ರಾಮನಗರ: ಕ್ಷೇತ್ರಕ್ಕೆ ಭೇಟಿ ನೀಡದ ಶಾಸಕ ಕುಮಾರಸ್ವಾಮಿ!

ರಾಮನಗರ: ಕ್ಷೇತ್ರಕ್ಕೆ ಭೇಟಿ ನೀಡದ ಶಾಸಕ ಕುಮಾರಸ್ವಾಮಿ!

ರಾಜ್ಯದಲ್ಲೆ ರಾಮನಗರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವೆ ಎಂದು ಪಣ ತೊಟ್ಟು ಕೋಟ್ಯಾಂತರ ರೂ.ಗಳ ಕಾಮಗಾರಿಗೆ ಕಾರಣರಾಗಿರುವ ಕ್ಷೇತ್ರದ ಶಾಸಕರು ಮತ್ತು ಮಾಜಿ ಮುಖ್ಯ ಮಂತ್ರಿಗಳೂ ಆದ ಹೆಚ್.ಡಿ.ಕುಮಾರಸ್ವಾಮಿ ಚುನಾವಣೆಗಳ ನಂತರ್ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಒಮ್ಮೆ ಮಾತ್ರ!

೬೦ ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಕ್ಷೇತ್ರಕ್ಕೆ ಭೇಟಿ ನೀಡಲಾಗದಷ್ಟು ಬ್ಯುಸಿಯಾಗಿದ್ದಾರ ನಮ್ಮ ಶಾಸಕರು ಎಂಬುದು ಸಾಮಾನ್ಯ ನಾಗರೀಕರ ಪ್ರಶ್ನೆ! ಇದಕ್ಕೆ ಸ್ಥಳೀಯ ಜೆ ಡಿ ಎಸ್ ಮುಖಂಡರ ಬಳಿ ಉತ್ತರವಿಲ್ಲ!

ರಾಮನಗರ ಜಿಲ್ಲ ಖಜಾನೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಜಿಲ್ಲೆಯಲ್ಲಿ ವೃದ್ದಾಪ್ಯ, ಅಂಗವಿಕಲ, ವಿಧವ ಮಾಶಾಸನಗಳು ಮೂರು ತಿಂಗಳಿಗೊಮ್ಮೆ ವಿತರಣೆಯಾಗುತ್ತಿದೆ.

ರಾಮನಗರ ತಾಲೂಕಿನಲ್ಲಿ ಸಂಧ್ಯಾ ಸುರಕ್ಷಾ ಯೋಜನೆಗೆ ಫಲಾನುಭವಿಗಳನ್ನು ಇನ್ನು ಗುರುತಿಸಿಲ್ಲ,

ಹೆಚ್.ಡಿ.ಕೆ.ಯವರ ಅಧಿಕಾರವಧಿಯಲ್ಲಿ ಆರಂಭವಾದ ಜಿಲ್ಲಾ ಕೇಂದ್ರದ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದೆ.

ಶಾಸಕರ ಭೇಟಿ ಇಲ್ಲದೆ ಅಧಿಕಾರಿಗಳದ್ದೆ ಕಾರುಬಾರಾಗಿದೆ.

ರಾಮನಗರವನ್ನು ಜಿಲ್ಲಾ ಕೇಂದ್ರವಾಗಿಸಿದ ಕೀರ್ತಿ ಕುಮಾರಸ್ವಾಮಿಯವರಿಗೆ ಸಲ್ಲುತ್ತದೆ, ಆದರೆ, ಜಿಲ್ಲಾ ಕೇಂದ್ರವಾದ ನಂತರ ಎಲ್ಲ ಬೆಲೆಗಳು ಗಗನ ಮುಖಿಯಾಗಿ ಸಾಮಾನ್ಯರ ಜೀವನ ದುಸ್ಥರವಾಗಿದ್ದು ಇದಕ್ಕೆ ಯಾರು ಹೊಣೆ ಎಂಬ ಯಕ್ಷ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ರಾಮನಗರಿಗರಿಗೆ ಕುಮಾರಸ್ವಾಮಿಯವರ ಮೇಲೆ ತುಂಬು ವಿಶ್ವಾಸವಿದೆ. ತಮ್ಮ ಸಂಕಷ್ಟಗಳನ್ನೆಲ್ಲ ದೂರಮಾಡುವ ಶಕ್ತಿ ನಮ್ಮ ಶಾಸಕರಿಗಿದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಆದರೇ.................. ಕುಮಾರಸ್ವಾಮಿ ಇಲ್ಲಿಗೆ ಬಂದರೆ ತಾನೆ ಪರಿಹಾರಕ್ಕೆ ದಾರಿ ಎನ್ನುವವರ ಸಂಖ್ಯೆಯೇ ಹೆಚ್ಚು!

Rating
No votes yet

Comments