ರೀ-ಸೆಷನ್
’ಬೋಳಿಮಗ, ಮ್ಯಾನೆಜರ್’
’ಬೋ..’ ಶಬ್ದ ಕೇಳ್ತಿದಂಗೆ ನಾನು ಹಿಂತಿರುಗಿ ನೋಡ್ದೆ.
ವಿನಯ್ ಬಾಯಿಂದ ಈ ಮಾತು ಯಾವತ್ತು ಕೇಳಿರ್ಲಿಲ್ಲ. ಅವನು ತಮಾಷೆಗೆ ಹೇಳ್ತಿದಾನೆ ಅಂತ ಅನ್ನೋ ಹಾಗೂ ಇರ್ಲಿಲ್ಲ. ತುಂಬಾನೆ ಅಪ್ಸೆಟ್ ಆಗಿರೊ ಹಾಗೆ ಕಾಣಿಸ್ತಾ ಇತ್ತು.
’ಬಾ, ಟೀ ಕುಡ್ಕೊಂಡ್ ಬರೋಣ’ ಅಂತ ಅವನನ್ನ ಹೊರಗಡೆ ಕರ್ಕೊಂಡ್ ಬಂದೆ. ೨ ಕಪ್ ಟೀ ಆರ್ಡರ್ ಮಾಡಿ ವಿನಯ್ ಸಿಗರೇಟ್ ಹೊತ್ತಿಸಿದ.
’ಎನಾಯ್ತು’ ಅಂತ ಕೇಳ್ದೆ.
’ಮೂರು ವರ್ಷದಿಂದ ಇವನ ಜೊತೆ ಕೆಲ್ಸ ಮಾಡ್ತಾ ಇದಿನಿ. ಇವತ್ತು ಗೊತ್ತಾಯ್ತಾ ಇವ್ನಿಗೆ ನಾನ್ ಒಬ್ಬ ಬಿಲೊ ಯವರೆಜ್ ಇಂಜಿನಿಯರ್ ಅಂತ? ಅಸಲಿಗೆ ವಿಷಯ ಏನು ಅಂದ್ರೆ ಇವತ್ತು ಸಾಯಂಕಾಲದೊಳಗೆ ೫೦ ಜನರನ್ನ ಮನೆಗೆ ಕಳಿಸ್ಬೇಕು ಅಂತ ಕಂಪನಿ ತೀರ್ಮಾನ ಮಾಡಿದೆ. ಇರೊದನ್ನ ಒಪ್ಕೊಳ್ಳೊದು ಬಿಟ್ಟು, ನನ್ನ ಮೇಲೆ ಗೂಬೆ ಕೂರ್ಸಕ್ಕೆ ನೊಡ್ತಾ ಇದಾನೆ.’
ಬೋಳಿಮಕ್ಳು ಅಮೆರಿಕದವ್ರು ಹುಟ್ಟ್ಸಿದ ರಿಸೆಶನ್ ಶುರು ಆಗಿ ಎಸ್ಟು ದಿನ ಆಗೋಯ್ತು. ಎಲ್ರೂ ಯಾವಾಗ ತಮ್ಮ ಕೆಲ್ಸ ಕಳಚಿ ಹೊಗುತ್ತೊ ಅಂತ, ಅಂಗಿ ಹರ್ಕೊಳಕೆ ಶುರುನೂ ಆಗೊಯ್ತು. ಆದ್ರೆ ಇದೆಲ್ಲ ನಮ್ಮ ಕಂಪನೀಲೂ ಆಗುತ್ತೆ, ನನ್ನ ಪಕ್ಕದಲ್ಲೆ ಕೂತ್ಕೊಳ್ಳೊ ವಿನಯ್ ಜತೆ ಆಗುತ್ತೆ ಅಂತ ನಾನಿನ್ನು [ಯಾಕೊ ಗೊತ್ತಿಲ್ಲ] ಎಣಿಸಿರ್ಲಿಲ್ಲ. ನಿಜ ಹೇಳ್ಬೇಕು ಅಂದ್ರೆ ವಿನಯ ಟೀಮ್ ಅಲ್ಲಿ ಅತೀ ಬುದ್ಧಿವಂತ. ಅದಕ್ಕೆ ಅಂತಾನೆ ೩ ವರ್ಷದ ಹಿಂದೆ ಅವ್ನಿಗೆ ೧೦೦% ಸ್ಯಾಲರಿ ಹೈಕ್ ಕೊಟ್ಟು ಸೇರಿಸ್ಕೊಂಡಿದ್ರು. "those were the best days of our industry"
.. ಅವನ ಬುದ್ಧಿವಂತಿಕೆ ಅವ್ನಿಗೇ ಮುಳುವಾಯ್ತು. ಇದ್ದದನ್ನ ಇದ್ದಂಗೆ ಹೇಳೊ ವಿನಯ್ ಮ್ಯಾನೆಜರ್ ಮಾಡ್ತಿರೋದು ತಪ್ಪು ಅಂತ ಎಸ್ಟೊ ಮೀಟಿಂಗ್ಸ್ ಗಳಲ್ಲಿ ನೇರವಾಗಿ, ಪ್ರೂವ್ ಮಾಡಿ ತೋರ್ಸಿದ್ದ. ಇಗ ಅದರ ಸೇಡು ತೀರಿಸಿಕೊಳ್ಳೋ ಸರದಿ ಮ್ಯಾನೆಜರ್ದು. ಅದು ಅಲ್ದೆ ಇಡೀ ಟೀಮ್ ಅಲ್ಲಿ, ವಿನಯ್ ಅತೀ ದುಬಾರಿ ರಿಸೊರ್ಸ ಬೇರೆ.
ವಿನಯ್ ಮುಖ ನೋಡಿದೆ. ಅವ್ನು ಏನು ಯೋಚ್ನೆ ಮಾಡ್ತಿದಾನೆ ಅಂತ ನಂಗೆ ಗೊತ್ತಿತ್ತು. ೧ ಲಕ್ಷ ಫೀ ಕೊಟ್ಟು ನರ್ಸರಿ ಗೆ ಹೋಗೊ ಮಗು.. ದೊಡ್ಡ ಮೊತ್ತದ EMI ಗಳು,ಕಾರು, ಒಂದೇ,ಏರಡೇ, ಇದಕ್ಕೆಲ್ಲ ಎಲ್ಲಿಂದ ದುಡ್ಡು ತರೋದು ಅಂತ ಯೋಚ್ನೆ ಮಾಡಿ ಹುಚ್ಚ ಆಗದೆ ಇರಲ್ಲ ಅವ್ನು.
’ಸೊ ಎನಂದ Mr. Pinch in?’
ನಮ್ಮ ಮ್ಯಾನಜರ್ ಗೆ ನಾವಿಟ್ಟ ಹೆಸ್ರದು, ’Pinch in'. ಪ್ರತೀ ಮೀಟಿಂಗ್ ಅಲ್ಲು "We need to pitch in, wee need to pitch in" ಅಂತ ಹೋಯ್ಕೊಳ್ತಿದ್ದ, ಅದಕ್ಕೆ ಅವ್ನಿಗೆ .. "great painful pinch" ಅಂತ ನಾಮಕರಣ ಮಾಡಿದ್ವಿ.
’ಎನಂತಾನೆ ಅವ್ನ ಕುರ್ಚಿ ಉಳಿಬೇಕು .. ಸೊ ಬೇರೆ ಎಸ್ಟು ಕುರ್ಚಿಗಳು ಖಾಲಿ ಮಾಡ್ಸೊಕು ರೆಡಿ ಅವ್ನು’. ನನಗೆ ಸಡನ್ನಾಗಿ, ಕುರ್ಚಿ ಅಂತಿದಂಗೆ ರಾಜಕಾರಣಿಗಳ ನೆನಪಾಗೊದಕ್ಕೆ ಶುರು ಆಯ್ತು. ಯಾವ ಮುಖ ಇಟ್ಕೊಂಡ್ ನಾವು ಅವ್ರನ್ನ ಬಯ್ತಿವಿ ಅಂತ ನಂಗೆ ಅನ್ಸಕ್ಕೆ ಶುರು ಆಯ್ತು. ನಾವು ಮಾಡದೆ ಇರೊವಂತದು ಅವ್ರೆನು ಮಾಡಲ್ಲ. ತಮ್ಮ ಹೊಟ್ಟೆ ಹೊರೆಯೊಕ್ಕೆ ಬೇರೆಯವರ ಹೊಟ್ಟೆ ಮೇಲೆ ಒದಿಯೋರು ಎಲ್ಲ ಕಡೆನೂ ಇದ್ದೆ ಇರ್ತಾರೆ. "why blame only politicians?"
’ಶಾಂತಿ ಟಾಲ್ಕೀಸ್ ಸರ್ಕ್ಲ್ ಹತ್ರ ಒಂದು ಕಂಪನೀಲಿ ಕೇವಲ ಹತ್ತು ನಿಮಿಷದಲ್ಲಿ ಎಂಪ್ಲೊಯೀಸ್ ಅನ್ನ ಹೊರಗೆ ಹಾಕಿದ್ರಂತೆ .. ಎಟ್ಲೀಸ್ಟ್ ನಮ್ಮ ಕಂಪನೀಲಿ ಸಾಯಂಕಾಲದವರೆಗಾದ್ರು ಟೈಮ್ ಕೊಟ್ಟಿದಾರೆ’ ಅಂತೆನೊ ಗೊಳ್ಳು ಸಮಾಧಾನ ಹೇಳೊಕೆ ಹೋದೆ ವಿನಯ್ ಗೆ .. ಅವನೇನೂ ಉತ್ತರ ಕೊಡ್ಲಿಲ್ಲ.
ಸ್ಮಶಾನ ಮೌನದೊಂದಿಗೆ ಟೀ ಕುಡಿದು ವಾಪಸ್ ಬರೊವಾಗ ಸಂಜಯ್, ಮಾಧವ್ ಎದುರಾದ್ರು. ಇವ್ರಿಬ್ರುದು ಹಳೆ ಚಾಳಿ.MG ರೊಡ್ ಅಲ್ಲಿ ಆಫೀಸ್ ಆದ್ರಿಂದ ಪ್ರತೀ ಒಂದೆರಡು ಗಂಟೆಗೊಮ್ಮೆ ಹೊರಗ್ ಹೋಗಿ ಕಣ್ಣು ತಂಪು ಮಾಡ್ಕೊಂಡ್ಡು ಬರೊದೆ ಇವ್ರ ಕೆಲ್ಸ.
ಇಲ್ಲೆನು ಆಗಿದೆ ಅಂತ ಅವ್ರಿಗೆ ಖಂಡಿತ ಗೊತ್ತಿಲ್ಲ ಅಂತ ಅವ್ರಿಬ್ರು ಹಾರಾಡ್ಕೊಂಡು ಬರ್ತಿರೋದು ನೊಡಿದ್ರೆ ಗೊತ್ತಾಗ್ತಿತ್ತು. ಇವ್ರು ಪ್ರತಿಗಂಟೆಗೊಮ್ಮೆ ಹೊರ್ಗೊಗೋದು ನೋಡಿ ಮ್ಯಾನಜರ್ ಗೆ ಉರ್ದು ಹೋಗೊದು. ಕೇಳಿದ್ರೆ "inspiration" ಹುಡಕಕ್ಕೆ ಹೋಗಿದ್ವಿ ಅಂತ ತೇಲಿಸಿ ಬಿಡ್ತಿದ್ದ ಸಂಜಯ್. ನಾವು ಬರಿಯೊ ಕೋಡ್ ಒಂದು ಸುಂದರ ಕಾವ್ಯದ ಥರ ನೀಟಾಗಿ ಕ್ಲೀನಾಗಿ ಇರ್ಬೇಕು ಅನ್ನೊದು ನಮ್ಮ ವಿಪಿ ಯ ಹಳೆ ಪುರಾಣ. ಅದಕ್ಕೆ ಕವಿತೆ ಬರಿಯೊಕೆ ಸ್ಪೂರ್ತಿ ಬೇಕು ಅಂತ ಇವ್ರುಗಳು ತಮಾಷೆ ಮಾಡೋದು.
’ಸಿಕ್ತಾ ಸ್ಪೂರ್ಥಿ ?’
’ಇಲ್ಲ ಮಗ, ಇಸ್ಟ ಜನರಲ್ಲಿ ಸ್ಪೂರ್ಥಿ ಯಾರು ಅಂತಾನೆ ಗೊತ್ತಾಗ್ತಿಲ್ಲ.’ ನಾನು, ವಿನಯ್ ನಗಲ್ಲಿಲ್ಲ.
ಸಂಜಯ್ ಈಗ ತಾನೆ ಕಾಲ್ಲೇಜ್ ಇಂದ ಬಂದಿರೊ ಹುಡುಗ. ಇನ್ನು ಅದೆ ಮೂಡ್ ಅಲ್ಲಿದಾನೆ. ಆದ್ರೂ ಅವನ ಜೊಕ್ ಗಳು ನಮ್ಗೂ ಕೂಡ ಒಳ್ಳೆ ಸ್ಟ್ರೆಸ್-ಬಸ್ಟರ್ ಆಗಿ ವರ್ಕ್ ಆಗ್ತಿದ್ರಿಂದ ನಾವು ಅವ್ನಿಗೆ ಸಪ್ಪೊರ್ಟ್ ಮಾಡ್ತ ಇದ್ವಿ. ಇವತ್ತು ಯಾರೂ ನಗದೆ ಇರೊದು ನೊಡಿ.. ಅವ್ನಿಗೆ ಏನೊ ಒಂಥರ ಆಯ್ತು.
ಏನೊ ಆಗಿದೆ ಅಂತ ಮಾಧವ್ ಗೆ ಕ್ಲೂ ಸಿಕ್ಕಿರ್ಬೇಕು. ’ಎನಾಯ್ತು’ ಅಂದ.. ನಾವ್ಯರು ಉತ್ತರ ಕೊಡ್ಲಿಲ್ಲ. ಯಾಕಂದ್ರೆ ವಿನಯ್ ಜತೆ ಅವಂದು ಹೆಸ್ರಿತ್ತು, ಲಿಸ್ಟ್ ಅಲ್ಲಿ. ವಿನಯ್ ಈ ವಿಷಯಾನ ಮಾತು ಮಾತಲ್ಲಿ ಮ್ಯಾನೆಜರ್ ಬಾಯಿಂದ ಹೊರಗ್ ಹಾಕಿಸಿದ್ದ.
’ನನ್ನೆನಾದ್ರು ಲೆ-ಆಫ್ ಮಾಡಿದ್ರೆ ಕೋರ್ಟ್ ಗೆ ಹೋಗ್ತಿನಿ’ ಅಂತಂದ ಮಾಧವ. ಇದನ್ನೆ ನೊಡಿ ಪರಿಸ್ಥಿತಿ ಅನ್ನೋದು .. ನಾವ್ಯಾರು ಆ ವಿಷಯ ಹೇಳೆ ಇಲ್ಲ ಅವ್ನಿಗೆ, ನಮ್ಮ ಮುಖಗಳ ನೊಡಿ ಅವ್ನಿಗೆ ಗೊತ್ತಾಗೊಯ್ತು.
’ಎನ್ ಮಾಡ್ತಿಯ ಕೋರ್ಟ್ ಗೆ ಹೊಗಿ? ನಿನ್ನ ಆಫರ್ ಲೆಟರ್ ಅಲ್ಲಿ ನೋಡು .. ಅವ್ರು ನಿನ್ನನ್ನ ಯಾವಾಗ ಬೇಕಾದ್ರು ತೆಗೆದು ಹಾಕಬಹುದು, ನೀನು ಕಂಪನಿ ಬಿಡ್ಬೆಕಾದ್ರೆ ಒಂದು ತಿಂಗಳ ನೋಟಿಸ್ ಕೊಡ್ಬೇಕು ಅವ್ರಿಗೆ ಅಂತಿದೆ.’
’ಒಪ್ಕೊತಿನಿ. ಆದ್ರೆ ಮೂರು ವರ್ಷದಿಂದಾನು ನೆಟ್-ಪ್ರಾಫಿಟ್ ಎಸ್ಟು ಇತ್ತೊ ಈ ವರ್ಷದಲ್ಲೂ ಅಸ್ಟೆ ಅದೆ, ಮತ್ಯಾಕೆ ಲೆ-ಆಫ್ ?’
’ಮೂರು ವರ್ಷದ ಹಿಂದೆ ಯಾವ ಕಂಪನೀನು ಲೆ-ಆಫ್ ಮಾಡ್ತಾ ಇರ್ಲಿಲ್ಲ; ಆವಾಗ ನಮ್ಮ ಕಂಪನಿ ಒಂದೆ ಲೆ-ಆಫ್ ಮಾಡಿದಿದ್ರೆ, ಕೆಟ್ಟ ಹೆಸ್ರು, ಷೇರ್ ಮಾರ್ಕೆಟ್ ಅಲ್ಲಿ ಷೇರ್ಸ್ ಎಲ್ಲ ಬಿದ್ದೊಗ್ತಿದ್ವು. ಈಗ ಇವ್ರಿಗೆ ಒಳ್ಳೆ ಅವಕಾಶ. ೩ ವರ್ಷದ ಎಲ್ಲ ನಷ್ಟ ಇಗ ಸರಿಪಡಿಸ್ಕೋತಾರೆ.’
’ನಮ್ದೆ ತಪ್ಪು ಬಿಡು, ೩,೫೦೦ ಜನ್ರಿರೊ ಕಂಪನೀಗೆ ಬರಿ ಒಂದೆರಡು ಕೋಟಿ ನೆಟ್-ಪ್ರಾಫಿಟ್ ಅಂದಾಗ್ಲೆ ಯೋಚ್ನೆ ಮಾಡ್ಬೇಕಿತ್ತು, ಇವ್ರ ಹತ್ರ ಹೊಟ್ಟೆ ಬಟ್ಟೆ ಗೆ ಮಾತ್ರ ಕಾಸಿದೆ, ನಾಳೆಗೆ ನಾಡಿದ್ದಿಗೆ ಬೇಕಾಗವಸ್ಟು ಇಲ್ಲ ಅಂತ. ಹೋದ್ರೆ ಹೋಗ್ಲಿ ನಮ್ಗೇನು,ನನ್ನ ಸಂಬಳ ಡಬ್ಲ್ ಆಯ್ತಲ್ಲ ಅಂತ ಬಂದು ಸೇರಿಕೊಂಡ್ವಿ.. ನಮ್ದೆ ತಪ್ಪು..’
ಮಾಧವ್ ಆದ್ರೊ ಬ್ಯಾಚುಲರ್, ವಿನಯ್ ದು ಏನ್ ಕಥೆ ಅಂತಾನೆ ನಾನಿನ್ನು ಯೋಚ್ನೆ ಮಾಡ್ತಿದ್ದೆ. ಸಂಜಯ್, ಜುರಾಸ್ಸಿಕ್ ಪಾರ್ಕ್ ಮೂವಿ ನೋಡೊವಾಗ, ಸ್ಚ್ರೀನ್ ಇಂದ ಡೈನಾಸೊರಗಳು ಹೊರಗಡೆ ಬಂದಂಗೆ ಹೆದ್ರಕೊಂಡು ಕೇಳ್ತಾ ಇದ್ದ.
’ರೀಟಾ ಮೊನ್ನೆ ತಾನೆ ನಮ್ಮ ಕಂಪನಿ ಬಿಟ್ಟು ಇನ್ನೊಂದ ಕಂಪನಿ ಸೇರಿದ್ಳಲ, ಅವಳ ಟೀಮ್ ಅಲ್ಲಿ ವೆಕನ್ಸೀಸ್ ಇದಿಯ ಕೇಳು’
’ಲೊ ಆನ್ಸೈಟ್ ಕಳ್ಸ್ತಿವಿ ಅಂತ ಹೇಳಿ ಅವಳ್ಳನ್ನ ಕರ್ಕೊಂಡು, ಇಗ ಡೆಲ್ಲಿ ಗೆ ಟ್ರಾನ್ಸ್ಫರ್ ಆಗು, ಇಲ್ಲ ಕೆಲ್ಸ ಬಿಡು ಅಂತಿದಾರಂತೆ.’
ಬರೊದನ್ನ ಅನುಭವಿಸದೆ ಬೇರೆ ದಾರಿ ಇಲ್ಲ ಅಂತ ಎಲ್ರು ನಿಟ್ಟುಸಿರು ಬಿಟ್ಟು, ನಮ್ಮ ನಮ್ಮ ಕಂಪ್ಯುಟರ್ ಮುಂದೆ ಕೂತ್ಕೊಂಡು ಕುಟ್ಟೊಕೆ ಶುರು ಮಾಡಿದ್ವಿ..
ಮಧ್ಯಾನ ೧ ಗಂಟೆ, ಹೊಟ್ಟೆ ಚುರುಗುಟ್ಟೊಕೆ ಶುರು ಆದಾಗ್ಲೆ, ಎಲ್ರನ್ನು ಕರ್ಕೊಂಡು , ಊಟಕ್ಕೆ ಹೊರಡೊಣ ಅಂತ ಎದ್ದು ನಿಂತೆ. ಸಂಜಯ ನನ್ನ ಕಡೆ ನೊಡಿ ಸ್ಮೈಲ್ ಕೊಟ್ಟ. ಬಾಯಿಲ್ಲಿ ಅಂತ ಕರೆದ.
ಈ ನನ್ನ ಮಗ ಇನ್ಯಾವದೊ ಬಾಲಿವುಡ್ ಹಿರೊಇನ್ ದು ಅರೆ-ಬರೆ ಚಿತ್ರಗಳನ್ನ ತೋರಿಸ್ತಾನೆ ಅಸ್ಟೆ ಅನಕೊಂಡು ಹೋದೆ.
ಅವನ ಜಿ-ಮೇಲ್ ಅಲ್ಲಿ ಒಂದು ಮೇಲ್ ’180 "s/w engineers required for various levels in a leading MNC" ಅಂತಿತ್ತು.
ವಿನಯ್ ಗೆ ಮೇಲ್ ಫಾರ್ವರ್ಡ್ ಮಾಡಿದೆ. ಅವನ ಕಡೆ ಇಂದ, ರಿಪ್ಲೈ ಬಂತು,
":-)"
Comments
ಉ: ರೀ-ಸೆಷನ್
In reply to ಉ: ರೀ-ಸೆಷನ್ by rashmi_pai
ಉ: ರೀ-ಸೆಷನ್