ರಿಮೋಟ್ ಲಾಗಿನ್; ಸಮುದಾಯಗಳಲ್ಲಿ ನಾವು

ರಿಮೋಟ್ ಲಾಗಿನ್; ಸಮುದಾಯಗಳಲ್ಲಿ ನಾವು

ನನ್ನ ಬಳಿ ಉಬುಂಟುವಿನ ಹೊಸ ಆವೃತ್ತಿಯಾದ 'ಡ್ಯಾಪರ್' ಇಲ್ಲವಾದ್ದರಿಂದ ಅದರಲ್ಲಿ ಕನ್ನಡ ಕುರಿತ ಕೆಲವು ಸಮಸ್ಯೆಗಳನ್ನು ಟೆಸ್ಟ್ ಮಾಡಿ ನೋಡಲಾಗಿರಲಿಲ್ಲ. ಇಂದು ಹಳೆಯ ಸ್ನೇಹಿತನೊಬ್ಬ ಮಾತಿಗೆ ಸಿಕ್ಕಾಗ "ಅಯ್ಯೋ, ನನ್ನ ಕಂಪ್ಯೂಟರಿನಲ್ಲಿ ಇವತ್ತಿನ ಫ್ರೆಶ್ ಕಾಪಿ install ಮಾಡಿರುವೆ, ಅದರಲ್ಲೇ ಟೆಸ್ಟ್ ಮಾಡಿ ನೋಡು" ಎಂದ. ಈಗ ಅಮೇರಿಕದಲ್ಲಿ ಅವನ ಮನೆ.
ಬೆಂಗಳೂರಿನಿಂದ ಅಮೇರಿಕದ ಅವನ ಕಂಪ್ಯೂಟರಿಗೇ ಲಾಗಿನ್ ಆಗಿದ್ದೆ. ಲಾಗಿನ್ ಆಗಲು ಬಳಸಿದ್ದ ಉಪಕರಣ - nxclient.
ಸರಿ, ಇವೆಲ್ಲ ಯಾಕೆ ಇಲ್ಲಿ ಬರೆದಿರೋದು? ವಿಂಡೋಸ್ ಬಳಸಿ ರಿಮೋಟ್ ಲಾಗಿನ್ ಬಹಳ ಸುಂದರವಾಗಿದೆ, ಲಿನಕ್ಸ್ ಬರೇ ಕಷ್ಟ ಎನ್ನುವವರಿಗಾಗಿ ಈ‌ ಮಾಹಿತಿ! ;)

screenshot ಕೆಳಗಿದೆ ನೋಡಿ:
ರಿಮೋಟ್ ಲಾಗಿನ್

ಟೆಸ್ಟಿಂಗ್ ಎಲ್ಲಿಯವರೆಗೂ ಬಂತು ಅಂತ ಕೇಳ್ತೀರ? ನಾ ಹೇಳೋದಿಲ್ಲ ;)
ಈ ಬಾರಿಯೂ ಉಬುಂಟುವಿನಲ್ಲಿ "out of box" ಕನ್ನಡ ಚೆಂದವಾಗಿ ಬರದೆ, scim-m17n ಕೂಡ ತೊಂದರೆ ಕೊಟ್ಟರೆ ನಾನು ಯಾರಿಗೂ ಅದನ್ನ ಸರಿಪಡಿಸುವುದರ ಬಗ್ಗೆ ತಿಳಿಸಬಾರದು, ಮುನ್ನುಗ್ಗಿ ಹೋಗಿ ಸಹಾಯ ಮಾಡಬಾರದು ಎಂದುಕೊಂಡಿದ್ದೇನೆ! ಗೊತ್ತಿದ್ದವರು ಸರಿಪಡಿಸಿಕೊಳ್ತಾರೆ. ಯಾಕೆ ಇವೆಲ್ಲ ಉಸಾಬರಿ, ಅಲ್ವೆ?

ತುಂಬಾ 'ಕಡಕ್' ಆಯ್ತು ಮಾರಾಯ, kannada l10nನಲ್ಲಿ ಅಡ್ಮಿನ್ ಆಗಿ ಯಾಕೋ ತಲೆಗೆ ಕಟ್ಟಿಕೊಂಡಿದೀಯ ಮತ್ತೆ? ಅಂತ ಕೇಳಿದಿರೋ? ನನ್ನ ಉತ್ತರ - ಏನು ಮಾಡೋದು ಹೇಳಿ, ಯಾಕೋ ಇತ್ತೀಚೆಗೆ ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಸರೀಗ್ ಕಾಣಿಸದಿದ್ದರೂ ನಾನು ಹೊಣೆ, ಲಿನಕ್ಸಿನಲ್ಲಿ ಯಾರಿಗಾದರೂ ತೊಂದರೆಯಾಗಿ ಕನ್ನಡ ಸರಿಯಾಗಿ ಬರದಿದ್ದರೆ ನಾನು ಹೊಣೆ ಎಂಬಂತೆ ಕೆಲವರು ಆಡಲು ಪ್ರಾರಂಭಿಸಿದ್ದಾರಲ್ಲ, ಅದಕ್ಕೆ!.
ಅಲ್ಲಾ ಮಾರಾಯ್ರೇ, ಸಮುದಾಯಗಳು ನಡೆಸುವ ಚಟುವಟಿಕೆಗಳಿಗೆ ಯಾರೋ ಒಬ್ಬರನ್ನ ಹೊಣೆ ಮಾಡಿ ನುಣುಚಿಕೊಳ್ಳೋದು ಎಂತಹ ತಲೆಪ್ರತಿಷ್ಠೆ ಕೆಲಸವಿರಬಹುದು, ಹೇಳಿ? "ಇವ ಎಲ್ಲರಿಗೂ ಮಿಸ್ಲೀಡ್ ಮಾಡ್ತಾ ಇದ್ದಾನೆ, ಇವ ಹೇಳಿದ್ದನ್ನು ಮಾಡಿದ್ರೂ ನಮ್ಮ ಕಂಪ್ಯೂಟರಿನಲ್ಲಿ ಕನ್ನಡವೇ ಬರ್ತಿಲ್ಲ" ಅನ್ನೋದು ಎಷ್ಟು ಸರಿ? ಕೆಲವೊಮ್ಮೆ (ಅದೂ ಲಿನಕ್ಸಿನಲ್ಲಿ) ಏನೆಲ್ಲಾ ಊಹಿಸಲೂ‌ ಕೂಡ ಸಾಧ್ಯವಾಗದಂತಹ ಕೆಲವು ಪ್ರಾಬ್ಲಮ್ಮುಗಳಿರುತ್ವೆ. ಹೆಚ್ಚೆಂದರೆ ಮಾಮೂಲಾಗಿ ಇರುವ ತೊಂದರೆಗಳನ್ನು ಸರಿಪಡಿಸುವ ಬಗ್ಗೆ ಬಳಕೆದಾರರಿಗೆ ತಿಳಿಸಬಹುದು. ಎಲ್ಲದಕ್ಕೂ ಸಪೋರ್ಟ್ ಮಾಡಲಿಕ್ಕಾಗತ್ಯೆ?
ಮೊದಲೇ ಸಿಗುತ್ತಿರುವ ಸಹಾಯ ಮುಫ್ತು! ಮುಫ್ತು ಪಡೆದೂ ಧಿಮಾಕು ತೋರಿಸಿದರೆ ಹೇಗೆ? :P

*******

ಇತ್ತೀಚೆಗೆ ಕನ್ನಡ ವಿಕಿಪೀಡಿಯ ಬಗ್ಗೆ ಹಾಗೂ ಅದರ ಜೊತೆ ನನ್ನ ಹೆಸರೂ (ನನಗೆ ಬೇಕಿಲ್ಲದಿದ್ದರೂ) ಪತ್ರಿಕೆಗಳಲ್ಲಿ ಬಂದದ್ದು ಕೆಲವರಿಗೆ ಸಹ್ಯವಾಗಲಿಲ್ಲವೆಂದು ಕಾಣುತ್ತದೆ. ಅಂಥವರು ವಿಕಿಪೀಡಿಯಕ್ಕೆ ಲಗ್ಗೆ ಇಟ್ಟು [:http://mail.wikipedia.org/pipermail/wikikn-l/2006-April/000176.html|ಸುಖಸುಮ್ಮನೆ ಇಲ್ಲದ ಸಮಸ್ಯೆಗಳನ್ನ ಸೃಷ್ಟಿಸಿ ಸಿಕ್ಕವರ ಮೇಲೆಲ್ಲ ಹೌಹಾರಿ] ತೊಂದರೆ ಕೊಡುವುದಕ್ಕೆ ಮುಂದಾಗಿರುವುದು ಖೇದದ ವಿಷಯ, ಹಾಗೂ ಹಾಗೆ ಮಾಡುವವರಿಗೆ ನಾಚಿಕೆಗೇಡು ಆಗಬೇಕಾದಂತಹ ವಿಷಯ.
ವಿಕಿಪೀಡಿಯದಲ್ಲಿ ನಡೆಯುತ್ತಿರುವ ಕೆಲಸದಲ್ಲಿ ಭಾಗವಹಿಸುವುದಿರಲಿ, ಅದಕ್ಕೆ ಧಕ್ಕೆ ಒಡ್ಡುವ ಸಲುವಾಗಿಯೇ‌ ಕೆಲವರು ಬರುವರೆಂಬುದು ಎಣಿಸಿರಲಿಲ್ಲ, ಆದರೆ ನಿಜವಾಗಿದೆ.

Rating
No votes yet

Comments