ರೀಲು
ಮೋನಿ ಮತ್ತು ಚೆಡ್ಡಿ ಸತೀಶ ಇಬ್ಬರೂ ಜಿಗ್ರಿ ದೋಸ್ತಿಗಳು. ಇಬ್ಬರ ಪತ್ನಿಯರೂ ಬಜಾರಿಯರು. ಅದರೇನು ಪ್ರೀತಿಸಿ ಮದುವೆಯಾಗಿದ್ದರಲ್ಲ, ಭೇಟಿಯಾದಾಗಲೆಲ್ಲ ತಮ್ಮ ತಮ್ಮ ಹೆಂಡತಿಯರನ್ನು ಹೊಗಳಿಕೊಳ್ಳುವುದೇ ಕೆಲಸವಾಗಿತ್ತು. ಒಮ್ಮೆ ಇಬ್ಬರೂ ತೃಪ್ತಿ ರೆಸ್ಟೋರೆಂಟಿನಲ್ಲಿ S. K. C. ಹೊಡೆಯುತ್ತಾ ತಮ್ಮ ತಮ್ಮ ಪತ್ನಿಯರನ್ನು ಹೊಗಳಿಕೊಳ್ಳುತ್ತಿದ್ದರು...ಚಡ್ಡಿ ಸತೀಶ..
“ನನ್ನ ಹೆಂಡತಿ ಯಾವುದನ್ನೂ ವೇಸ್ಟ್ ಮಾಡುವುದಿಲ್ಲ ಗೊತ್ತಾ..? ಮೊನ್ನೆ ಅವಳು ತನ್ನ ಹಳೆಯ ಡ್ರೆಸ್ ಒಂದರಿಂದ ನನಗೆ ನಾಲ್ಕು ನೆಕ್ ಟೈಗಳನ್ನು ಹೊಲಿದಳು.....?” ಎಂದು ರೀಲು ಬಿಟ್ಟ. ಮೋನಿ ತಾನೇನು ಕಡಿಮೆ ಎಂದು ..”ಅಯ್ಯೋ... ಅದರಲ್ಲೇನು ಮಹಾ ವಿಶೇಷ ... ನನ್ನ ಹೆಂಡತಿ ನನ್ನ ಹಳೆಯ ನೆಕ್ ಟೈನಿಂದ ಅವಳಿಗೆ ಒಂದು ಡ್ರೆಸ್ ಹೊಲಿದುಕೊಂಡಳು...” ಎಂದು ಇನ್ನೂ ಉದ್ದದ ರೀಲು ಬಿಟ್ಟ. ಚಡ್ಡಿ ಸತೀಶ ‘....ಅಂ....!” ಎಂದು ತೆರೆದ ಬಾಯಿ ಮುಚ್ಚಲಿಲ್ಲ.
Rating