ರಿಟರ್ನ್ ಟಿಕೆಟ್

ರಿಟರ್ನ್ ಟಿಕೆಟ್

ನನ್ ಸೆಲ್ನಲ್ಲಿರೋ ನಾಲ್ಕು ಜಿ.ಬಿ ತುಂಬಾ ಇರೋದು ಒಳ್ಳೆ ಕನ್ನಡ ಹಾಡ್ಗಳು, ಕೆಲವು ಕಿಶೋರ್ ಕುಮಾರ್, ಲತಾ, ಮುಖೇಶ್ ಹಾಡ್ಗಳು ಮತ್ತೆ ಕೆಲ್ವು ನಂಗರ್ಥಾ ಆಗೋ ಸ್ಪಾನಿಷ್ ಹಾಡ್ಗಳು. ಮನೆಯಿಂದ ಆಫೀಸ್, ಆಫೀಸಿಂದ ಮನೆ ಓಡಾಡುವಾಗ ಬಸ್ಸಲ್ಲಿ ಕೇಳ್ತಿರ್ತೀನಿ. ಇಲ್ಲಿ ಎಫ್.ಎಂನಲ್ಲಿ ಬರೋದು ಬರೇ ಸ್ಪಾನಿಷ್ ಹಾಡ್ಗಳು. ನನ್ ಹತ್ರ ಬೇರೆ ಎಂಪಿ3 ಪ್ಲೇಯರ್ ಇಲ್ಲದಿರೋದ್ರಿಂದ, ನನ್ನ ಸೆಲ್ಫೋನೇ ನನ್ನ ಸಂಗಾತಿ. ಬೆಳಿಗ್ಗೆ ಕೇಳ್ತಾ ಇರ್ಬೇಕಾದ್ರೆ ತುಂಬ ದಿನದಿಂದ ಕೇಳ್ದೇ ಇದ್ದ ಹಾಡು "ಸಂದೇಸೇ ಆತೇ ಹೈ - ಬಾರ್ಡರ್ ಚಿತ್ರದ್ದು" ಬಂದ್ಬಿಡೋದ!
ಸಿಕ್ಕಾಪಟ್ತೆ ಫೀಲಾಯ್ತು.. ನಾನೇನು ಇಲ್ಲಿ ಯುದ್ಧ ಮಾಡಕ್ ಬಂದಿಲ್ಲ, ನಂಗೊತ್ತು. ಆದ್ರೆ ಊರಿಗ್ ಹೋಗ್ಬೆಕು ಅನ್ಸಿಬಿಟ್ಟಿದೆ. ಮೇನೇಜರ್ ಹತ್ರ ಮಾತಾಡ್ದೆ. ಸರಿ ನೋಡೊಣ ಅಂತ ಹೇಳಿದಾರೆ. ಎಷ್ಟ್ ಬೇಗ ಆಗುತ್ತೊ ಅಷ್ಟ್ ಬೇಗ ವಾಪಸ್ ಬರ್ತಿದೀನಿ..
ಆದ್ರೆ ಮೇನೇಜರ್ ಆಗ್ಲೆ ಕಂಡಿಷನ್ ಹಾಕಿದಾರೆ, ಬಂದ್ ತಕ್ಷಣ ವೆಕೇಷನ್ ತಗೋಬೇಡ ಸ್ವಲ್ಪ ದಿನ ಕಾಯಪ್ಪ ಅಂತ. ಅಲ್ಲಿ ಬಂದ್ ತಕ್ಷಣ ಮತ್ತೆ ಕೆಲ್ಸ ಶುರು..
ಇಲ್ಲಿಗೆ ಬರೋಕ್ ಮುಂಚೆ ಎಷ್ಟ್ ಎಕ್ಸೈಟ್ಮೆಂಟ್ ಇತ್ತೋ ಈಗ್ಲೂ ಹಂಗೇ ಇದೆ..
ಟಿಕೆಟ್ಗೆ ಕಾಯ್ತಾ ಇದೀನಿ.

Rating
No votes yet

Comments