ರಾಜ್ಯ ಗ್ರಾಹಕರ ವೇದಿಕೆಗೊಂದು ನಿಷ್ಪ್ರಯೋಜಕ ಯಾತ್ರೆ.

ರಾಜ್ಯ ಗ್ರಾಹಕರ ವೇದಿಕೆಗೊಂದು ನಿಷ್ಪ್ರಯೋಜಕ ಯಾತ್ರೆ.

ನನ್ನ ರಿಲಿಯನ್ಸ್ ಫೋನಿನ ಸಮಸ್ಯೆ ತೀರಾ ಗೊಜಲಾಗಿತ್ತು. ನನ್ನ ದೂರವಾಣಿಯ ಸಮಸ್ಯೆಯನ್ನು ಅವರು ಕೊಟ್ಟ ಹಿಂಸೆಯನ್ನೂ ಮಂಗಳೂರಿನ ಗ್ರಾಹಕ ನ್ಯಾಯಾಲಯ ಗುರುತಿಸಿದರೂ ಅವರಿಗೂ ಸಂಪೂರ್ಣ ಚಿತ್ರಣ ದೊರಕಿರಲಿಲ್ಲ.

ನನ್ನ ಹಣ ಇರುವಾಗಲೇ ರಿಲಿಯನ್ಸ್ ಕಂಪೇನಿ ಉದ್ದೇಶಪೂರ್ವಕವಾಗಿ ಸಂಪರ್ಕ ಕಡಿತ ಮಾಡಿದ್ದನ್ನು ಮಂಗಳೂರಿನ ಗ್ರಾಹಕ ವೇದಿಕೆ ಗುರುತಿಸಿರಲಿಲ್ಲ. ಈ ಸಮಸ್ಯೆಗೆ ರಿಲಿಯನ್ಸ್ ನವರ ದೋಶಪೂರಿತ ಕಂಪ್ಯೂಟರ್ ತಂತ್ರಾಂಶ ಹಾಗೂ ಹೊಣೆ ಅರಿಯದ ಉದ್ಯೋಗಿಗಳೇ ಕಾರಣ. ಒಮ್ಮೆ ಕಟ್ಟಬೇಕಾದ ಮೊತ್ತ ಹಾಗೂ ಕೊನೆಯ ದಿನಾಂಕ ನಮೂದಿಸದ ಬಿಲ್ ಬಂದಿತ್ತು. ಕೊನೆಗೆ ಇದ್ದಕ್ಕಿದ್ದಂತೆಯೇ 148 ರೂಪಾಯಿ ಕಟ್ಟಿ ಎಂದು ದೂರವಾಣಿ ಅದೇಶ ಮಾತ್ರವಲ್ಲ ನನ್ನ ಸಂಪರ್ಕವನ್ನು ಕತ್ತರಿಸಿಯೇ ಬಿಟ್ಟರು. .

ಈ ಉದ್ದೇಶಪೂರ್ವಕ ಸಂಪರ್ಕ ಕಡಿತದ ರುಜುವಾತಾಗಿ ರಿಲಿಯನ್ಸ್ ಕಂಪೇನಿ ಕಳುಹಿಸಿದ SMS ದಾಖಲಿಸಿದ ವಿಡಿಯೋ ಅಂದರೆ ಹೆಚ್ಚಿನ ಸಾಕ್ಷಿ ಸಮೇತ ಬೆಂಗಳೂರಿನಲ್ಲಿರುವ ರಾಜ್ಯ ವೇದಿಕೆಗೆ ಮೇಲ್ಮನವಿ ಸಲ್ಲಿಸಿದೆ.

ಮೇಲ್ಮನವಿಗೆ 69 ದಿನ ವಿಳಂಬವಾದ ನಿಮ್ಮ ಅರ್ಜಿ ಪರಿಗಣಿಸಲು ಸಾದ್ಯವಿಲ್ಲ. ನಿಮಗೆ ಸಿಕ್ಕ ಪರಿಹಾರ ಸಾಕೆಂದು ತೀರ್ಮಾನಿಸಿದ್ದೇವೆ. ಎಂದು ತೀರ್ಪಿನ ಪ್ರತಿ ನನಗೆ ಇತ್ತೀಚೆಗೆ ದೊರಕಿತು. ಉದ್ದೇಶಪೂರ್ವ ಕಡಿತವು ತಾಂತ್ರಿಕ ತೊಂದರೆಯಿಂದ ಬಿನ್ನ ಎಂದು ರಾಜ್ಯ ವೇದಿಕೆಗೆ ಅರ್ಥವಾಗಲಿಲ್ಲ. ಮಾರ್ಚು 5 ರಂದು ನ್ಯಾಯಮೂರ್ತಿ ಚಂದ್ರಶೇಖರಯ್ಯನವರ ಅಧ್ಯಕ್ಷತೆಯ ಪೀಠ ಕೊಟ್ಟ ತೀರ್ಪಿನ ಕಾಪಿ 72 ದಿನ ವಿಳಂಬವಾಗಿ ಅಂಚೆಗೆ ಹಾಕಲ್ಪಟ್ಟಿತು.

ನಮ್ಮ ಹಕ್ಕುಗಳ ಕಾಯಬೇಕಾದವರೇ ನಿರ್ಲಕ್ಷಿಸಿದರೆ ಯಾರಲ್ಲಿ ಹೇಳುವುದು ? ಈಗ ನಾನು ರಾಜ್ಯ ಗ್ರಾಹಕ ವೇದಿಕೆಯ ಕಾರ್ಯ ವೈಖಿರಿ ಪ್ರತಿಭಟಿಸಲೋ ಅಲ್ಲ ಮೂಲ ಸಮಸ್ಯೆ ರಿಲಿಯನ್ಸ್ ಬಗ್ಗೆ ದೆಹಲಿಯಲ್ಲಿರುವ ಗ್ರಾಹಕ ರಾಷ್ಟ್ರೀಯ ವೇದಿಕೆಯ ಸಂಪರ್ಕಿಸಲೋ ಅನ್ನುವ ಗೊಂದಲದಲ್ಲಿದ್ದೇನೆ. ಆದರೆ ಇಷ್ಟು ಹಣ ದಂಡ ಮಾಡಿದ್ದು ಸಾಕು ಎನ್ನುವ ಹಿತೈಷಿಗಳ ಮಾತನ್ನೂ ಮೀರುವಂತಿಲ್ಲ. ಜನ ಸಾಮಾನ್ಯರು ಹೊಂಡಕ್ಕೆ ಬೀಳುವ ಮೊದಲು ಆಲೋಚಿಸಿ ಎನ್ನಲು ಈ ಬರಹ.

ಇದರ ಬಗೆಗಿನ ಹೆಚ್ಚಿನ ವಿವರಗಳು ದಾಖಲೆಗಳೂ ನನ್ನ ಬ್ಲೋಗ್ ಪುಟದಲ್ಲಿವೆ.
http://halliyimda.blogspot.com/2009/06/blog-post_05.html

Rating
No votes yet