ರಾಮನೇ ? ಇವ ಕಾಮನೇ? ಅಭಿರಾಮನೇ?

ರಾಮನೇ ? ಇವ ಕಾಮನೇ? ಅಭಿರಾಮನೇ?

 

 
ಸೀತಾಸ್ವಯಂವರದ ಸಮಯದಲ್ಲಿ ಹಲವು ರಾಜರು ಸೀತೆಯ ತಂದೆ ಜನಕರಾಯನಿಟ್ಟ ಪಂಥದಲ್ಲಿ ವಿಫಲರಾದನಂತರ, ರಾಮ ಎದ್ದು ಶಿವಧನುವಿಟ್ಟೆಡೆಗೆ ನಡೆದಿರಲು - 
ಸಂದರ್ಭಕ್ಕೆಂದು ಬರೆದ ಎರಡು ಪದ್ಯಗಳು:

 

 
 
ರಾಮ ಹೊರಡಲು ಹರಧನುವಿನೆಡೆ ಶಿವನ ನುತಿಸುತ ಚೆಂದದಿಂ
ತಾಮರೆಯನೇ ಪೋಲ್ವಕಂಗಳ ದಿಟ್ಟ ನಡಿಗೆಯ ಧೀರನ
ಕಾಮದೇವನ ಚೆಲ್ವಮೀರಿಹ ಠೀವಿನೋಡುತ ಸೀತೆಯು
ಹಾ! ಮನದಿನಿಯನೀಗ ಹೊರಟಿರೆ ಜೀವವುಳಿಯಿತುಯೆಂದಳು!



 
ರಾಮ ಹೊರಟಿರೆ ನಮಿಸಿ ಜನಕಗೆ ಹರನಚಾಪವನಿಟ್ಟೆಡೆ
ತಾಮರೆಯನೇ ಪೋಲ್ವಕಂಗಳ ದಿಟ್ಟ ನಡಿಗೆಯ ಧೀರನ
ಕಾಮದೇವನ ಚೆಲ್ವಮೀರಿಹ ಠೀವಿನೋಡುತ ಸಜ್ಜನರ್ 
ರಾಮನೇ? ಇವ ಸೋಮನೇ! ಮನದಭಿರಾಮನೇ ಸರಿಯೆಂದರು!

 

Rating
No votes yet