ರಾವಣ , ಕಣಸು ಮತ್ತು ಅಂತರ್ಜಾಲದಲ್ಲಿನ ನೀವೂ ನಾವು
ನಾವೂ ನೀವೂ ಈ ಅಂತರ್ಜಾಲದ ಮೂಲಕ ಜಗತ್ತಿಗೆ ಏನಾದರೂ ವ್ಯತ್ಯಾಸ ಮಾಡ್ತಾ ಇದ್ದೇವಾ ?
ಈ ಮೊದಲು ಮುದ್ರಣ-ಮಾಧ್ಯಮಗಳು , ಈ ಬರಹಗಾರರು , ಮುದ್ರಕರು ಒಂಥರಾ ಏಕಸ್ವಾಮ್ಯ ಸಾಧಿಸಿದ್ರು . ಅವರು ಪ್ರಿಂಟು ಮಾಡಿದ್ದೇ ಸರಿ , ಅವರ ಬರಹದ ಬಗ್ಗೆ ಓದುಗರು ತಮ್ಮ ಭಾವನೆ ತಿಳಿಸಲಿಕ್ಕೆ , ಇತರರ ಜತೆಗೆ ಹಂಚಿಕೊಳ್ಳಲಿಕ್ಕೆ ಅವರನ್ನೇ ಅವಲಂಬಿಸಬೇಕಾಗಿತ್ತು . ಈ ಅಂತರ್ಜಾಲ , ಮತ್ತು ಬ್ಲಾಗಿಂಗ್ ಬಂದು ಯಾರು ಬೇಕಾದರೂ ತಮ್ಮ ಅನಿಸಿಕೆಯನ್ನ ಪ್ರಕಟಿಸಿಅಬಹುದು . ಹೀಗಾಗಿ ಅಂತರ್ಜಾಲ ಒಂದು ಪ್ರಜಾಸತ್ತಾತ್ಮಕ ಮಾಧ್ಯಮ ಆಗಿ ಬಿಟ್ಟಿದೆ. ಅಂತರ್ಜಾಲದಲ್ಲಿ ನೀವು ಬರೆದುದಕ್ಕೆ ಒಂದು ಪತ್ರಿಕೆಯ ಸರ್ಕ್ಯುಲೇಶನ್ನಿನಷ್ಟು ಓದುಗರು ಇರಲಿಕ್ಕಿಲ್ಲ ; ಆದರೆ ನಿಮ್ಮ ಬರಹ ಖಂಡಿತ ಮುದ್ರಣ ಮಾಧ್ಯಮ ಕಡೆಗಣಿಸುವ ಹಾಗಿಲ್ಲ ; ಅಂತರ್ಜಾಲದಲ್ಲಿನ ಒಂದು ಬರಹಕ್ಕೆ ಪ್ರತಿಯಾಗಿ ಪ್ರಸಿದ್ಧ ಪತ್ರಕರ್ತರು ಜವಾಬು ಕೊಟ್ಟಿದ್ದನ್ನು ಹಿಂದೆ ನೋಡಿದ್ದೀವಿ.
ಇಲ್ಲಿನ ನಮ್ಮ ಹವ್ಯಾಸಿ ಬರಹಗಳನ್ನೂ ಪಂಡಿತರುಗಳು ಗಮನಿಸ್ತಾರೆ ಅಂತ ಅನ್ನಿಸುತ್ತೆ . ಇದು ನನ್ನ ಭ್ರಮೆ ಇರಲಿಕ್ಕಿಲ್ಲ .
ಇತ್ತೀಚೆಗೆ ಪ್ರಜಾವಾಣಿಯಲ್ಲಿ ಒಂದು ಸುದ್ದಿ ನೋಡಿದೆ . ಪ್ರಸಿದ್ಧರು ಯಾರೋ ’ ಗ್ರಂಥಸ್ಥ ಭಾಷೆಯಲ್ಲೇ ಕಾದಂಬರಿ/ಕತೆ/ಸಾಹಿತ್ಯ ರಚಿಸಬೇಕು’ ಅಂತ ಅಪ್ಪಣೆ ಕೊಡಿಸಿದ್ದಾರೆ . ಮುದ್ರಣಮಾದ್ಯಮದಲ್ಲಿನಂತೆ ಅಂತರ್ಜಾಲದಲ್ಲೂ ಆಡು ಭಾಷೆ ಬಳಕೆಗೆ ಬೆಂಬಲ ವ್ಯಕ್ತ ಆದದ್ದೇ ಇದಕ್ಕೆ ಕಾರಣವೋ ಏನೋ ?
’ನನ್ನಿ’ ಶಬ್ದ ಥ್ಯಾಂಕ್ಸ್ ಗೆ ಬದಲಿ ಆಗಿ ಬಳಕೆಗೆ ಬರುತ್ತಿದೆ .
ಹಿಂದೊಮ್ಮೆ ’ಕಣಸು’ ಎಂಬ ಶಬ್ದದತ್ತ ನಿಮ್ಮ ಗಮನ ಸೆಳೆದಿದ್ದೆವು. ಕನಸು ಡ್ರೀಂ , ಕಣಸು/ ಕಾಣ್ಕೆ - ವಿಷನ್ , ದರ್ಶನ . ಬೇಂದ್ರೆ ಅವರ ಒಂದು ಹಾಡಿನ ತಲೆಬರಹದಲ್ಲಿ ಇದನ್ನು ನೋಡಬಹುದು . ಬೇರೆಡೆ ಎಲ್ಲೂ ನಾನು ಕಣಸು ಶಬ್ದದ ಬಳಕೆ ನೋಡಿರ್ಲಿಲ್ಲ .
ಈಗ ರಾವಣನೂ ’ಕಣಸು’ ಕಂಡಿದ್ದಾನೆ !
ಇತ್ತೀಚೆಗೆ ’ ರಾವಣನ ಕಣಸು’ ಎಂಬ ನಾಟಕ ಆಡಿದರು .
ಈಗ
ಸುಧಾದಲ್ಲಿ ’ ರಾವಣನ ಕಣಸು’ - ಧಾರಾವಾಹಿ ಶುರು ಆಗಲಿದೆ ! :)