ರಾಯನ ದಿನಚರಿ - ದಿನ ನಾಲ್ಕು

ರಾಯನ ದಿನಚರಿ - ದಿನ ನಾಲ್ಕು

ಇವತ್ತು ರಾಯನಿಗೆ ಕೊರೋನಾ ಲಸಿಕೆ ನೀಡುವಿಕೆ ಬಗ್ಗೆ ತಿಳಿಯಬೇಕು ಎನಿಸಿತಂತೆ.  60 ವರ್ಷಕ್ಕೂ ಮೀರಿದವರಿಗೆ ಮತ್ತು 45 ರಿಂದ 60 ವರ್ಷರು ಮತ್ತು ವಿವಿಧ ರೋಗ ಸಮಸ್ಯೆಗಳಿರುವವರಿಗೆ ಲಸಿಕೆ ನೀಡಿಕೆ ಶುರುವಾಗಿದೆಯಂತೆ, ಅದು ಹೇಗೆ , ಎಲ್ಲಿ, ಎಂತು ಎಂದೆಲ್ಲ ತಿಳಿಯಬೇಕೆನಿಸಿತು. ಅದೂ ತಾನಿರುವ ಊರಿನಲ್ಲಿ . ಅದನ್ನು ಹೇಗೆ ತಿಳಿಯಬೇಕು? ಅವನಿಗೆ ಹೊಳೆದದ್ದು ಪತ್ರಿಕೆಗಳ ಸ್ಥಳೀಯ ಆವೃತ್ತಿಗಳು, ಅವನ್ನು ಕುಳಿತಲ್ಲಿಯೇ ಹೇಗೆ ಪಡೆಯಬೇಕು? ಆಗ ಉಪಯೋಗಿಸಿದ್ದು - kannada daily newspapers ಎಂಬ ಮೊಬೈಲ್ ಆ್ಯಪ್ !

ಅದರಲ್ಲಿ ಪ್ರಜಾವಾಣಿ ಉದಯವಾಣಿ ಕನ್ನಡ ಪ್ರಭ ಇವುಗಳನ್ನು ತಿರುವಿ ಹಾಕಿದ!

 

ಇವತ್ತು ಬಾಳಾಸಾಹೇಬ ಲೋಕಾಪುರ ಅವರು ಬರೆದ ಸಣ್ಣಕತೆಗಳ ಸಂಗ್ರಹ - ಜಂಬು ನೇರಳೆ ಓದಿದನಂತೆ, ಬರೀ ಪುಸ್ತಕ ಓದಿಯೇ ಲೋಕ ಜೀವನದ ಎಷ್ಟೊಂದು ತಿಳುವಳಿಕೆ ಬರುತ್ತದಲ್ಲ ಎ೦ದು ಅಚ್ಚರಿ ವ್ಯಕ್ತಪಡಿಸಿದ. ಆರೇಳು ಕತೆಗಳಲ್ಲಿ 2-3 ಕತೆಗಳು ತುಂಬ ಚೆನ್ನಾಗಿದ್ದವು, ಒಂದರಲ್ಲಿ ಒಬ್ಬನ ಹೆಂಡತಿ ಊರಲ್ಲಿ ಇಲ್ಲದಾಗ ಅವನ ಮನೆಗೆ ಒಬ್ಬ ಹೆಣ್ಣು ಮಗಳು ಬಂದು .... ಅಯ್ಯೋ ಬೇಡ ಆ ಫಜೀತಿ. ಈ ಕತೆಯನ್ನು ಓದಿದರೆ ಯಾವತ್ತೂ ಮರೆಯುವದಿಲ್ಲ. ಅನಾಹುತದ ಸಾಧ್ಯತೆಗಳು ಗೊತ್ತಿರುವುದು ಯಾರಿಗಾದರೂ ಒಳ್ಳೆಯದೇ .  

 

ಆಮೇಲೆ The Lion King ಎಂಬ ಆ್ಯನಿಮೇಶನ್ ಚಲನಚಿತ್ರವನ್ನು ಟೀವಿಯಲ್ಲಿ ನೋಡಿದ. ಮಕ್ಕಳಿಗೆ ಎಂದಿರುವ ಕತೆಗಳು , ಚಲನಚಿತ್ರಗಳು ದೊಡ್ಡವರಿಗೂ ಹೌದು. ಚಲನಚಿತ್ರ ಚೆನ್ನಾಗಿತ್ತು. "ಸೌಂದರ್ಯವು ನೋಡುವವರ ಕಣ್ಣಲ್ಲಿದೆ" ಎಂಬ ಮಾತನ್ನು ಕೇಳಿದ್ದೀರಿ ಅಲ್ಲವೆ? ಇದರಲ್ಲಿ "ಸತ್ಯವು ನೋಡುವವರ ಕಣ್ಣಲ್ಲಿದೆ" ಎಂಬ ಮಾತು ಇದೆ! ಮತ್ತೆ "ನೀವು ಯಾವುದಕ್ಕೂ ಹೆದರುವುದಿಲ್ಲ ಎಂದು ತೊಂದರೆಯನ್ನು ಹುಡುಕಿ ಮೈ ಮೇಲೆ ಹಾಕಿಕೊಳ್ಳಬೇಕಿಲ್ಲ" ಎಂಬ ಮಾತೂ ಇದೆ.

 

Rating
Average: 4 (1 vote)