ರಾಮ ಸೇತು
ರಾಮ ಮತ್ತು ಹನುಮಂತನ ನಡುವೆ ಇತ್ತೀಚೆಗೆ ನಡೆದ ಒಂದು ಸಂಭಾಷಣೆ.
ಬಹಳಷ್ಟು ಹೊತ್ತು 'ರಾಮ ಸೇತು'ವನ್ನು ಅವಲೋಕಿಸಿದ ನಂತರ ರಾಮನೆಂದ "ಹನುಮಂತ, ಬಹಳಷ್ಟು ಶತಮಾನಗಳ ಹಿಂದೆ ನೀನು ಮತ್ತು ನಿನ್ನ ವಾನರ ಸೈನ್ಯ ಸೇರಿ ಎಷ್ಟು ಪರಿಶ್ರಮದಿಂದ ಮತ್ತು ಶ್ರದ್ಢೆಯಿಂದ ಈ ಸೇತುವೆಯನ್ನು ನಿರ್ಮಿಸಿದ್ದಿರಿ. ಹವಾಮಾನ ವೈಪರಿತ್ಯ ಮತ್ತು ಭೂ ಬದಲಾವಣೆಯನ್ನು ಈ ಸೇತುವೆ ಇಷ್ಟೊಂದು ಶತಮಾನಗಳಿಂದ ತಡೆದುಕೊಂಡಿದ್ದೆ ಒಂದು ಅಸಾಮಾನ್ಯ ಸಂಗತಿಯಾಗಿದೆ. ಇತ್ತೀಚೀನ ಮತ್ತು ಅತ್ಯಂತ ಮುಂದುವರೆದ ತಂತ್ರಜ್ಞ್ನಾನದಿಂದ ಹೈದರಾಬಾದ ನಗರದಲ್ಲಿ ಗ್ಯಾಮೊನ ಸಂಸ್ಥೆ ನಿರ್ಮಿಸುತ್ತಿದ್ದ ಸೇತುವೆಯ ಕಂಬಗಳ ಮೇಲೆ ಯಾವುದೇ ಪೋಸ್ಟರಗಳನ್ನು ಅಂಟಿಸುವ ಮುಂಚೆಯೆ ಅದು ಬಿದ್ದಿತೆಂದರೆ ಈ 'ರಾಮ ಸೇತು' ಉಳಿದಿರಿವದು ಆಶ್ಚರ್ಯಕರ ಸಂಗತಿಯೇ ಸರಿ".
ಹನುಮ ನಮ್ರತೆಯಿಂದ ನುಡಿದ "ಜೈ ಶ್ರೀ ರಾಮ್, ಅದಕ್ಕೆಲ್ಲ ತಮ್ಮ ಅನುಗ್ರಹವೇ ಕಾರಣ. ನಿಮ್ಮ ಹೆಸರನ್ನು ಕಲ್ಲು/ಇಟ್ಟಿಗೆಗಳ ಮೇಲೆ ಬರೆದು ಸಮುದ್ರದಲ್ಲಿ ಎಸೆದದ್ದಷ್ಟೆ ನಾವು ಮಾಡಿದ್ದು ಅವು ಒಂದಕ್ಕೊಂದು ಹಿಡಿದುಕೊಂಡು ನಿಂತವು. ನಾವೇನು ಯಾವುದೇ ಕಂಪನಿಯ ಸ್ಟೀಲನ್ನಾಗಲೀ ಅಥವಾ ಸಿಮೆಂಟನ್ನಾಗಲಿ ಉಪಯೋಗಿಸಲಿಲ್ಲಾ. ಅದೆಲ್ಲಾ ಹಳೆ ಕಥೆ, ಈಗ್ಯಾಕೆ ಅದರ ಮಾತು, ಪ್ರಭು".
ರಾಮನೆಂದ "ಹಂ, ಕೆಳಗೆ ಭೂಮಿಯ ಮೇಲೆ ಕೆಲ ಜನರು ಈ ಸೇತುವೆಯನ್ನು ಧ್ವಂಸ ಮಾಡಿ ಹೊಸ ಕಾಲುವೆಯನ್ನು ಕಟ್ಟಲು ಹೊರಟಿದ್ದಾರೆ. ಈ ಕೆಲಸಕ್ಕೆ ಸಾಕಷ್ಟು ಹಣದ ವ್ಯಯವಾಗಲಿದೆ ಮತ್ತು ಇದರಿಂದ ಸಾಕಷ್ಟು ಜನರು ಸಾಕಷ್ಟು ದುಡ್ಡನ್ನು ಮಾಡುತ್ತಾರೆ. ಈ ಸೇತುವೆಯನ್ನು ಕೆಡವಿಯೂ ದುಡ್ಡು ಮಾಡುತ್ತಾರೆ ಮತ್ತು ಹೊಸದನ್ನು ಕಟ್ಟಿಯೂ ಕೂಡ".
ವಿನಮ್ರತೆಯಿಂದ ನಮಸ್ಕರಿಸುತ್ತಾ ಹನುಮನೆಂದ "ನಾವೇಕೆ ಭೂಮಿಯ ಮೇಲೆ ಹೋಗಿ ಈ ಸೇತುವೆಯ ಬಗ್ಗೆ ತಿಳಿಸಬಾರದು".
ರಾಮನೆಂದ "ನಾವಿದ್ದ ಸಮಯಕ್ಕೆ ಹೊಲಿಸಿದರೆ ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಅವರು ನಮಗೆ ವಯಸ್ಸಿನ ಪುರಾವೆ ಕೇಳಿದರೆ ನಮ್ಮ ಹತ್ತಿರ ಜನನ ಪ್ರಮಾಣ ಪತ್ರವು ಇಲ್ಲ ಅಥವಾ ಯಾವುದೇ ಶಾಲೆಯ ಪ್ರಮಾಣ ಪತ್ರವೂ ಇಲ್ಲ. ನಾವು ಕಾಲ್ನಡಿಗೆಯ ಮೂಲಕ ಮತ್ತು ರಥಗಳ ಮೂಲಕ ಚಲಿಸುತ್ತೆವಾದ್ದರಿಂದ ನಮ್ಮ ಹತ್ತಿರ ವಾಹನ ಚಾಲನ ಪತ್ರ ಕೂಡಾ ಇಲ್ಲ. ನನ್ನ ಜನ್ಮ ಸ್ಥಳವೇ ಅನೇಕ ವರ್ಷಗಳಿಂದ ನ್ಯಾಯಾಲಯದಲ್ಲ್ಲಿ ಮೊಕದ್ದಮೆಯಲ್ಲಿರುವಾಗ ಇನ್ನು ವಿಳಾಸ ಪ್ರಮಾಣವೆಲ್ಲಿ? ಇನ್ನು ಬಿಲ್ಲ ಬಾಣಗಳ ಸಮೇತ ನನ್ನ ಮೂಲ ವೇಷದಲ್ಲಿ ಭೂಮಿಗೆ ಹೋದರೆ ಸಾಮಾನ್ಯ ಜನರೆನೋ ನನ್ನನ್ನು ಗುರುತು ಹಿಡಿಯಬಹುದು, ಆದರೆ ಅರ್ಜುನ್ ಸಿಂಘ ನನ್ನನ್ನು ಯವುದೋ ಆದಿವಾಸಿಯೆಂದು ತಿಳಿದು, ಹೆಚ್ಚೆಂದರೆ, ಯಾವುದೋ ಐ.ಐ.ಟಿಯಲ್ಲಿ ಯವುದೋ ಒಂದು ಕಾಯ್ದಿರಿಸಿದ ಶ್ರೇಣಿಯಲ್ಲಿ ಒಂದು ಸೀಟನ್ನು ಕೊಟ್ಟಾನು. ಇನ್ನು ಥ್ರೀ ಪೀಸ್ ಸೂಟ್ನಲ್ಲಿ ಹೋಗಿ ನಾನು ರಾಮನೆಂದರೆ ನನ್ನ ಭಕ್ತರು ಕೂಡ ನನ್ನ ಸಂಶಯದ ದೃಷ್ಟಿಯಿಂದ ನೋಡುತ್ತಾರೆ. ಹೀಗಾಗಿ ನನಗೆ ಉಭಯ ಸಂಕಟವಾಗಿದೆ."
ಹನುಮ: "ನಡೆಯಿರಿ ನಾನೇ ನನ್ನ ಹಸ್ತದಿಂದ ಆ ಸೇತುವೆಯನ್ನು ಕಟ್ಟಿದ್ದೇನೆಂದು ಪ್ರಮಾಣ ಮಾಡುತ್ತೇನೆ."
"ಪ್ರಿಯ ಅಂಜನಿ ಪುತ್ರನೇ ಅದೆಲ್ಲ ನಡೆಯುವ ಮಾತಲ್ಲ. ಅವರು ನಮಗೆ ಆ ಯೋಜನೆಯ ನೀಲಿ ನಕ್ಷೆ, ಸಮೀಕ್ಷೆ, ಯೋಜನಾ ಗಾತ್ರ ಮತ್ತು ಹಣಕಾಸಿನ ವಿವರಗಳನ್ನು ಕೇಳುವರು. ಹಣದ ಮೂಲದ ಬಗ್ಗೆ ಕೇಳುವರು. ಸಾಕ್ಶ್ಯ ಪುರಾವೆಗಳಿಲ್ಲದೇ ಭಾರತದಲ್ಲಿ ಏನೂ ಅಂಗೀಕರಿಸಲ್ಪಡುವದಿಲ್ಲಾ. ನೀನು ಕೆಮ್ಮಬಹುದು, ಆದರೆ ವೈದ್ಯರು ಅದನ್ನು ಧೃಡೀಕರಿಸದಿದ್ದರೆ ಅದು ಕೆಮ್ಮೇ ಅಲ್ಲ. ನಿವೃತ್ತ ವ್ಯಕ್ತಿ ತಾನು ಜೀವಂತನಿರುವೆನೆಂದು ತಾನಾಗಿ ಹೋಗಿ ನಿಂತರೆ ಸಾಲದು, ಜೋತೆಗೆ ತನ್ನ ಜೀವಂತಿಕೆಯ ಬಗ್ಗೆ ಒಂದು ಧೃಡೀಕರಣ ಪತ್ರ ಒಯ್ದರೆ ಮಾತ್ರ ಅವನು ಜೀವಂತನೆನ್ನುವರು. ಇಷ್ಟು ಕ್ಲಿಷ್ಟ್ವವಾದ ವಿಷಯವಿದು."
"ಪ್ರಭು ಇತಿಹಾಸಕಾರರ ಮಾತೊಂದೂ ನನಗೆ ತಿಳಿಯುತ್ತಿಲ್ಲ. ಶತ ಶತಮಾನಗಳಿಂದ ತಾವು ಸೂರದಾಸ, ತುಳಸೀದಾಸ, ಸಂತ ತ್ಯಾಗರಾಜ, ಜಯದೇವ, ಭದ್ರಾಚಲ ರಾಮದಾಸ ಮತ್ತು ಸಂತ ತುಕಾರಾಮರಿಗೂ ದರ್ಶನ ಕೊಟ್ಟಿದ್ದೀರಿ, ಇಷ್ಟಾದರೂ ಇವರು ನಿಮ್ಮ ಇರುವಿಕೆಯನ್ನೇ ಪ್ರಶ್ನಿಸುತ್ತಾರೆ ಮತ್ತು ರಾಮಾಯಣವೆಲ್ಲ ಕಾಲ್ಪನಿಕವೆನ್ನುತ್ತಾರೆ. ಈಗ ಉಳಿದಿರುವದು ಒಂದೇ ಹಾದಿ, ರಾಮಯಣವನ್ನೇ ಸಂಪೂರ್ಣವಾಗಿ ಭೂಮಿಯ ಮೇಲೆ ಇನ್ನೊಮ್ಮೆ ಪ್ರದರ್ಶಿಸಿದರೆ(re-enact) ಹೇಗೆ, ಸರ್ಕಾರ ತನ್ನೆಲ್ಲಾ ಕಾಗದ ಪತ್ರಗಳನ್ನು ಖಾಯಂ ಆಗಿ ಬದಲಾಯಿಸಿಕೊಳ್ಳಬಹುದು."
ಮುಗುಳ್ನಗುತ್ತ ರಾಮನೆಂದ "ಇದೀಗ ಅದಷ್ಟು ಸುಲಭವಲ್ಲಾ. ರಾವಣನಿಗೆ ತಾನು ಕರುಣಾನಿಧಿಗೆ ಸಂತನ ಹಾಗೆ ಕಾಣುತ್ತೇನೆಂಬ ಹೆದರಿಕೆ. ಸೀತೆಯ ಎದುರಿಗೆ ಸ್ವರ್ಣ ಜಿಂಕೆಯಾಗಿ ಕಾಣಿಸಿಕೊಂಡ ಅವನ ಸೋದರಮಾವನಾದ ಮಾರೀಚನ ಜೊತೆ ಮಾತನಾಡಿದಾಗ, ಸಲ್ಮಾನ್ ಖಾನ್ ಇರುವವರೆಗೂ ನಾನು ಭೂಮಿಯ ಮೇಲೆ ಹೋಗುವದಿಲ್ಲನೆಂದ".