...ರೀ ಗೆ ಹೇಳ್ತೀನಿ !

...ರೀ ಗೆ ಹೇಳ್ತೀನಿ !

ಮೋನಿಯ ಪುಟಾಣಿ ಮಗ ಮೋಪ ತುಂಬಾ ತುಂಟ... ಬಹಳ ತರಲೆ ಮಾಡುತ್ತಿದ್ದ.  ಪದ್ದಿ ಅವನ ತುಂಟಾಟವನ್ನು ತಡೆಯುವುದಕ್ಕೆ ಬಹಳ ಸಾಹಸ ಪಡುತ್ತಿದ್ದಳು.  ಅಕ್ಕ ಪಕ್ಕದ ಮನೆಗಳ ಆಂಟಿಯರು ತರುತ್ತಿದ್ದ ದೂರುಗಳಿಂದ ಪದ್ದಿ ಕಂಗಾಲಾಗುತ್ತಿದ್ದಳು.  ಅವನು ತರಲೆ ಮಾಡಿದಾಗಲೆಲ್ಲ “....ಕತ್ತೆ! ತರಲೆ ಮಾಡ್ತೀಯ?... ಇರು, ಅಪ್ಪನಿಗೆ ಹೇಳ್ತೀನಿ, ...ಮಾಡಿಸ್ತೀನಿ ಇರು ನಿನಗೆ...” ಎಂದೆಲ್ಲ ಹೆದರಿಸುತ್ತಿದ್ದಳು.  ಮೋಪ ಎಷ್ಟಾದರೂ ಪದ್ದಿಯ ಮಗನಲ್ಲವೇ...? ಅಷ್ಟು ಚಿಕ್ಕ ವಯಸ್ಸಿಗೇ ಚೆನ್ನಾಗಿ ನಟನೆ ಮಾಡುತ್ತಿದ್ದ.  ಒಳಗೊಳಗೆ ಹೆದರಿಕೆಯಿದ್ದರೂ, ಮೇಲೆ ಮಾತ್ರ ಧೈರ್ಯಸ್ಥನಂತೆ ಸೋಗು ಹಾಕುತ್ತಿದ್ದ.

ಒಮ್ಮೆ, ಪದ್ದಿ ಷೋ ಕೇಸಿನ ಧೂಳನ್ನು ತೆಗೆಯುತ್ತಿದ್ದಳು.  ಅದು ಹೇಗೋ ಅವಳ ಕೈ ತಪ್ಪಿ ಸುಂದರವಾದುದೊಂದು ಗಾಜಿನ ಅಲಂಕಾರಿಕ ಬೊಂಬೆ ಕೆಳಗೆ ಬಿದ್ದು ಒಡೆದು ಹೋಯಿತು.  ಅದೆಲ್ಲಿದ್ದನೋ ಮೋಪ ಓಡೋಡಿ ಬಂದು “ಮಮ್ಮೀ ಗೊಂಬೆನ  ಒಡೆದು ಹಾಕಿದೆಯಾ...? ಇರು ನಿನ್ನ ‘ರೀ’ ಗೆ ಹೇಳ್ತೀನಿ...  ನಿನಗೆ ಮಾಡಿಸ್ತೀನಿ...!”  ಎನ್ನಬೇಕೇ? ಅಪ್ಪನನ್ನು ಅವಳು ‘ರೀ’ ಎಂದು ಕರೆಯುತ್ತಿದ್ದುದನ್ನು ಕೇಳಿಸಿಕೊಂಡಿದ್ದ ಮೋಪ ಹಾಗೆ ಹೇಳಿದ್ದ.   ಪದ್ದಿಗೆ ಅವನ ಹಾವ  ಭಾವ ಮುದ್ದು ಮುಖ ಕಂಡು ಮತ್ತು  ಅವನ ಮಾತು ಕೇಳಿ ಮುದ್ದು ಉಕ್ಕಿ ಬಂದು ಮಗನನ್ನು ಮುದ್ದಾಡಿದಳು.

Rating
No votes yet

Comments

Submitted by shejwadkar Thu, 03/21/2013 - 23:37

ಶೊಭಾಜಿ...
ಮಕ್ಕಳ ಮನಸ್ಸೆ ಹಾಗೆ, ಸ್ಪಂಜು ಇದ್ದಂತೆ ಯಾವ ನೀರು ಸಿಕ್ರೂ ಎಳೆದುಕೊಂಡು ಬಿಡುತ್ತೆ.
ದೊಡ್ಡವರ ನಕಲು ಮಾಡುತ್ತ ಮಕ್ಕಳು ಬೆಳೀತಾರೆ.ಅವೇ ತುಂಟಾಟ ನಮಗೆ ಖುಷಿ ಕೊಡುತೆ,
ಜೊತೆಗೆ ನಮ್ಮ ನಡತೆ ಕೂಡ ಶುಧ್ಧವಿರಬೆಕು

Submitted by Shobha Kaduvalli Fri, 03/22/2013 - 09:39

In reply to by shejwadkar

ಶೆಜ್ವಾಡ್ಕರ್ ರವರೆ.... ನೀವ‌oದದ್ದು ನಿಜ‌... ಮಕ್ಕಳು ದೊಡ್ಡವರನ್ನು ನಕಲು ಮಾಡುತ್ತಾ ಬೆಳೆಯುತ್ತಾರೆ. ನಾವು ಸರಿಯಾದ‌ ದಾರಿಯಲ್ಲಿ ನಡೆದರೆ ಅವೂ ಸಹ‌ ಒಳ್ಳೆಯ‌ ಗುಣ‌ ನಡತೆಗಳನ್ನು ಕಲಿಯುತ್ತವೆ...... ಪ್ರತಿಕ್ರಿಯೆಗೆ ಧನ್ಯವಾದಗಳು.