಲು ನನ್ನ ಮಕ್ಕಳನ್ನು ಕರೆತಂದು ಇದನ್ನು ಅವರಿಗೆ ತೋರಿಸಬೇಕು ಎನ್ನುತ್ತಿದ್ದರು, ಬಂದ ಬಿಸಿನೆಸ್ ಮರೆತು, ಅಷ್ಟೊಂದು ಭಾವುಕರಾಗಿದ್ದರು, ಹರಿಯುವ ನದಿಯನ್ನು ನೋಡಿ,  ಬಾಲ್ಯದಲ್ಲಿ ಕಳೆದುಕೊಂಡ  ಆ  ಗ್ರಾಮಭಾರತದ ಆತ್ಮವೊಂದು ಮತ್ತೆ  ಸಿಕ್ಕಹಾಗಿತ್ತು  ಅವರಿಗೆ.. ತನಗೆ ತನ್ನ ಅಪ್ಪ ಕೈಬೆರಳು ಹಿಡಿದು ತೋರಿದ ಆ ಜಾತ್ರೆಗಳು, ಮೇಳಗಳು, ಸಂತೆಗಳ ಆ ಮಧುರ ಕ್ಷಣಗಳನ್ನು  ತನ್ನ ಮಕ್ಕಳಿಗೆ ಆ  ಹೃದಯ ಸಂಪತ್ತನ್ನು ಧಾರೆಯೆರೆಯುವಾಸೆ ಯಂತೆ ಕಂಡಿತು ನನಗೆ, ಹಾಗೆ ಅವರು ಹೇಳುತ್ತಿರುವಾಗ. 'ಬೀತೀ ಹುಯೀ ಯಾದೇಂ' ಯಂತೆ,..ಕಳೆದು ಹೋದ  ಆ ದಿನಗಳಿಗಾಗಿ ಮನಸ್ಸು  ಯಾವತ್ತೂ ಹಪ ಹಪಿಸುತ್ತಿರುತ್ತದೆ ಎಂಬುದನ್ನು ಸಾಬೀತು ಪಡಿಸಿದ್ದರವರು.

    ಸಹೃದಯರೆ, ಹೀಗೆಯೇ    ಒಮ್ಮೆ   ರಾಜಸ್ಥಾನಕ್ಕೆ ಬನ್ನಿ, .. ಉದಯಪುರದಲ್ಲಿ ಆಶ್ಷರ್ಯವೆಂಬಷ್ಟು ರೀತಿಯಲ್ಲಿ  ಸ್ಥಾಪಿತವಾದ, 'ಶಿಲ್ಪಗ್ರಾಮ' ವೊಂದನ್ನು  ನೋಡುವ ಅವಕಾಶ ಮಾಡಿಕೊಳ್ಳಿ. .  ಇಡೀ ರಾಜಸ್ಥಾನವನ್ನು ಒಂದೇ ಆವರಣದಲ್ಲಿ, ಅಲ್ಲಿಯ ಎಲ್ಲಾ ಜನಪದದ ಜೀವನ.,, ಅವರ ಗ್ರಾಮೀಣ ಗುಡಿ  ಕೈಗಾರಿಕೆಗಳು,, ಅವರ ಹಾಡುಗಳು, ಅವರ ಸಂಪ್ರದಾಯಗಳು,.. ಅವರದೇ ಮನೆಗಳನ್ನು ಯಥಾವತ್ತಾಗಿ ನಿರ್ಮಿಸಿದ್ದಾರೆ.. ಅವರ ಎಲ್ಲ ಚರಿತ್ರೆ , ಪರಿಚಯಗಳನ್ನೆಲ್ಲ ಬರೆದು ಫಲಕಗಳಲ್ಲಿ ಹಾಕಿದ್ದಾರೆ,.. ಅವರ ಮನೆಗಳಲ್ಲಿ ತಮ್ಮ ತಮ್ಮ ಮನೆಯ  ಮೂಲೋದ್ಯೋಗವನ್ನು ಮಾಡುತ್ತ, ತಮ್ಮ ಉತ್ಪನ್ನಗಳನ್ನು ಮಾರಲು ಕೂಡ ಅನುಕೂಲ ಮಾಡಿಕೊಟ್ಟಿದ್ದಾರೆ.. ಒಂದು ಗೊಂಬೆಯಾಟವನ್ನು  ನೋಡುತ್ತ, .. ಅವನ ಕಲೆಯನ್ನು ಪ್ರೋತ್ಸಾಹಿಸಲು ಅವನಿಂದ ಸೂತ್ರದ ಗೊಂಬೆ ಖರೀದಿಸಬಹುದು,.. ರಾಧೆ ಶ್ಯಾಮನ ಅನುಯಾಯಿಗಳು, ಅವರ ಕುಣಿತಗಳು,.. ಕಾಲ್ ಬೇಲಿಯನ್‍ಜನಜೀವನ ಶೈಲಿ, ಅವರ  ನೃತ್ಯಗಳು..¯ಂಗದಾ, . ವiಂಗಾನೇರಿಯನ್,  ರಾಜಸ್ಥಾನದ ಜೈಸಲ್ಮೇರ್, ಬಾರ್‍ಮೇರ್‍ನ ಅಪ್ಪಟ ಸಂಗೀತವನ್ನೇ ಕಸುಬನ್ನಾಗಿ ರೂಪಿಸಿಕೊಂಡಿರುವ  ಆ ನೆಲದ ಸೂಫಿ ಹಾಡುಗಾರರು.. ಅವರ ವಾಸದೊಂದಿಗೆ ಅವರು ನುಡಿಸುವ ವಿಶೇಷ ಸಂಗೀತ ಸಲಕರಣೆಗಳನ್ನು ನುಡಿಸುತ್ತ, ಅವರೊಂದಿಗೆ ಕುಣಿದು ಕುಪ್ಪಳಿಸುವ ಅವಕಾಶ.. ಜನಪದದ    ಮ್ಯೂಜಿಯಂ.,,, ಬಿಲ್ಲುಗಾರರು., ಒಂಟೆ  ಮಾವುತರು , ಮೀನುಗಾರರು, ಗಿರಿಜನರು, ನೋಮಾಡಿಕ್ ಲಂಬಾಣಿ ಮನೆಗಳು, ಅವರ ಒಡನಾಟಗಳು ...ಒಂದಿಡೀ ರಾಜಸ್ಥಾನವನ್ನು  ಎಪ್ಪತ್ತು ಎಕರೆಯಲ್ಲಿ  ಪುನರ್‍ಸ್ಥಾಪಿಸಿದ್ದಾರೆ. ಅತ್ಯಂತ ಶ್ಲಾಘನೀಯ ಕಾರ್ಯ..  ಆ ಶಿಲ್ಪಗ್ರಾಮದಿಂದ ಆಯ್ಕೆಯಾದ ಒಂದು ತಂಡ ಸುಮಾರು ಹದಿನೈದು ದಿನಗಳ ವರೆಗೆ ತಮ್ಮದೇ ಮನೆಯಂತೆ ಅಲ್ಲಿದ್ದು, ತಮ್ಮ ಕಲೆ ಪ್ರದರ್ಶಿಸುತ್ತ, . ತಮ್ಮ ವಸ್ತುಗಳನ್ನು ಮಾರಲು ಅವಕಾಶವಿದೆ.'ಹಾಥ್' ಎಂಬ ಸಣ್ಣ ಬಜಾರವೂ ಇದೆ ಅಲ್ಲಿ.  ಒಂದು ಅಪರೂಪದ  'ಢಾಣಿ '( ಹಳ್ಳಿ)ಯನ್ನೇ ತದ್ರೂಪು  ರೂಪಿಸಿದ್ದಾರೆ.
        ರಾಜಸ್ಥಾನವಲ್ಲದೇ ಪಶ್ಚಿಮ ಭಾರತದ ಐದು ರಾಜ್ಯಗಳ ಗ್ರಾಮೀಣ ಪರಿಸರದ ಮನೆಗಳನ್ನು ಇಲ್ಲಿ ಯಥಾವತ್ತಾಗಿ ನಿರ್ಮಿಸಿದ್ದಾರೆ. ರಾಜಸ್ಥಾನದ ಮಾರವಾರ  ನೇಕಾರರ ಮನೆಗಳು,  ಜೈಸಲ್ಮೇರ್ ಬಾರಮೇರ್ ಮರುಭೂಮಿಗಳ  ಗುಡಿಸಲಿನಂತಹ ಮನೆಗಳು,  ಮೇವಾರದ ಕುಂಬಾರನ ಮನೆ, ದಕ್ಷಿಣ ರಾಜಸ್ಥಾನದ ಭಿಲ್ಲ, ಹಾಗೂ ಸೆಹರಿಯನ್ ಗಿರಿಜನರ  ರೈತಾಪಿ ಮನೆಗಳು, ಗುಡಿಸಲುಗಳನ್ನು ಇಲ್ಲಿ ನಿರ್ಮಿಸಲಾಗಿದೆ.
      ಗುಜರಾತಿನ ಬನಿ ಭಾಗದ ರೇಬಾರಿ, ಹರಿಜನ, ಮುಸ್ಲಿಮ್,  ನೇಕಾರರ, ಕರಕುಶಲಗಾರ, ಆಟಿಕೆ ತಯಾರಕರ  ಮಣ್ಣಿನ  ಮನೆಗಳನ್ನು,  ಹಾಗೂ ಕಛ್ಛನ ಭುಜೋಡಿಯ  ಮರುಭೂಮಿಯ ಗುಡಿಸಲುಗಳು,  ಲಾಮಡಿಯಾ ಗ್ರಾಮದ ಕುಂಬಾರರ ಮನೆಗಳು ಇಲ್ಲಿ ಇವೆ.ಗುಜರಾತಿನ ಛೋಟಾ ಉದಯಪುರದ ನೇಕಾರನ  ಮನೆ  ಅವನ ವಖಾರ ಎಲ್ಲಾ  ತದ್ರೂಪ ಹುಬಹು ಹಾಗೆಯೇ ಇವೆ. ಅಲ್ಲಿನ ಗಿರಿಜನರ ಮನೆಗಳೂ, ಅವರ ಕಸಬುಗಳು ನೋಡಲು ಸಿಗುತ್ತವೆ. ಮಹಾರಾಷ್ಟ್ರ , ಗೋವಾ ರಾಜ್ಯಗಳ ಮೀನುಗಾರರ ಗುಡಿಸಲುಗಳು, ರಾಯಘರ ಜಿಲ್ಲೆಯ ಕೋಳಿ ಜನಾಂಗದ ಗುಡಿಸಲುಗಳು . ದಮನ ದೀವ್ ಪ್ರಾಂತಗಳ ಸಾಂಪ್ರದಾಯಿಕ ಮನೆಗಳು, ಇಲ್ಲಿಯ ಮ'ನೆಗಳನ್ನು ಸ್ಥಳೀಯ ಕಲ್ಲು ಮಣ್ಣುಗಳಿಂದಲೇ  ನಿರ್ಮಿಸಿ,  ಹುಲ್ಲಿನ, ಬಿದಿರಿನ,  ಇಲ್ಲವೇ ತಾರಸಿಗಳಿಗೆ ಗಚ್ಚು ಬಳಸಿದ್ದಾರೆ, ರಸ್ತೆಗಳಿಗೆ ಮೆಟಲಿಂಗ್ ಮಾಡಿ ಬಿಟ್ಟು ಬಿಟ್ಟಿದ್ದಾರೆ. ಟಾರು ಹೊದಿಸದೇ ಹಾಗೆಯೇ ಬಿಟ್ಟಿದ್ದಾರೆ. ಆದಷ್ಟು ನೈಜತೆಯನ್ನೂ  ನೂರು ಪ್ರತಿಶತ ತರಲು ಪ್ರಯತ್ನಿಸಿದ್ದು  ಎದ್ದು ಕಾಣತ್ತದೆ....ಬಲು ಅನುಕರಣಿಯವಾದ   ಕೆಲಸವನ್ನು ಸದ್ದಿಲ್ಲದೇ ಮಾಡಿಬಿಟ್ಟಿದ್ದಾರೆ,...  ಕನಿಷ್ಠ ಐವತ್ತು ವರ್ಷ ಹಿಂದಿನ ಗ್ರಾಮ ಭಾರತವನ್ನೇ ಕಣ್ಮುಂದೆ ನೆಟ್ಟುಬಿಟ್ಟಿದ್ದಾರೆ. ನಿಜಕ್ಕೂ ಇದೊಂದು ಐತಿಹಾಸಿಕ ಸ್ವಾಗತಾರ್ಹ ಕ್ರಮ. ರಾಜಸ್ಥಾನ ಸರ್ಕಾರಕ್ಕೆ  ಅಭಿನಂದಿಸಲೇಬೇಕು.
    ಇವೆಲ್ಲ ಗುಡಿಸಲುಗಳು, ಮನೆಗಳು, ವಖಾರಗಳು,. ಹಿತ್ತಲುಗಳು. ಬಡಿಗÀ, ಕಂಬಾರ, ನೇಕಾರ, ಕುಂಬಾರ , ಕರಕುಶಲ, ಬಿದಿರು ಬುಟ್ಟಿ ಹೆಣೆಯುವ, ಗಿರಿಜನರ,  ಹೀಗೆ ಒಂದು ಜೀವಂತ ಗ್ರಾಮವೊಂದರಲ್ಲಿ ಎಲ್ಲಾ ಸಮದಾಯಗಳು ಹೇಗೆ ಅನ್ಯೋನ್ಯವಾಗಿ ಸಹಬಾಳುವೆಯನ್ನು ನಡೆಸುತ್ತಿದ್ದರೋ,  .ನಮ್ಮ ಗ್ರಾಮ ಭಾರತದ ಆತ್ಮವೊಂದು   ಹೇಗೆ ದಿನಿನಿತ್ಯ ಉಸಿರಾಡುತ್ತಿತ್ತೋ, ಅವೆಲ್ಲ ಅಲ್ಲಿ ಅದೇ ಜನರ ಜೀವಂತ ಪಾಲ್ಗೊಳ್ಳುವಿಕೆಯಿಂದ ಅದನ್ನೊಂದು  ಉಸಿರಾಡುವ  ಮ್ಯೂಜಿಯಂನ್ನಾಗಿಸಿದೆ.. ಇವೆಲ್ಲ ಸಂಸ್ಕøತಿ , ಜೀವನ ಪದ್ಧತಿ,  ಗಾಂಧೀಜಿ ಕಂಡ ಕನಸು,   ವಿನಾಶವಾಗಬಾರದಲ್ಲ, ಅದಕ್ಕೆ ರಾಜಸ್ಥಾನದ ಸರಕಾರವೊಂದು ಇದನ್ನು ಇಂದಿನ ಪೀಳಿಗೆಗೆ ಜೀವಂತ ಮನಗಾಣಿಸಲು, ಈ ಎಲ್ಲ  ವೃತ್ತಿಗಳ ಜನರನ್ನು ಪ್ರತಿ ಹದಿನೈದು ದಿನಗಳಿಗೊಮ್ಮೆ  ಒಂದು ತಂಡವನ್ನು  ಸರತಿಯಂತೆ ಆಹ್ಹಾನಿಸಿ ,  ಅವರದೇ ಮನೆಯಂತೆ, .ಅದೆ ಪರಿಸರದಲ್ಲಿ ಯೇ,  ಇರಲು ಬಿಟ್ಟು,  ತಾವೇ ತಯಾರಿಸಿದ ವಸ್ತುಗಳನ್ನು  ಅಲ್ಲಿಯೇ ತಯಾರಿಸಲು, ಹಾಗೂ ತಯಾರಿಸಿದ ಮಾಲನ್ನು ಮಾರಲು ಹಾಗೂ ಕಲಾಕಾರ ತಂಡಗಳಿಗೂ ಆಹ್ಹಾನಿಸಿ,  ತಮ್ಮ ಕಲೆಯ , ನೃತ್ಯಗಳ ದರ್ಶನ ಮಾಡಲು ಅನುವು ಮಾಡಿದ್ದು ಮೆಚ್ಚುಗೆಯಾಯಿತು., ಕುಂಬಾರನೊಬ್ಬ ಒಂದು ಮಗುವಿಗೆ ಗಡಿಗೆಯನ್ನು  ಮಾಡುವುದನ್ನು ತೋರಿಸುತ್ತಿದ್ದುದು. ಆ ಮಗು ಬಿಟ್ಟಗಣ್ಣು ಬಿಟ್ಟು ನೋಡುತ್ತಿದ್ದುದನ್ನು ಎಷ್ಟೋ ಹೊತ್ತು , ಆ ಮಗವೇ ನಾನಾಗಿ, ನೋಡುತ್ತ ನಿಂತುಬಿಟ್ಟಿದ್ದೆ.

   ..ಸುಮ್ಮನೆ ಒಂದು ಶಿಲ್ಪಗ್ರಾಮವಲ್ಲ ಅದು, ಒಂದು ದೇಶದ ಆತ್ಮದ ಒಳಪ್ರವೇಶವದು. ಅಂತಿಮವಾಗಿ ಈ ದೇಶ ಕಂಡುಕೊಳ್ಳಬೇಕಿರುವ, ಗುರುತಿಸಿಕೊಳ್ಳಬೇಕಾ ದ ಅಂತಿಮ ಸತ್ಯವದು.  ಈ ದೇಶದ, ಈ ನೆಲದ ನಾಡಿ ಮಿಡಿತವದು. .ಮಹಾತ್ಮಾಜಿಯ 'ಗಾಂಧಿ ಕುಟಿ' ಇದೇ ತತ್ವವನ್ನು  ಹೇಳುತ್ತದೆ ಅಲ್ಲವೇ.ಸುತ್ತ ಮುತ್ತಲಿನ ಐದು ಕಿಮೀಗಳಷ್ಟು ವ್ಯಾಪ್ತಿಯಲ್ಲಿ  ಸಿಗುವ ಸಾಮಗ್ರಿಗಳಿಂದಲೇ  ಗ್ರಾಮದ ಮನೆಗಳನ್ನು ಅದೇ ಊರಿನ ಕಲ್ಲು ಮಣ್ಣು ಗಚ್ಚು ಗಾರೆ ಬಳಸಿ ನಿರ್ಮಿಸಿ ಎನ್ನುತ್ತದಲ್ಲವೆ ''ಗಾಂಧಿ ಕುಟಿ''. .ಅದನ್ನೇ ಪಾಲಿಸಿದ್ದಾರೆ...ಇದರಿಂದ ಇದಕ್ಕೊಂದು ಯುನೀಕ್‍ನೆಸ್ ಬಂದಿದೆ. ನಾನೊಬ್ಬ ನೇಕಾರನ ಮನೆಗೆ ಹೋಗಿ, ಅಲ್ಲಿ ಅವನೇ ನೇಯ್ದು, ಬೇರೆ ಬೇರೆ ಅಳತೆಗೆ ಹೊಲಿಸಿಟ್ಟ ರೆಡಿಮೇಡ್ ಮೇಲುಕೋಟೊಂದನ್ನು  ಕೆಲನೂರರಲ್ಲಿ ಕೊಂಡೆ, ನಮ್ಮ ಜೈಪುರದಲ್ಲಿ  ಅಂಗಡಿಯೊಂದರಲ್ಲಿ ಕಣ್ಣಿಗೆ ಬಿದ್ದ ಅದೇ ಮೇಲುಕೋಟು, ಹಲವಾರು ಸಾವಿರಗಳ ಚೀಟಿ ಅಂಟಿಸಿಕೊಂಡಿದ್ದುದನ್ನು ಗಮನಿಸಬಹುದು.
   ..ಒಂದು ಮೆಚ್ಚುಗೆ ಎಂದರೆ,  ಅಲ್ಲಿ  ಒಂದೇ ಒಂದು ಆಧುನಿಕ ಶೈಲಿಯ ಮನೆಯನ್ನು ಆ ಇಡೀ ಎಪ್ಪತ್ತು ಎಕರೆಗಳ ಆವರಣದಲ್ಲಿ ಇರದಂತೆ ನೋಡಿಕೊಂಡಿದ್ದಾರೆ... ಒಂದು ಆರ್‍ಸಿಸಿ  ಮನೆಯನ್ನೂ ಕೂಡ ಒಳಗೆ ಬಿಟ್ಟುಕೊಂಡಿಲ್ಲ... ಸುಮಾರು ಎಂಟು ಸಾವಿರ ಜನ ಆರಾಮವಾಗಿ ಕೂತು ನೋಡಬಹುದಾದ  ಅಂಪಿಥೇಟರೊಂದು ಅಲ್ಲಿ ನನ್ನ ಗಮನ ಸೆಳೆಯಿತು.  ಈ ರಂಗ ಸಜ್ಜಿಕೆಯನ್ನು ಬಹು ಸುಂದರವಾಗಿ ಆಕರ್ಷಕವಾಗಿ ಗ್ರಾಮೀಣ ಸೊಗಡಿನಿಂದಲೇ, ಅಲ್ಲಿ ದೊರೆಯುವ ಸ್ಥಳೀಯ ಕಲ್ಲು ಮಣ್ಣುಗಳಿಂದಲೇ,   ನಿರ್ಮಿಸಿದ್ದು  ಬಲು ಮೆಚ್ಚುಗೆಯಾಯಿತು.   ಇಲ್ಲಿ  ಪ್ರತಿವರ್ಷವೂ ಡಿಸೆಂಬರ್ 20 ರಿಂದ 31 ವರೆಗೆ ' ಶಿಲ್ಪಗ್ರಾಮ ಫೆಸ್ಟಿವಲ್'  ಆಯೋಜಿಸಲಾಗುತ್ತದೆ.  ಈ ಸಂದರ್ಭದಲ್ಲಿ  ದೇಶ  ವಿದೇಶಗಳಿಂದಲೂ  ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆರೆಯುತ್ತಾರೆ. ಜನಪದೀಯ ಹಾಡುಗಳು, ನೃತ್ಯಗಳು, ಕುಣಿತಗಳು, ಬೇರೆ ಬೇರೆ ರಾಜ್ಯಗಳ ಕಲಾತಂಡಗಳು, ನೃತ್ಯತಂಡ, ನಾಟಕ ತಂಡ, ಥೇಟರ್  ಕಲಾವಿದರನ್ನು ಆಹ್ಹಾನಿಸಿ,  ವಿವಿಧ  ಕಲಾ ಪ್ರಕಾರಗಳನ್ನು  ಪ್ರದರ್ಶಿಸಲು ಕ್ರಮ ಕೈಕೊಳ್ಳುತ್ತದೆ ಶಿಲ್ಪಗ್ರಾಮ .. ಉಳಿದಂತೆ ವರ್ಷವಿಡೀ ಕಲಾ ತಂಡಗಳು ತಮ್ಮ ಹಾಡು, ನೃತ್ಯ,ಗಳಿಂದ  ಪ್ರವಾಸಿಗಳಿಗೆ  ಒಂದೇ ಆವರಣದಡಿ  ಒಂದಿಡೀ ಭಾರತವನ್ನು ತೋರಿಸುತ್ತ, ಜನಪದದ ಸೊಗಡನ್ನು  ಪರಿಚಯಿಸುತ್ತಿದೆ ಶಿಲ್ಪಗ್ರಾಮ, ಶಹಬ್ಬಾಸ್ ಶಿಲ್ಪಗ್ರಾಮದ ತಂಡವೇ. ನಿಮಗೆ ಶರಣು.
        ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೇಬೀಡು,  ಶ್ರವಣಬೆಳಗೊಳ ಹಂಪಗಳಂತಹ ಅದ್ಭುತ ಕಲಾವೈಭವವನ್ನೇ ಹೊಂದಿ ಮೆರೆದ  ಗಂಧದ ಕಲೆಗಾರಿಕೆಯ ಹೆಮ್ಮೆಯ  ನಾಡು , ಬೀಡು ನಮ್ಮದು, ಹೀಗೆಯೇ ನಮ್ಮ  ನಾಡಿನಲ್ಲಿಯೂ ಕೂಡ ಸೂಕ್ತ ಕಂಡ ಸ್ಥಳಗಳಲ್ಲಿ ಇಂಥ 'ಶಿಲ್ಪಗ್ರಾಮ'ಗಳನ್ನು,  ನಿರ್ಮಿಸಿದರೆ    ನಮ್ಮ ಮಕ್ಕಳಿಗೂ ಈ ಕಲೆಗಳನ್ನು  ಎದೆಗೆ ಹಾಕುವುದರಿಂದ... ನಮ್ಮವೇ ಆದ  ಈ ಕಲೆಗಳು ನಶಿಸಿ ಹೋಗುವುದನ್ನು ತಪ್ಪಿಸಿದಂತಾಗಬಹುದಲ್ಲವೇ.?  ಇಲ್ಲಿಯೂ ಕೂಡ  ಈಗಿನ ನಮ್ಮ ಕಲಾವಿದರಿಗೂ ಅವರ ಕಲೆಯನ್ನು ತೋರ್ಪಡಿಸಲು ವೇದಿಕೆ ಮಾಡಿಕೊಟ್ಟಂತಾಗುತ್ತದೆ. ಇಲ್ಲಿ ಕಾರ್ಯಕ್ರಮ  ನೀಡಿ ಬರುವುದು  ಒಬ್ಬ ಕಲಾವಿದನ, ಒಂದು ತಂಡದ ಗೌರವ ಹೆಚ್ಚಿದಂತೆ ಎಂಬ ಪರಂಪರೆ ಬೆಳಸಬೇಕಿದೆ.... ನಮ್ಮ ಕಲೆಗಳು, ಆ ಜನಪದಗಳು, ಸಂಪ್ರದಾಯಗಳು,.. ರೀತಿ ರಿವಾಜುಗಳು, ಪದ್ಧತಿಗಳು , ಎಲ್ಲಾ ನಾಡಿನ ಸಂಗೀತ ಪ್ರಕಾರಗಳು, ನೃತ್ಯಗಳು ಅಳಿಯದೇ ಮುಂದಿನ ಪೀಳಿಗೆಗೆ ಯಶಸ್ವಿಯಾಗಿ ದಾಟಿಯಾವು ಎಂಬ ಅಭಿಲಾಷೆಯೊಂದಿಗೆ, ನಮ್ಮ ನಾಡಿನಲ್ಲಿಯೂ ಇಂತಹ 'ಕಲಾಗ್ರಾಮ'ಗಳು ತಲೆಯೆತ್ತಲಿ ಎಂಬ ನಮ್ರ ಮನದ ಅರಿಕೆ, ಹಾರೈಕೆ ನನ್ನದು...
       ಹಾಗಾದಲ್ಲಿ    ನಮ್ಮಲ್ಲೂ ಇಲಕಲ್ ಸೀರೆ, ಗುಳೇದಗುಡ್ಡದ ಖಣಗಳು,  ಬೆಳಗಾವಿಯ  ಸೀರೆ, ಮೊಳಕಾಲ್ಮುರು, ದೊಡ್ಡಬಳ್ಳಾಪುರ, ಲಕ್ಷ್ಮೇಶ್ವರ,  ಶಿಗ್ಲಿ, , ಗದಗ ಬೆಟಗೇರಿಯ ಮಸರಾಯಿ  ಸೀರೆ, ರಾಣೆಬೆನ್ನೂರ, ರಾಮದುರ್ಗ, ಗೋಕಾಕ,. ಸೂಳೇಭಾವಿ, ರಬಕವಿ ಬನಹಟ್ಟಿ,  ಮಹಾಲಿಂಗಪೂರ, ಉಡುಪಿ, ಮೈಸೂರು ರೇಶ್ಮೆ, ಬೆಂಗಳೂರು ಸೀರೆಗಳು, ನಮ್ಮ ನವಲಗುಂದದ ಕಂಬಳಿಗಳು, ಜಮಖಾನೆಗಳು, ಬಳ್ಳಾರಿ ಜೀನ್ಸ್ , ಚನ್ನಪಟ್ಟಣದ ಗೊಂಬೆಗಳು,  ಕರಾವಳಿ ನಾಡಿನ ಶಿರಸಿ ಕುಮಟಾ ದ ಗಂಧದ  ಕೆತ್ತನೆಗಳು ಹೀಗೆ ನಮ್ಮ  ಸಹಸ್ರಾರು ಹಳ್ಳಿಗಳ ಕುಶಲಕರ್ಮಿಗಳನ್ನು ,  ಒಂದು ಹದಿನೈದು ದಿನಗಳ ವರೆಗೆ ಅಲ್ಲಿರಲು ಬಿಟ್ಟು, ಅವರಿಗೆ ತಮ್ಮ ತಯಾರಿಕೆಯ ವಸ್ತುಗಳನ್ನು ಮಾರಲು ಅನುಕೂಲ ಮಾಡಿ,  ಸರಕಾರವೇ ಪ್ರೋತ್ಸಾಹವನ್ನು ನೀಡಿದರೆ, ಜನರೂ ಕೂಡ ಮದುವೆ ಮುಂಜಿವೆ,. ಹಬ್ಬ ಹರಿದಿನಗಳಲ್ಲಿ ಇಲ್ಲಿಂದಲೇ  ಮದುವೆಗಾಗಿ ಉತ್ಪನ್ನಗಳನ್ನು  ಖರೀದಿಸುವಂತಾದರೆ,  ದಲ್ಲಾಳಿಗಳ ಕಪಿಮುಷ್ಠಿಯಿಂದ ಅವರನ್ನು  ಪಾರುಮಾಡಿ, ನೇರವಾಗಿ  ಗ್ರಾಹಕರನ್ನು ಒದಗಿಸಿದಂತಾಗುವುದಲ್ಲವೇ? ಇಬ್ಬರಿಗೂ ಲಾಭ!  ದೇಶದ ನಾಡಿಗೆ ಉಸಿರು ಉಣಿಸಿದಂತೆ!. ಸ್ವಾವಲಂಬನೆಗೆ, ಅವರ ಸ್ವಾಭಿಮಾನಕ್ಕೆ  ನೀರೆರೆದು ಪೋಷಿಸಿದರೆ!  ಆ ಎಲ್ಲ ಕಲೆಯೊಂದಿಗೆ,  ಇತಿಹಾಸದ  ಮತ್ತೊಂದು 'ಸಿಲ್ಕ್ ರೂಟ್ ' ಹುಡುಕಿಕೊಂಡಂತೆ. ಅಲ್ಲದೇ    ಪ್ರತಿಯೊಬ್ಬರ  ನರನಾಡಿಗಳಲ್ಲಿ  ಮತ್ತೆ ಪರಿಶುದ್ಧ ಗಂಗೆ,  ಕೃಷ್ಣೆ , ಕಾವೇರಿಯರು  ಹರಿದಂತೆ!

 

Rating
No votes yet

Comments

ಹಿರಿಯ ಲೇಖಕ, ಚಿಂತಕ ಕವಿನಾಗರಾಜ್ ಸರ್, ತಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ವಂದನೆಗಳು ಸರ್.