ರಾಣಿಯ ಗಂಡ ರಾಜ ಅಲ್ಲ

ರಾಣಿಯ ಗಂಡ ರಾಜ ಅಲ್ಲ

ರಾಣಿಯ ಗಂಡ ರಾಜ ಅಲ್ಲ
ಎಂದಾದರೂ ಯೋಚಿಸಿದ್ದೀರಾ? ರಾಣಿ ಎಲಿಜಬೆತ್ ಪತಿ ಫಿಲಿಪ್ ರಾಜ ಏಕೆ ಅಲ್ಲ ಎಂದು? ಫಿಲಿಪ್ ನನ್ನು ಪ್ರಿನ್ಸ್ ಫಿಲಿಪ್ ಎಂದು ಕರೆಯತ್ತಾರೆ. ಇಂಗ್ಲೆಡಿನ ರಾಜ ಕುಟುಂಬ ವಿಂಡ್ಸರ್ ಮನೆತನದಿಂದ ಬಂದಿದ್ದು. ರಾಣಿ ಎಲಿಜಬೆತ್ ೬ನೆ king george ನ ಪುತ್ರಿ. ಫಿಲಿಪ್ ಆದರೋ ಡಚ್ ರಾಜಕುಟುಂಬದವ. ಎಲಿಜಬೆತ್ ಫಿಲಿಪ್ ನನ್ನು ವರಿಸಿದ ಕೂಡಲೇ ಆತ ಡಚ್ ಪೌರತ್ವ ತ್ಯಜಿಸಿ ಬ್ರಿಟಿಷ್ ಪೌರತ್ವ ಪಡೆದ. ಫಿಲಿಪ್ ವಿಂಡ್ಸರ್ ವಂಶಸ್ಥ ಅಲ್ಲದೆ ಇದ್ದುದರಿಂದ ಆತ ಬರೀ ರಾಜಕುಮಾರ. ಈಗ ರಾಣಿಯದೆ ದರ್ಬಾರು. ರಾಣಿಯ ಹಿರಿಯ ಪುತ್ರ ಚಾರ್ಲ್ಸ್ ರಾಣಿಯ ನಿಧನಾ ನಂತರ ರಾಜನಾಗುವರು. ಆದರೆ ಅವರ ಪತ್ನಿ ಕಾಮಿಲ್ಲ ಪಾರ್ಕರ್ ರಾಣಿ ಆಗುವ ಸಾಧ್ಯತೆ ಕಡಿಮೆ. ಅಷ್ಟಕ್ಕೂ ಮಾಧ್ಯಮದವರ ಕಣ್ಮಣಿ ಫಿಲಿಪ್ಗೆ ರಾಜನಾಗುವ ಆಸೆಯೇನೂ ಇಲ್ಲ. ಏಕೆಂದರೆ ಹೋದೆಡೆಯಲ್ಲೆಲ್ಲ ತನ್ನ ನೇರ, ನಿಷ್ಟುರ ಮಾತುಗಳಿಂದ ರಾಣಿಗೆ ಮಾತ್ರವಲ್ಲ buckingham ಅರಮನೆಗೆ ತಲೆನೋವಾಗಿರುವುದೇ ಸಾಕು. ಒಮ್ಮೆ google ಲಂಡನ್ HQ ಭೇಟಿ ಮಾಡಿದ ಫಿಲಿಪ್ ಅಲ್ಲಿನ ಹಿರಿಯ ಟೆಕ್ಕಿಯ ಜೋಗ್ಗಿಂಗ್ ಸೂಟ್ ನೋಡಿ, ಈಗ ತಾನೇ ಜೋಗ್ಗಿಂಗ್ ಮುಗಿಸಿ ಬಂದಿರಾ ಎಂದು ಕೇಳಿದ. ಟೆಕ್ಕಿ ಈ ಮಾತನ್ನು ಕೇಳಿ ಬೆಪ್ಪಾದ ಏಕೆಂದರೆ ಅಲ್ಲಿ ಕೆಲಸ ಮಾಡುವ ಬಹುತೇಕ ಜನ casual dress ನಲ್ಲೆ ಬರುತ್ತಾರೆ ಕೆಲಸಕ್ಕೆ. ನಮ್ಮ ಮುದಿ (ರಾಜ) ಕುಮಾರನಿಗೆ ಇದು ಹೊಳೆಯಲಿಲ್ಲ.
ಸ್ಲೊವೇನಿಯ ದೇಶದ ಪ್ರವಾಸದ ವೇಳೆ " ಪ್ರವಾಸಿ ಉದ್ಯಮ ಒಂದು ಥರದ ವೇಶ್ಯಾವಾಟಿಕೆ ಇದ್ದಂತೆ" ಎಂದು ಹೇಳಿ ಎಲ್ಲರನ್ನೂ ದಂಗುಬಡಿಸಿದ ಈ ಫಿಲಿಪ್. ಒಮ್ಮೆ ಆಸ್ಟ್ರೇಲಿಯ ಪ್ರವಾಸದ ಸಮಯ ಅಲ್ಲಿನ aborigines ಎನ್ನೋ ಆದಿವಾಸಿಗಳನ್ನು ಭೇಟಿ ಮಾಡಿ " ನೀವುಗಳು ಈಗಲೂ ಒಬ್ಬರ ಮೇಲೊಬ್ಬರು ಶೂಲ ಎಸೆಯುತ್ತೀರ' ಎಂದು ಕೇಳಿ ತನಗೆ ತಾನೇ ನಕ್ಕ.

Rating
No votes yet